ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದೇಶ ಸ್ವಾತಂತ್ರ್ಯ ಗಳಿಸಲು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನ ಎಂದೆಂದೂ ಅವೀಸ್ಮರಣೀಯ-ಜ್ಯೋತಿಪ್ರಕಾಶ್

ಶಿವಮೊಗ್ಗ: ದೇಶ ಸ್ವಾತಂತ್ರ್ಯ ಗಳಿಸಲು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನ ಎಂದೆಂದೂ ಅವೀಸ್ಮರಣೀಯ ಎಂದು ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಹೇಳಿದರು.

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ 77ನೇ ಸ್ವ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಲಕ್ಷಾಂತರ ದೇಶ ಭಕ್ತರ ಹೋರಾಟದ ಫಲವೇ ಇಂದು ನಾವೆಲ್ಲರೂ ಸ್ವತಂತ್ರರಾಗಿ ನೆಮ್ಮದಿಯಿಂದ ಭಾರತ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ತತ್ವ ಆದರ್ಶ ಗುಣಗಳು, ಹೋರಾಟದ ದಿನಗಳನ್ನು ನಮ್ಮ ಮಕ್ಕಳಿಗೆ ಅಗತ್ಯವಾಗಿ ತಿಳಿಸಬೇಕು. ಸ್ವಾತಂತ್ರ‍್ಯದ ನಂತರ ನಮ್ಮ ದೇಶ ಎಲ್ಲಾ ದೇಶಗಳಿಗಿಂತ ಸುಭಿಕ್ಷವಾಗಿದೆ. ಎಲ್ಲರೂ ದೇಶಪ್ರೇಮವನ್ನು ಬೆಳೆಸಿಕೊಳ್ಳೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್ ಮಾತನಾಡಿ, ನಮಗಾಗಿ ದೇಶದ ಗಡಿಯಲ್ಲಿ ಕಾಯುತ್ತಿರುವ ಸೈನಿಕರನ್ನು ದೇಶಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವ ದೇಶಪ್ರೇಮಿಗಳನ್ನು ಸದಾ ಗೌರವಿಸಬೇಕು. ದೇಶಭಕ್ತಿಯ ಜೊತೆಗೆ ಮಣ್ಣಿನ ಋಣವನ್ನು ತೀರಿಸುವ ಕಂಕಣ ತೊಡಬೇಕು. ದೇಶ ಪ್ರೇಮ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಯೋಗ ಬಂಧುಗಳಿAದ ದೇಶಭಕ್ತಿ ಗೀತೆ ರಾಷ್ಟ್ರ ಗೀತೆ ಗೌರವ ಸಮರ್ಪಣೆ ನೆರವೇರಿತು. ಎಲ್ಲರೂ ಸಿಹಿ ಹಂಚಿ, ಸಂಭ್ರಮಿಸುವುದರ ಜೊತೆಗೆ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಗಿಸಿದರು. ವೇದಿಕೆಯಲ್ಲಿ ಯೋಗ ಶಿಕ್ಷಕ ವಿಜಯ ಕೃಷ್ಣ, ಹರೀಶ್, ಕಾಟನ್ ಜಗದೀಶ್, ನರಸೊಜಿರಾವ್, ಸುಜಾತ ಮಧುಕೇಶ್ವರ್ ಗಾಯತ್ರಿ, ಆನಂದ್, ಶ್ರೀನಿವಾಸ್, ಮಹೇಶ್, ಜಿ.ವಿಜಯಕುಮಾರ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.

Related posts

ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ: ರಾಜ್ಯದ 28 ಕ್ಷೇತ್ರಗಳಿಗೆ ಸಚಿವರನ್ನ ‘ವೀಕ್ಷಕ’ರಾಗಿ ನೇಮಿಸಿದ ಕಾಂಗ್ರೆಸ್: ದಕ್ಷಿಣ ಕನ್ನಡಕ್ಕೆ ಮಧು ಬಂಗಾರಪ್ಪ ನೇಮಕ.

ಮೈಸೂರು ದಸರಾ ಮಹೋತ್ಸವ:  ಗಜಪಯಣಕ್ಕೆ ವಿದ್ಯುಕ್ತ ಚಾಲನೆ.

ದಸರಾ ಹಬ್ಬದಲ್ಲೇ ಜನಸಾಮಾನ್ಯರಿಗೆ ಶಾಕ್ : ಅಕ್ಕಿ ,ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆ!