ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಾರ್ವಜನಿಕರು- ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮ

ಶಿವಮೊಗ್ಗ: ರೇಡಿಯೋ ಶಿವಮೊಗ್ಗಸಮುದಾಯ ಬಾನುಲಿ ಕೇಂದ್ರ ಹಾಗೂ ಪರಿಸರ ಅಧ್ಯಯನ ಕೇಂದ್ರವು  ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಕನ್ನಡದ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿದೆ. ವಿಜೇತರಿಗೆ ನಗದು ಬಹುಮಾನಗಳಿರುತ್ತವೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ  ಕನ್ನಡ ನಾಡು,ನುಡಿ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಶಿವಮೊಗ್ಗ ಜಿಲ್ಲೆ  ಹೀಗೆ ಸಂಪೂರ್ಣ ವಾಗಿ  ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಪ್ರಶ್ನೆಗಳು ಇರುತ್ತವೆ. ವಿದ್ಯಾರ್ಥಿ ವಿಭಾಗ ದಲ್ಲಿ 8,9,10,11 ಹಾಗೂ 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಸಾರ್ವಜನಿಕರ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದು.

ವಯೋಮಿತಿ/ಲಿಂಗ/ಪ್ರದೇಶದ ಮಿತಿ ಇಲ್ಲ.  ಇಬ್ಬರ ತಂಡ ನೀವೇ ಸಿದ್ದ ಮಾಡಿಕೊಂಡು ಬರಬೇಕು. ವಿದ್ಯಾರ್ಥಿ ವಿಭಾಗದಲ್ಲಿ ಭಾಗವಹಿಸುವವರು ಶಾಲೆ/ ಕಾಲೇಜಿನ ಮುಖ್ಯೋಪಾಧ್ಯಾಯರ ಪತ್ರ/ ದಾಖಲಾತಿಯ ಗುರುತಿನ ಚೀಟಿ ಕಡ್ಡಾಯ.  ಸಾರ್ವಜನಿಕ ವಿಭಾಗದಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್ ತನ್ನಿ.  ರಸಪ್ರಶ್ನೆಗಳು ಬರವಣಿಗೆ/ ಮೌಖಿಕ/ ಶ್ರವ್ಯ ರೂಪದಲ್ಲಿರುತ್ತವೆ.  ತೀರ್ಪುಗಾರರ ತೀರ್ಮಾನವೇ ಅಂತಿಮ.  ಸ್ಪರ್ಧೆ ಆಯೋಜನೆ/ಮಾರ್ಪಾಡಿಸುವಿಕೆ/ ರದ್ದುಗೊಳಿಸುವಿಕೆ/ ಪ್ರಸಾರ/ ಮರುಪ್ರಸಾರ  ಈ ಎಲ್ಲ ಹಕ್ಕುಗಳು ರೇಡಿಯೋ ಶಿವಮೊಗ್ಗದ್ದೇ ಆಗಿರುತ್ತದೆ.  ಭಾಗವಹಿಸಿದ ಪ್ರತಿಯೊಬ್ಬರಿಗೂ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

 ಪ್ರತಿ ತಂಡಕ್ಕೆ 20 ರೂ. ಪ್ರವೇಶ ಶುಲ್ಕವಿರುತ್ತದೆ.  ನ.19ರಂದು ಸಂಜೆ 4:30ಕ್ಕೆ ಪೂರ್ವಭಾವಿ ಸುತ್ತು ನಡೆಯಲಿದೆ. ಶಿವಮೊಗ್ಗದ ಬಾಲರಾಜ್ ಅರಸ್ತೆಯಲ್ಲಿನ ಜಿಲ್ಲಾ ನ್ಯಾಯಾಲಯದ  ಎದುರಿಗಿನ ಕುವೆಂಪು ಶತಮಾನೋತ್ಸವ ಮಹಾವಿದ್ಯಾಲಯದಲ್ಲಿ ಇದು ಆಯೋಜನೆಗೊಂಡಿದೆ. ನ.26ರಂದು ಅಂತಿಮ ಸುತ್ತು ರೇಡಿಯೋ ಶಿವಮೊಗ್ಗದ ಬಾನುಲಿ ಕೇಂದ್ರದಲ್ಲಿ ನಡೆಯಲಿದ್ದು, ಇದು ಬಾನುಲಿಯಲ್ಲಿ ನೇರಪ್ರಸಾರವಿರುತ್ತದೆ.

ಎರಡೂ ವಿಭಾಗಗಳಿಗೆ ಪ್ರತ್ಯೇಕವಾಗಿ ಬಹುಮಾನಗಳಿವೆ. ನೋಂದಣಿಗೆ ನ.14 ಕೊನೆಯ ದಿನವಾಗಿರುತ್ತದೆ.  ಹೆಚ್ಚಿನ ಮಾಹಿತಿಗೆ 72591 76279ಗೆ ಸಂಪರ್ಕಿಸಬಹುದು.

ರೇಡಿಯೋ ಶಿವಮೊಗ್ಗ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್, ಆಪಲ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಿಲಯದ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.

Related posts

ಹೆಚ್. ಕಾಂತರಾಜ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನ.20ರಂದು ಧರಣಿ ಸತ್ಯಾಗ್ರಹ.

ಶಿವಮೊಗ್ಗದಲ್ಲಿ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ನ ಜಿಲ್ಲಾ ಶಾಖೆ ಅಸ್ತಿತ್ವಕ್ಕೆ.

ಶಾಲೆಯ ಶಿಕ್ಷಕಿ ಟಿ.ನೀಲಾವತಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ.