ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕನ್ನಡ ಭಾಷೆ, ಸಂಸ್ಕೃತಿ ನಾಡು ನುಡಿ ಗಡಿ ರಕ್ಷಣೆಗೆ ಶ್ರಮಿಸಬೇಕು-ಪತ್ರಕರ್ತ ವಿ.ಟಿ. ಅರುಣ್

ಶಿವಮೊಗ್ಗ:ಕನ್ನಡ ಭಾಷೆ, ಸಂಸ್ಕೃತಿ ನಾಡು ನುಡಿ ಗಡಿ ರಕ್ಷಣೆಗೆ ಶ್ರಮಿಸಬೇಕು. ಕನ್ನಡವನ್ನು ಬೆಳೆಸಬೇಕು ಮಾತೃಭಾಷಾ ಮರೆಯಬಾರದು ಎಂದು ಪತ್ರಕರ್ತ ವಿ.ಟಿ. ಅರುಣ್ ಹೇಳಿದ್ದಾರೆ.
ಅವರು ಇಂದು ನಗರದ ಗಾರ್ಡನ್ ಏರಿಯಾ ಮುಖ್ಯ ರಸ್ತೆಯಲ್ಲಿ ಸ್ನೇಹಮಯಿ ಸಂಘ ಹಾಗೂ ಡಾ|| ರಾಜ್ ಮತ್ತು ಡಾ|| ಪುನೀತ್ ರಾಜ್‍ಮಾರ್ ಅಭಿಮಾನಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹುಟ್ಟುಹಬ್ಬ ಆಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾನ್ವೆಂಟ್ ಸಂಸ್ಕೃತಿ ಇದ್ದರೂ ಸಹ ನಮ್ಮ ಕನ್ನಡವನ್ನು ಮರೆಯಬಾರದು. ನಮ್ಮತನ ಬಿಡಬಾರದು. ಕಾವೇರಿ ಹೋರಾಟ ಕೇವಲ ಎರಡು ಜಿಲ್ಲೆಗೆ ಅμÉ್ಟೀ ಸೀಮಿತವಾಗಬಾರದು. ಕಾವೇರಿ ನಮ್ಮದು ಇಡೀ ರಾಜ್ಯ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಬೇಕು. ಈ ಮೂಲಕ ನಮ್ಮ ನೆಲ, ಜಲ, ಭಾμÉ ಪ್ರಶ್ನೆ ಬಂದಾಗ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಹೇಮಾಮೋಹನ್, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಪೆÇ್ರೀತ್ಸಾಹಿಸುತ್ತಿರುವುದು ಸಂತೋಷದ ವಿಚಾರ. ಮುಂದೆಯೂ ಕೂಡ ಹೊಸ ಪ್ರತಿಭೆಗಳನ್ನು ಗುರುತಿಸಿ ಕಲೆ ಬೆಳೆಸಲು ಈ ಸಂಸ್ಥೆ ಪೆÇ್ರೀತ್ಸಾಹಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಏರೋಬಿಕ್ಸ್‍ನಲ್ಲಿ ಚಿನ್ನದ ಪದಕ ಪಡೆದ ಋಷಿಕ, ಹಿಪಪ್ ಡ್ಯಾನ್ಸ್‍ನಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದ ತೇಜಸ್ವಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಸುಸೈನಾದನ್, ಸಾಮಾಜಿಕ ಕಾರ್ಯಕರ್ತ ವಿನ್ಸ್‍ಂಟ್ ರೋಡ್ರಿಗಸ್, ಖ್ಯಾತ ಪ್ರಸೂತಿ ತಜ್ಞೆ ಡಾ. ಹೇಮಾಮೋಹನ್ ರವರನ್ನು ಸನ್ಮಾನಿ ಸಲಾಯಿತು.
ಈ ಸಂದರ್ಭದಲ್ಲಿ ಸ್ನೇಹಮಯಿ ಸಂಘದ ಅಧ್ಯಕ್ಷರು ಕಾರ್ಯಕ್ರಮದ ರೂವಾರಿ ಚಿನ್ನಪ್ಪ ಉಪಾಧ್ಯಕ್ಷ ರೊ. ವಿಜಯ್‍ಕುಮಾರ್, ಕಾರ್ಯದರ್ಶಿ ರವಿಕುಮಾರ್, ಜಿಲ್ಲಾ ಕ.ಸಾ.ಪ. ನಿರ್ದೇಶಕ ಮಲ್ಲಿಕಾರ್ಜುನ್ ಕಾನೂರು, ರವಿ ಶಂಕರ್ ಮತ್ತಿತರರು ಇದ್ದರು.

Related posts

ಇಂದು ಸಹ ತಮಿಳುನಾಡಿಗೆ ಹರಿದ ಕಾವೇರಿ ನೀರು: ರೈತರಲ್ಲಿ ಆತಂಕ.

ಆ.25ರಿಂದ ಸೆ.8ರವರೆಗೆ ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ: ಜಾಗೃತಿ ಜಾಥಾ.

ಇಸ್ಕಾನ್ ಭಾರತದ ಅತೀ ದೊಡ್ಡ ವಂಚಕ ಸಂಸ್ಥೆ: ಗೋರಕ್ಷಣೆ ಹೆಸರಲ್ಲಿ ಗೋವುಗಳನ್ನು ಕಟುಕರಿಗೆ ಮಾರಾಟ- ಮನೇಕಾ ಗಾಂಧಿ