ಕನ್ನಡಿಗರ ಪ್ರಜಾನುಡಿ
ಕೊಡಗುಜಿಲ್ಲೆನ್ಯೂಸ್ಪ್ರಧಾನ ಸುದ್ದಿಮುಖ್ಯಾಂಶಗಳು

ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಗೆ 7 ನೇ ಸ್ಥಾನ

ಕೊಡಗು: ಹಸಿರು ಕಾನನಗಳಿಂದ ಕಣ್ಣು ಕೋರೈಸುವ ಮಲೆ ಪರ್ವತ, ಧುಮ್ಮಿಕ್ಕಿ ಹರಿಯುವ ಜಲಧಾರೆ. ಚಳಿ, ಮಳೆಗಾಲ ಆರಂಭವಾಯಿತ್ತೆಂದರೆ ಹಿಮದ ರಾಶಿಯನ್ನೇ ಹೊದ್ದು ಮಲಗುವ ಬೆಟ್ಟಗುಡ್ಡ. ಇದು ಪ್ರಾಕೃತಿಕ ಸಹಜ ಸೌಂದರ್ಯದಿಂದ ಲಕ್ಷಾಂತರ ಪ್ರವಾಸಿಗರ ಸೆಳೆಯುವ ಪ್ರವಾಸಿ ಜಿಲ್ಲೆ ಕೊಡಗಿನ ಸೌಂದರ್ಯ. ಹೌದು ವಿಶ್ವಮಟ್ಟದಲ್ಲಿ  ಕೊಡಗಿನ ಪ್ರವಾಸಿ ತಾಣಗಳು ಗುರುತ್ತಿಸಿಕೊಂಡಿದ್ದು, 2023 ನೇ ಸಾಲಿನಲ್ಲಿ ಭಾರತೀಯರು ಹುಡುಕಾಡಿರುವ ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಇದು ಕೊಡಗಿನ ಪ್ರವಾಸೋದ್ಯಮಿಗಳಲ್ಲಿ ಖುಷಿ ಮೂಡುವಂತೆ ಮಾಡಿದೆ. ವಿಶ್ವದ ಟಾಪ್ 10 ಪ್ರವಾಸಿ ತಾಣಗಳನ್ನು ಹುಡುಕಾಡಿರುವುದರಲ್ಲಿ ಕೊಡಗು ಜಿಲ್ಲೆ 7 ನೇ ಸ್ಥಾನದಲ್ಲಿ ಇದೆ.

ವಿಶ್ವದ 10 ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಭಾರತದ ಮೂರು ರಾಜ್ಯಗಳನ್ನು ಹೆಚ್ಚು ಹುಡುಕಾಡಿದ್ದಾರೆ. ಅದರಲ್ಲಿ ಗೋವಾ 2 ನೇ ಸ್ಥಾನದಲ್ಲಿ ಇದ್ದರೆ, ಕಾಶ್ಮೀರ 6 ನೇ ಸ್ಥಾನದಲ್ಲಿದೆ. ಕೊಡಗು 7 ನೇ ಸ್ಥಾನದಲ್ಲಿದೆ. ಅಂದರೆ ದೇಶದಲ್ಲಿ ಭಾರತದ ಮೂರು ರಾಜ್ಯಗಳು ವಿಶ್ವದ ಟಾಪ್ 10 ರ ಸ್ಥಾನದಲ್ಲಿ ಇವೆ.

Related posts

ಕೃಷಿಕರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ

ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ: ನನ್ನ ಪ್ರಯತ್ನ ಫಲಿಸಿಲ್ಲ – ಮಾಜಿ ಸಚಿವ ಶ್ರೀರಾಮುಲು

ಯುವ ಕಾಂಗ್ರೆಸ್ ನಿಂದ ಸ್ವಾತಂತ್ರೋತ್ಸವ ದಿನಾಚರಣೆ – ಮಹಿಳಾ ಸಬಲೀಕರಣಕ್ಕೆ ಶಕ್ತಿ ನೀಡಲು ಎಲ್ಲಾ ಬ್ಲಾಕ್ ಮಟ್ಟದಲ್ಲಿ ಮಹಿಳೆಯರಿಂದ ಧ್ವಜಾರೋಹಣ – ಜಿಲ್ಲಾಧ್ಯಕ್ಷ ಹೆಚ್‍.ಪಿ.ಗಿರೀಶ್