ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮೂರು ಸ್ಪರ್ಧೆಗಳಲ್ಲಿ ಕೊಣಂದೂರು ರೋಟರಿ ಕ್ಲಬ್ ಪ್ರಥಮ.

ಶಿವಮೊಗ್ಗ: ಕೃಷಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ರೋಟರಿ ವಲಯ ಮಟ್ಟದ “ಪೂರ್ವ ಚಂದ್ರ” ಕ್ರೀಡಾಕೂಟದಲ್ಲಿ ಕೊಣಂದೂರು ರೋಟರಿ ಕ್ಲಬ್ ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಡಿಸೆಂಬರ್ 8 ಹಾಗೂ 9ರಂದು ಕುಂದಾಪುರದಲ್ಲಿ ನಡೆಯುವ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಕೊಣಂದೂರು ರೋಟರಿ ಕ್ಲಬ್ ಪ್ರತಿನಿಧಿಸಿದ್ದ ತಂಡವು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಕೆಟ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಸತತ ಮೂರನೇ ಬಾರಿ ಗೆಲುವು ಸಾಧಿಸಿತು. ವಾಲಿಬಾಲ್ ಹಾಗೂ ಟಗ್ ಆಫ್ ವಾರ್ ಸ್ಪರ್ಧೆಗಳಲ್ಲಿಯೂ ರೋಟರಿ ಕ್ಲಬ್ ಕೊಣಂದೂರು ಪ್ರಥಮ ಸ್ಥಾನ ಗಳಿಸಿದೆ.

ವಲಯ 10ರ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ವಲಯ 11ರ ಸಹಾಯಕ ಗವರ್ನರ್ ರವಿ ಕೊಟೋಜಿ, ಕ್ರೀಡಾ ಚೇರ‍್ಮನ್ ಗಣೇಶ ಎಂ.ಅಂಗಡಿ, ವಸಂತ ಹೋಬಳಿದಾರ್ ಅವರು ವಿಜೇತ ತಂಡಕ್ಕೆ ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಮೆಡಲ್‌ಗಳನ್ನು ನೀಡಿ ಗೌರವಿಸಿದರು. ಕ್ರಿಕೆಟ್‌ನಲ್ಲಿ ವಿಶೇಷ ಪ್ರದರ್ಶನ ನೀಡಿದ ಭಾರಧ್ವಾಜ್ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.

ರೋಟರಿ ಕ್ಲಬ್ ಕೊಣಂದೂರು ಅಧ್ಯಕ್ಷ ಮುರುಗೇಂದ್ರ ಟಿ.ಜಿ. ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ನಮ್ಮ ಸಂಸ್ಥೆ ಸೇವಾ ಚಟುವಟಿಕೆಗಳ ಜತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಮುಖ್ಯತೆ ನೀಡುತ್ತಿದೆ. ಸತತ ಮೂರನೇ ಬಾರಿಗೆ ಕ್ರಿಕೆಟ್‌ನಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಕಿಶೋರ್ ಕುಮಾರ್, ಮಲ್ಲೇಶ್, ಬಿ.ಎಸ್.ರಾಘವೇಂದ್ರ, ರತೀಶ್, ಡಾ. ಗಣೇಶ ಶೆಟ್ಟಿ, ವಿಕಾಸ್, ಸದಾಶಿವ, ಸಚಿನ್, ರಾಜನ್, ರಾಜನ್, ರಾಮಕೃಷ್ಣ, ರಾಜಶೇಖರ್, ಪುಟ್ಟಪ್ಪ, ವೀರಣ್ಣ, ಸುಧೀರ್ ಹಾಗೂ ಎಲ್ಲ ಕ್ಲಬ್ ಪದಾಧಿಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು.

Related posts

ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ 94ನೇ ವರ್ಷದ ಶ್ರೀ ವಿನಾಯಕೋತ್ಸವ: 21 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ.

ಇನ್ಮುಂದೆ ಮಕ್ಕಳು ಮುಟ್ಟಿದ್ರೆ ಓಪನ್ ಆಗಲ್ಲ ಮೊಬೈಲ್ ಫೋನ್ ಗಳು..!

ಮೌಲ್ಯಾಂಕನ ವಿಶ್ಲೇಷಣೆ ಬಿಡುಗಡೆ: ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಬೆಸ್ಟ್..!