ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದೇಶದಲ್ಲೇ ಅತ್ಯಂತ ಶುದ್ಧಗಾಳಿ ಇರುವ ರಾಜ್ಯ ಕರ್ನಾಟಕ: ಪಟ್ಟಿಯಲ್ಲಿ ಅಗ್ರಸ್ಥಾನ

ಬೆಂಗಳೂರು: ಮನುಷ್ಯ ಆರೋಗ್ಯವಂತನಾಗಿರಲು ಕೇವಲ ಆಹಾರ, ಕುಡಿಯುವ ನೀರು ಶುದ್ಧವಾಗಿದ್ದರೇ ಸಾಲದು. ಗಾಳಿಯೂ ಶುದ್ಧವಾಗಿರಬೇಕು. ಹೌದು ಗಾಳಿಯಿಂದಲೂ ಹಲವು ರೋಗಗಳು ಹರಡುವುದುಂಟು ಹೀಗಾಗಿ ಗಾಳಿ ಶುದ್ಧವಾಗಿದ್ದರೇ ಚೆನ್ನ.  ಈ ಮಧ್ಯೆ ಶುದ್ಧ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೇಲುಗೈ ಸಾಧಿಸಿದೆ.

ವಾಯು ಗುಣಮಟ್ಟದ ಡೇಟಾವನ್ನು ವಿಶ್ಲೇಷಿಸಿದ ರೆಸ್ಪೈರ್ ಲಿವಿಂಗ್ ಸೈನ್ಸಸ್ ಮತ್ತು ಕ್ಲೈಮೇಟ್ ಟ್ರೆಂಡ್ಸ್ನ ವರದಿಯ ಪ್ರಕಾರ, ಸ್ವಚ್ಛವಾದ ಗಾಳಿಯೊಂದಿಗೆ ಭಾರತದ ಅಗ್ರ 10 ಸ್ಥಳಗಳಲ್ಲಿ ಕರ್ನಾಟಕವು ಹೆಚ್ಚು ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ ಅಗ್ರ 10 ಸ್ಥಳಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದೆ.    ಟಾಪ್ 10ರ ಪೈಕಿ ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ.

ರೆಸ್ಪೈರರ್ ಲಿವಿಂಗ್ ಸೈನ್ಸಸ್ನ ಉಪಕ್ರಮವಾದ ರೆಸ್ಪೈರ್ ರಿಪೋರ್ಟ್ಸ್, ಎರಡು ರೀತಿಯಲ್ಲಿ ಗಾಳಿಯ ಗುಣಮಟ್ಟದ ಡೇಟಾವನ್ನು ವಿಶ್ಲೇಷಿಸುತ್ತದೆ. ಮೊದಲನೆಯದು ಸರ್ಕಾರದ PM2.5 ಡೇಟಾದಲ್ಲಿ ಎನ್ಸಿಆರ್ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ ಪಟ್ಟಿ ಮಾಡಲಾದ ಇತರ ನಗರಗಳಲ್ಲಿ ಹಿಂದಿನ ವರ್ಷಕ್ಕಿಂತ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯನ್ನು ಪತ್ತೆಹಚ್ಚಲು ಕಳೆದ ಒಂದು ವರ್ಷದ (1 ಅಕ್ಟೋಬರ್, 2022 ರಿಂದ 30 ಸೆಪ್ಟೆಂಬರ್, 2023) ಮಾಹಿತಿಯನ್ನು ಕಲೆ ಹಾಕಿ ವಿಶ್ಲೇಷಣೆ ಮಾಡಲಾಗುವುದು. ಇನ್ನೊಂದು ಕಡೆ ಚಳಿಗಾಲದಲ್ಲಿ PM2.5 ಡೇಟಾ, ಸರಿಸುಮಾರು ಅಕ್ಟೋಬರ್-ಮಾರ್ಚ್ ಮಾಲಿನ್ಯದ ಮಟ್ಟಗಳು ಹೆಚ್ಚಾದಾಗ ಅದರ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಅತ್ಯಂತ ಶುದ್ಧಗಾಳಿ ಇರುವ ನಗರವನ್ನು ಪತ್ತೆ ಮಾಡಲಾಗುತ್ತದೆ.

ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪಟ್ಟಿ:

ಮಿಜೋರಾಂನ ಐಜ್ವಾಲ್ (11 μg/m3) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು (17.6 μg/m3 ). ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ (17.7 μg/m3) ನಗರವಿದೆ. ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.

 

Related posts

ವಿದ್ಯಾರ್ಥಿ ವೇತವನ್ನು ತಕ್ಷಣವೇ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ.

50 ಕೋಟಿ ರೂ. ಅಮಿಷವೊಡ್ಡಿ ಸೆಳೆಯಲು ಬಿಜೆಪಿ ಪ್ರಯತ್ನ: ಮೈತ್ರಿ ಸರ್ಕಾರ ತೆಗೆದ ಟೀಂ ಮತ್ತೆ ಕೆಲಸ ಮಾಡುತ್ತಿದೆ-‘ಕೈ’ ಶಾಸಕ ಗಂಭೀರ ಆರೋಪ

ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರ ಅವಧಿ 5 ವರ್ಷ ವಿಸ್ತರಣೆಗೆ ಚಿಂತನೆ.