ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಶಿವಮೊಗ್ಗ ದಸರಾಗೆ ಸರ್ಕಾರ ಕೂಡಲೇ ಒಂದು ಕೋಟಿ ರೂ. ಅನುದಾನ ನೀಡಬೇಕು-ಕೆ.ಬಿ. ಪ್ರಸನ್ನಕುಮಾರ್ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ದಸರಾ ನಾಡಿನಲ್ಲಿಯೇ ಹೆಸರಾಗಿದ್ದು, ಸರ್ಕಾರ ಕೂಡಲೇ ಒಂದು ಕೋಟಿ ರೂ. ಅನುದಾನ ನೀಡಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಸಂಚಾಲಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಸರಾ ಹಬ್ಬ ಶಿವಮೊಗ್ಗದಲ್ಲಿ ಹಲವು ವರ್ಷಗಳಿಂದ ಅತ್ಯಂತ ಸಡಗರ, ಸಂಭ್ರಮದಿಂದ ನಡೆಯುತ್ತಿದೆ. ಎಲ್ಲಾ ಸರ್ಕಾರಗಳು ಕೂಡ ಶಿವಮೊಗ್ಗ ದಸರಾ ಹಬ್ಬಕ್ಕೆ 1ಕೋಟಿ ರೂ. ಅನುದಾನ ನೀಡುತ್ತಾ ಬಂದಿವೆ. ನಾನು ಶಾಸಕನಾಗಿದ್ದಾಗ ಕೂಡ 1 ಕೋಟಿ ಅನುದಾನ ತಂದಿದ್ದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೇವಲ 20ಲಕ್ಷ ರೂ. ನೀಡಿದೆ. ಇದು ಯಾವುದಕ್ಕೂ ಸಾಲದು. ಆದ್ದರಿಂದ ತಕ್ಷಣವೇ ಉಳಿದ 80 ಲಕ್ಷ ರೂ.ನೀಡಿ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದರು.
ಈಗಾಗಲೇ ಮಹಾನಗರ ಪಾಲಿಕೆಯಿಂದ ನಡೆಯುತ್ತಿರುವ ದಸರಾ ಹಬ್ಬ ವಿವಿಧ ಸಮಿತಿಗಳ ಸಹಭಾಗಿತ್ವದಲ್ಲಿ ಸುಂದರವಾಗಿಯೇ ನಡೆಯುತ್ತಿದೆ. ಮಹಾನಗರ ಪಾಲಿಕೆಯಿಂದ ಪೂರ್ತಿ ಹಣ ಖರ್ಚು ಮಾಡಿದರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಬೇಕು ಎಂದರು.
ಜೆಡಿಎಸ್‍ನ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್.ಡಿ. ಕುಮಾರಸ್ವಾಮಿಯವರು ಆಯ್ಕೆಯಾಗಿದ್ದಾರೆ. ಇದು ಸಂತೋಷ್ ವಿಷಯವಾಗಿದೆ. ಇದನ್ನು ಜಿಲ್ಲಾ ಜೆಡಿಎಸ್ ಸ್ವಾಗತಿಸುತ್ತದೆ. ಅವರನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಎಂದರು.
ಶಿವಮೊಗ್ಗ ಶಾಂತ ದಿಕ್ಕಿನತ್ತ ನಡೆಯುತ್ತಿದೆ. ಇಂತಹ ಸಮಯದಲ್ಲಿ ಯಾವ ರಾಜಕಾರಣಿಗಳೂ ಕೂಡ ವ್ಯತಿರಿಕ್ತ ಹೇಳಿಕೆ ನೀಡಬಾರದು. ಎಲ್ಲಾ ಧರ್ಮದ ಗೂಂಡಾಗಳ ವರ್ತನೆಯನ್ನು ಖಂಡಿಸುತ್ತಾ ಶಾಂತಿ ಕಾಪಾಡಬೇಕಾದ ಹೊಣೆ ಎಲ್ಲಾ ಪಕ್ಷಗಳದ್ದಾಗಿದೆ. ನಮ್ಮ ನಾಯಕರು ಕಡಿಮೆ ಮಾತನಾಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತ್ಯಾಗರಾಜ್, ದೀಪಕ್ ಸಿಂಗ್, ಅಬ್ದುಲ್ ವಾಜೀದ್, ಸಂಗಯ್ಯ, ರಾಮಕೃಷ್ಣ, ರಘು, ನಾಗೇಶ್, ಮಂಜಪ್ಪ ಗೌಡರು, ಸಿದ್ದಪ್ಪ, ಗೋವಿಂದಪ್ಪ, ವೆಂಕಟೇಶ್ ಮುಂತಾದವರಿದ್ದರು.

Related posts

ಬೆಳಿಗ್ಗೆ ಪೊಲಿಸ್ ಡ್ಯೂಟಿ, ರಾತ್ರಿಯಾದ್ರೆ ಕಳ್ಳತನ:  ಹೆಡ್​ ಕಾನ್ಸ್​ ಟೇಬಲ್ ಬಂಧನ.

ಎಲ್ಲ ಚಿಕ್ಕ ಮಕ್ಕಳು ಸಿಹಿ ತಿನಿಸು ತಂದ ನಂತರ ತಪ್ಪದೇ ಬ್ರಷ್ ಮಾಡಿಸಬೇಕು-ಡಾ.ವಿನಯ ಶ್ರೀನಿವಾಸ್ ಸಲಹೆ

ಶ್ರೀ ಚೌಡೇಶ್ವರಿ ದೇವಿಗೆ ಸರಸ್ವತೀ ಅಲಂಕಾರ.