ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯ

ರಾಜಸ್ಥಾನ ವಿಧಾನಸಭೆ ಚುನಾವಣೆ ಗೆಲ್ಲಲು ‘ಕೈ’ ತಂತ್ರ: 80 ಶಾಸಕರಿಗೆ ಕೋಕ್ ಕೊಡಲು ಪ್ಲಾನ್.

ಜೈಪುರ: ಸದ್ಯದಲ್ಲೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಐದು ರಾಜ್ಯಗಳಲ್ಲೂ  ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿ ಗೆದ್ದು ಬೀಗಿರುವ ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದೆ. ಇದಕ್ಕೂ ಮುನ್ನ ಪಂಚರಾಜ್ಯ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿದೆ.

ಈ ನಡುವೆ   , ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಶಾಸಕರಿಗೆ ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆಯಂತೆ.  ರಾಜಸ್ತಾನದಲ್ಲಿ ಪಕ್ಷದ ವಿರುದ್ಧ ಅಥವಾ ಸಿಎಂ ಗೆಹ್ಲೋಟ್ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಆದರೆ, ಸುಮಾರು 80 ಕ್ಷೇತ್ರಗಳಲ್ಲಿ ಶಾಸಕರ ಬಗ್ಗೆ ಜನರಿಗೆ ತೀವ್ರ ಅಸಮಾಧಾನವಿದೆ ಎಂದು ಎರಡು ಸಂಸ್ಥೆಗಳ ಮೂಲಕ ಕಾಂಗ್ರೆಸ್ ನಡೆಸಿರುವ 6 ಆಂತರಿಕ ಸಮೀಕ್ಷೆಗಳಲ್ಲಿ ತಿಳಿದುಬಂದಿದೆ. ಹೀಗಾಗಿ, ಈ ಕ್ಷೇತ್ರಗಳಲ್ಲಿ ಹಳಬರಿಗೆ ಕೊಕ್ ನೀಡಿ, ಹೊಸ ಮುಖಗಳನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎನ್ನಲಾಗಿದೆ.

“ಗೆಲ್ಲುವ ಸಾಮರ್ಥ್ಯವೊಂದೇ ಟಿಕೆಟ್ನ ಮಾನದಂಡ’ ಎಂದು ಈಗಾಗಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಘೋಷಿಸಿರುವುದು ಕೂಡ ಈ ವದಂತಿಗೆ ಪುಷ್ಟಿ ನೀಡಿದೆ. ಅಲ್ಲದೇ, ಇತ್ತೀಚೆಗೆ ನಡೆದ ಸಭೆಯಲ್ಲಿ ಸಿಎಂ ಗೆಹ್ಲೋಟ್ ಕೂಡ, “ಟಿಕೆಟ್ ವಂಚಿತರ ಆಕ್ರೋಶದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿದ್ದರಂತೆ.

ಮುಂದಿನ ವರ್ಷದ ಆಂಧ್ರಪ್ರದೇಶ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗಳಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ಕಳೆದ ವಾರವಷ್ಟೇ ಜನ ಸೇನಾ ಪಾರ್ಟಿ(ಜೆಎಸ್ಪಿ) ನಾಯಕ ಪವನ್ ಕಲ್ಯಾಣ್ ಘೋಷಿಸಿದ್ದಾರೆ. ಅಲ್ಲದೇ, ನಾವು ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಈ ಬೆಳವಣಿಗೆಗಳ ಬಗ್ಗೆ ತುಟಿ ಬಿಚ್ಚಿಲ್ಲ. ಟಿಡಿಪಿ-ಜೆಎಸ್ಪಿ ಮೈತ್ರಿಯೊಂದಿಗೆ ಬಿಜೆಪಿಯೂ ಸೇರಿಕೊಳ್ಳಲಿದೆ ಎನ್ನುವ ನಂಬಿಕೆಯಲ್ಲಿ ಪವನ್ ಕಲ್ಯಾಣ್ ಇದ್ದಾರೆ. ಆದರೆ, ಬಿಜೆಪಿ ಯಾವುದೇ ನಿರ್ಧಾರಕ್ಕೆ ಬರದಂಥ ಸ್ಥಿತಿಗೆ ತಲುಪಿದೆ. ಆಂಧ್ರದಲ್ಲಿ ಬಿಜೆಪಿಗೆ ಭದ್ರ ನೆಲೆಯಿಲ್ಲ. ಬಿಜೆಪಿ ಕೇಂದ್ರ ನಾಯಕತ್ವವು ಟಿಡಿಪಿ ವಿಶ್ವಾಸಾರ್ಹ ಮಿತ್ರಪಕ್ಷವಲ್ಲ ಎಂಬುದನ್ನು ಅರಿತಿದೆ. ಆದರೆ, ಟಿಡಿಪಿ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ಯಾವುದೇ ಸೀಟು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ. ಜಗನ್ ರೆಡ್ಡಿ ವಿಶ್ವಾಸಾರ್ಹ ವ್ಯಕ್ತಿಯಾದರೂ, ಅವರು ಎನ್ಡಿಎಗೆ ಸೇರಲ್ಲ. 2024ರ ಲೋಕಸಭೆ ಚುನಾವಣೆ ಬಳಿಕ ವೈಎಸ್ಸಾರ್ ಕಾಂಗ್ರೆಸ್ನ ಅಗತ್ಯ ಬಂದರೂ ಬರಬಹುದು. ಹೀಗಾಗಿ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೇ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಿದೆ.

 

Related posts

ರಾಜ್ಯದಲ್ಲೂ ನ್ಯುಮೋನಿಯಾ ವೈರಸ್ ಭೀತಿ: ಸರ್ಕಾರದಿಂದ ಅಲರ್ಟ್..

ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಏಕೆ ಬೀಳಿಸಬಾರದು, ಇದರಲ್ಲಿ ತಪ್ಪೇನಿದೆ-ಕೆ.ಎಸ್. ಈಶ್ವರಪ್ಪ

ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕಲೀಮ್ ಉಲ್ಲಾ ಪ್ರಥಮ ಸ್ಥಾನ