ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪ್ರವಾಸಿ ತಾಣಗಳ ಪ್ರಸಿದ್ಧ ರಾಜ್ಯ ಕರ್ನಾಟಕ-ಎಸ್.ಎಸ್.ವಾಗೇಶ್ 

ಶಿವಮೊಗ್ಗ: ಕನ್ನಡ ನಾಡಿನಲ್ಲಿ ಅನೇಕ ಪವಿತ್ರ ಸ್ಥಳಗಳಿದ್ದು, ಪ್ರವಾಸಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ನೂರಾರು ಪ್ರಸಿದ್ಧ ಸ್ಥಳಗಳಿವೆ. ಕೊಲ್ಲೂರು ಸಮೀಪ ಇರುವ ಬೆಳಕಲ್ ತೀರ್ಥ ಆಧ್ಯಾತ್ಮಿಕ ಸ್ಥಳವಾಗಿದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಅಧ್ಯಕ್ಷ ಎಸ್.ಎಸ್.ವಾಗೇಶ್ ಹೇಳಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದಿಂದ ಶಿವಮೊಗ್ಗ ನಗರದಿಂದ ಆಯೋಜಿಸಿದ್ದ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಮಳೆ, ನದಿ, ತೊರೆ, ಕಾಡು, ಪ್ರಕೃತಿಯೊಂದಿಗೆ ಬೆರೆತು ನಡೆದಾಡುವ ಚಾರಣ ಬದುಕಿನಲ್ಲಿ ವಿಶೇಷ ಅನುಭವ ನೀಡುತ್ತದೆ. ಇದರಿಂದ ಮನಸ್ಸು ಸಂತೋಷಗೊAಡು ಹೊಸ ಹುಮ್ಮಸ್ಸು ದೊರೆಯುತ್ತದೆ ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಮಾಜಿ ಉಪಾಧ್ಯಕ್ಷ ಜಿ. ವಿಜಯ ಕುಮಾರ್ ಮಾತನಾಡಿ, ಹೊಸ ಹೊಸ ಸ್ನೇಹಿತರನ್ನು ಇಂದಿನ ದಿನಗಳಲ್ಲಿ ಹೊಂದಲು ಚಾರಣ ಉತ್ತಮ ಮಾರ್ಗ. ಸ್ನೇಹದ ಸವಿ ಜೇನಿಗಿಂತ ಹೆಚ್ಚು ಅದನ್ನು ಸವಿದವರಿಗೆ ಗೊತ್ತಿರುತ್ತದೆ. ಚಾರಣದಿಂದ ದೇಹ ಮನಸ್ಸು ಸದೃಢ ಆಗುತ್ತದೆ ಎಂದು ಹೇಳಿದರು.
ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿ, ದೇಹ ದಂಡಿಸಿದರೆ ಪ್ರಕೃತಿಯ ಹಲವಾರು ವಿಸ್ಮಯ ಕಾಣಲು ಸಾಧ್ಯ. ಪ್ರತಿಯೊಬ್ಬರು ಕಾಲ ಕಾಲಕ್ಕೆ ಚಾರಣದಂತಹ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಹೆಚ್ಚು ಜನರ ಓಡನಾಟದ ಜತೆಯಲ್ಲಿ ಮನನಸ್ಸಿಗೆ ಸಂತೋಷ ಸಿಗುತ್ತದೆ ಎಂದು ತಿಳಿಸಿದರು.
ಕೆಲ ಶತಮಾನಗಳ ಹಿಂದೆ ಜಲಪಾತದ ಸಮೀಪ ಪೂರ್ವಜರು ನಿರ್ಮಿಸಿದ ದೇವಸ್ಥಾನಕ್ಕೆ ಹೋಗಿ ಬರುವ ದಾರಿ ದುರ್ಗಮ ವಾಗಿರುವುದರಿಂದ ಪ್ರತಿ ದಿನ ಹೋಗಿ ಪೂಜೆ ಮಾಡಲು ಸಾಧ್ಯವಾಗಿಲ್ಲ. ಊರಿನ ಸಮೀಪ ದೇವಸ್ಥಾನ ವರ್ಗಾಯಿಸಿ ಮೂಲ ಸ್ಥಾನಕ್ಕೆ ವರ್ಷಕ್ಕೊಮ್ಮೆ ಜಾತ್ರೆ ಮಾಡಿ ಊರಿನ ಎಲ್ಲರೂ ಭಾಗವಹಿಸುತ್ತಾರೆ. ಸಹ್ಯಾದ್ರಿ ಮಡಿಲಿನ ಬೆಟ್ಟದ ಸಾಲಿನ ತುಟ್ಟ ತುದಿಯಿಂದ ಧುಮುಕುವ ಜಲಪಾತ ನೋಡುವುದು ವಿಶೇಷ ಅನುಭವ.
ಕೊಲ್ಲೂರಿನ ಸಮೀಪಕ್ಕೆ ಆಯೋಜಿಸಿದ್ದ ಚಾರಣದಲ್ಲಿ 77 ಚಾರಣಿಗರು ಪಾಲ್ಗೊಂಡಿದ್ದರು. ನಿರ್ದೇಶಕರಾದ ಮಲ್ಲಿಕಾರ್ಜುನ ಕಾನೂರು, ಭಾರತಿ ಗುರುಪಾದಪ್ಪ, ನಾಗರಾಜ್, ಮಮತಾ, ರೇವಣ್ಣ, ಪೂರ್ಣಿಮಚಂದ್ರಶೇಖರ್, ವೇಣುಗೋಪಾಲ್, ಉಮೇಶ್, ಮುಂತಾದವರು ಇದ್ದರು.

Related posts

ಸಂಪುಟ ಪುನರ್ ರಚನೆ  ಬಗ್ಗೆ ಹೈಕಮಾಂಡ್ ತೀರ್ಮಾನ – ಸಚಿವ ದಿನೇಶ್ ಗುಂಡೂರಾವ್.

ಸರ್ವ ಪಕ್ಷದ ನಿಯೋಗ ಭೇಟಿಗೆ ಕೇಂದ್ರದಿಂದ ಉತ್ತರ ಬಂದಿಲ್ಲ-ಸಿಎಂ ಸಿದ್ದರಾಮಯ್ಯ

ಮುರುಘಾ ಶ್ರೀಗೆ ಜಾಮೀನು ಮಂಜೂರಾದ್ರೂ  ಬಿಡುಗಡೆ ಭಾಗ್ಯ ಇಲ್ಲ.