ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕನ್ನಡ ಭಾಷೆ ಹೆಚ್ಚಾಗಿ ಬಳಸುವುದು ಮುಖ್ಯ-ರೇಣುಕಾರಾಧ್ಯ

ಶಿವಮೊಗ್ಗ: ವಿಶ್ವದಲ್ಲಿಯೇ ಅತ್ಯಂತ ಇಷ್ಟಪಡುವ ಭಾಷೆ ಕನ್ನಡ. ಅದೂ ಇಂದಿಗೂ ಮತ್ತು ಮುಂದೆಯು ಕನ್ನಡ ಭಾಷೆ ಪ್ರಸ್ತುತ. ಮಾತೃಭಾಷೆ ಯಾವುದಾದರೂ ಸರಿ. ಆದರೆ ನಾಡಿನಲ್ಲಿ ಕನ್ನಡ ಮಾತನಾಡಬೇಕು ಎಂದು ರೇಣುಕಾರಾಧ್ಯ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಮತ್ತು ವಿಕಾಸರಂಗ ವತಿಯಿಂದ ಆಜಾದ್ ಪ್ರೌಡಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಮನೆಗಳಲ್ಲಿ ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು.

ಕಾರ್ಯದರ್ಶಿ ರೂಪಾ ಪುಣ್ಯಕೋಟಿ ಮಾತನಾಡಿ, ಆಜಾದ್ ಶಾಲಾ ಮಕ್ಕಳ ಶಿಸ್ತು ಮತ್ತು ಕನ್ನಡ ಪ್ರೀತಿ ತಮ್ಮನ್ನು ಮಂತ್ರ ಮುಗ್ದರನ್ನಾಗಿ ಮಾಡಿದೆ ಎಂದು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜೇತರ ಹೆಸರು ಪ್ರಬಂದ ಸ್ವರ್ಧೆ ನಿಶತ್ ಪ್ರಥಮ ಆಯಿಶಾ ದ್ವಿತಿಯ, ಬಿಬಿಆಯಿಶಾ ತೃತಿಯ, ಭಾಷಣ ಸ್ವರ್ಧೆ ರುಮಾನ ಖಾನಂ ಪ್ರಥಮ, ಅಕ್ಸಾ ಫಾತೀಮಾ ದ್ವಿತಿಯ, ಕನ್ನಡ ಹಾಡು ರೀಹಾ ಮುಸ್ಕಾನ್ ಪ್ರಥಮ, ಶಿಫಾ ದ್ವಿತಿಯ, ಸಮೂಹ ಗಾಯನ ಹಲೀಮಾ ಸಾದಿಯಾ ತಂಡ ಪ್ರಥಮ, ಮೀಝಾನ್ ತಂಡ ದ್ವಿತಿಯ, ಕವನ ವಾಚನ ಹೀನಾಖಾನಂ, ಹಫೀಝಾ, ಚಿತ್ರಕಲೆ ತಸ್ಮೀಯ ಪ್ರಥಮ, ಮುಝ್ನಬೀನ್ ದ್ವಿತಿಯ, ಸಿದ್ಧೀಖಾ ತೃತಿಯ ಸ್ಥಾನ ಪಡೆದರು.

ಭಾಗವಹಿಸಿದ ಎಲ್ಲಾ ಮಕ್ಕಳ ಪ್ರತಿಭೆಗೆ ಮನ ಸೋತು ನಾಗರಾಜ್ ರವರು ನಗದು ಬಹುಮಾನ ಘೋಷಿಸಿ ಪಾವತಿಸಿದರು. ಮಿಸ್ಭಾ ಸಮೀನ್ ಪ್ರಾರ್ಥನೆ, ಶೋಭಾ ರವರ ಸ್ವಾಗತ, ನಿಖತಾ ಅಂಜು ಪ್ರಾಸ್ರಾವಿಕ ನುಡಿ, ಲಕ್ಷ್ಮೀನಾರಾಯಣ್ ವಂದನಾರ್ಪಣೆ ವಾಗೇಶ್ ಅವರು ನಿರೂಪಣೆ ನೆರವೇರಿಸಿದರು.

Related posts

ವ್ಯಾಪಾರ ವೃದ್ಧಿಸಿಕೊಳ್ಳಲು ಪರಸ್ಪರ ಸಹಕಾರ ಮುಖ್ಯ-ಪೂರ್ಣಿಮಾ ಸುನೀಲ್

50 ಕೋಟಿ ರೂ. ಅಮಿಷವೊಡ್ಡಿ ಸೆಳೆಯಲು ಬಿಜೆಪಿ ಪ್ರಯತ್ನ: ಮೈತ್ರಿ ಸರ್ಕಾರ ತೆಗೆದ ಟೀಂ ಮತ್ತೆ ಕೆಲಸ ಮಾಡುತ್ತಿದೆ-‘ಕೈ’ ಶಾಸಕ ಗಂಭೀರ ಆರೋಪ

ಆಟೋ ನಿಲ್ದಾಣದ ಆಟೋ ಶೆಲ್ಟರ್ ಉದ್ಘಾಟಿಸಿದ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್