ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕಾವೇರಿ ಜಲ ವಿವಾದ: ಮಂಗಳ ವಾರದ  ಬೆಂಗಳೂರು ಬಂದ್ ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಬಲ  

ಬೆಂಗಳೂರು: ನಾಳೆ (26 ಸೆಪ್ಟಂಬರ್ , ಮಂಗಳವಾರ) ಕನ್ನಡ ಜಲ ಸಂರಕ್ಷಣಾ ಸಮಿತಿ ನೀಡಿರುವ ಬೆಂಗಳೂರು ಬಂದ್‍ ಕರೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ ನೀಡಲಿದೆ. ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿ-ಜಲ-ನೆಲದ ಪ್ರಶ್ನೆ ಬಂದಾಗ ಸದಾ ಕನ್ನಡಿಗರ ಪರವಾಗಿ  ನಿಲ್ಲಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಸುಮಾರು ತೊಂಬತ್ತು ಸಂಘಟನೆಗಳು ಬೆಂಬಲ ಘೋಷಿಸಿರುವ  ಈ ಬಂದ್ ಶಾಂತಿಯುತವಾಗಿ ನಡೆದು ಕಾವೇರಿ ಜಲ ವಿವಾದಕ್ಕೆ ತಾರ್ಕಿಕ ಅಂತ್ಯವನ್ನು ತಲುಪಲಿ ಎಂದೂ ಅವರು ಆಶಿಸಿದ್ದಾರೆ.

            ಬಂದ್‍ನ ಸಂದರ್ಭದಲ್ಲಿ ಅದರ ಲಾಭವನ್ನು ದುಷ್ಟ ಶಕ್ತಿಗಳು ಬಳಸಿ ಕೊಂಡು ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದಂತೆ ಆಡಳಿತ ವ್ಯವಸ್ಥೆ ನೋಡಿ ಕೊಳ್ಳ ಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ಆಶಿಸಿದ್ದಾರೆ. ಬಂದ್‍ನ ವೇಳೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗ ಬಾರದು ರೋಗಿಗಳಿಗೆ ವಯೋವೃದ್ಧರಿಗೆ ಪರೀಕ್ಷಾರ್ಥಿಗಳಿಗೆ ತೊಂದರೆ ಯಾಗದಂತೆ ಸಂಘಟಕರು ಗಮನ ಕೊಡ ಬೇಕು ಎಂದು ಸೂಚಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು  ಈ ಸಂದರ್ಭದಲ್ಲಿ ಸಮಸ್ಯೆಯ ಕುರಿತು ಚರ್ಚೆಗಳು ನಡೆಯ ಬೇಕೆಂದು ಅವರು ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲ ನಡೆಯುವ ರಾಮನಗರ ಜಿಲ್ಲಾ ಬಂದ್‍ಗೆ ಕೂಡ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ ನೀಡಲಿದೆ ಎಂದು ನಾಡೋಜ ಡಾ. ಮಹೇಶ  ಜೋಶಿಯವರು  ತಿಳಿಸಿ ಇದು ‘ಮಾದರಿ ಬಂದ್‍’ ಆಗಬೇಕು ಎಂದು ಆಶಿಸಿದ್ದಾರೆ.

2023ರಲ್ಲಿ ಮಳೆಯ ಕೊರತೆಯಿಂದಾಗಿ ಕಾವೇರಿ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದ ನೀರಿನ ಪ್ರಮಾಣ ಶೇಕಡಾ 50ಕ್ಕಿಂತಲೂ ಕಡಿಮೆಯಾಗಿದ್ದು . ಇದರ ಪರಿಣಾಮವಾಗಿ, ತಮಿಳುನಾಡಿಗೆ ಅದರ ಪಾಲಿನ ಕಾವೇರಿ ನದಿ ನೀರನ್ನು ಬಿಡುವ ಭರವಸೆ ನೀಡಲು ಕರ್ನಾಟಕಕ್ಕೆ ಸಾಧ್ಯವಿಲ್ಲವಾಗಿದೆ.
ತಮಿಳು ನಾಡಿನಲ್ಲಿ ಗಣನೀಯ ಪ್ರಮಾಣದ ಅಂತರ್ಜಲ ಮೂಲಗಳಿದ್ದು ಅವು ಕೃಷಿಗಾಗಿ 30  ಟಿಎಂಸಿಯಷ್ಟು ನೀರು ಒದಗಿಸಬಲ್ಲವು. ಅದಲ್ಲದೆ, ಈಶಾನ್ಯ ಮಳೆಮಾರುತದಿಂದ ತಮಿಳ್ನಾಡಿಗೆ ಉತ್ತಮವಾಗಿ ಮಳೆಯಾಗುತ್ತದೆ; ಆದರೆ ಕರ್ನಾಟಕಕ್ಕೆ ಇದು ಲಭ್ಯವಿಲ್ಲ. ಕರ್ನಾಟಕದ ಜಲಾಶಯಗಳಲ್ಲಿ  ಸೆಪ್ಟಂಬರ್  2023ರಲ್ಲಿದ್ದ ನೀರಿನ ಪರಿಮಾಣ ಕೇವಲ  52 ಟಿಎಂಸಿ. ಇದು ಮುಂದಿನ (2024ರ) ಬೇಸಗೆಯ ವರೆಗೆ ಕುಡಿಯುವ ನೀರು ಮತ್ತು ಕೃಷಿಕರ ಬೆಳೆಗಳಿಗೆ ನೀರಾವರಿ ಒದಗಿಸಲಿಕ್ಕೂ ಸಾಲದು. ಕೃಷ್ಣ ರಾಜೇಂದ್ರ ಜಲಾಶಯದಲ್ಲಿ ಈಗಿರುವ ನೀರನ ಪ್ರಮಾಣ ಮತ್ತು ಡೆಡ್ ಸ್ಟೋರೇಜ್ ಲೆಕ್ಕ ಹಾಕಿದರೆ ಇನ್ನು ಹದಿನೈದು ದಿನಕ್ಕೆ  ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ 7 ಟಿ.ಎಂ.ಸಿ  ನೀರನ್ನು ಬಿಟ್ಟರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಷಿಗೆ ಇರಲಿ  ಕುಡಿಯುವ ನೀರಿಗೆ ಕೂಡ ಹಾಹಾಕಾರವಾಗಲಿದೆ ಎನ್ನುವ ಸಂಗತಿಯನ್ನು ಜನ ಪ್ರತಿನಿಧಿಗಳು ಅರಿತು ಸೂಕ್ತ ಹೋರಾಟವನ್ನು  ರೂಪಿಸ ಬೇಕು  ಇದಕ್ಕೆ ಬಂದ್ ಪೂರಕವಾಗಿರ ಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಅನುದಾನ ಬಿಡುಗಡೆ ಮಾಡುವಂತೆ  ಡಿಸಿಎಂ ಡಿಕೆ ಶಿವಕುಮಾರ್ ಕಾಲಿಗೆ ನಮಸ್ಕರಿಸಿ ಮನವಿ ಪತ್ರ ಸಲ್ಲಿಸಿದ ಬಿಜೆಪಿ ಶಾಸಕ 

ಬ್ಬ-ಉತ್ಸವಗಳು ಶಾಂತಿ-ಸೌಹಾರ್ದತೆಯ ಸಂದೇಶವನ್ನು ಬಿತ್ತಿದಾಗ ಉತ್ತಮ ಸಮಾಜ ಮತ್ತಷ್ಟು ಬಲಿಷ್ಟ-ಮುಹಮ್ಮದ್ ತಾಹೀರ್ ಹುಸೇನ್

2019ಕ್ಕಿಂತ ಮುಂಚೆ ನೋಂದಾಯಿಸಲಾದ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ: ಬದಲಿಸದಿದ್ದರೇ ಬೀಳುತ್ತೆ ದಂಡ..