ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪ್ರತಿಭೆಯನ್ನು ಉದಾತ್ತವಾಗಿ ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು-ಪತ್ರಕರ್ತ, ಕವಿ ಎನ್. ರವಿಕುಮಾರ್

ಶಿವಮೊಗ್ಗ: ಪ್ರತಿಭೆಯನ್ನು ಉದಾತ್ತವಾಗಿ ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಪತ್ರಕರ್ತ, ಕವಿ ಎನ್. ರವಿಕುಮಾರ್ ಹೇಳಿದ್ದಾರೆ.
ಅವರು ಇಂದು ನಗರದ ಮೀಡಿಯಾ ಹೌಸ್‍ನಲ್ಲಿ ಗಾ.ರಾ. ಫಿಲಮ್ಸ್ ಪ್ರಸೆಂಟ್ಸ್ ವತಿಯಿಂದ ನೊಗದ ದನಿ ರೈತ ಗೀತೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾನವನ ಜೀವನದೊಂದಿಗೆ ಪ್ರಕೃತಿ, ಭೂಮಿಗೆ ಮತ್ತು ನೇಗಿಲ ಯೋಗಿಗೆ ಅಗಾಧವಾದ ಸಂಬಂಧವಿದೆ. ರೈತರ ನೋವು ನಲಿವುಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಯಾರು ಜೀವನದಲ್ಲಿ ಅತ್ಯಂತ ಕಷ್ಟಪಟ್ಟು ಜೀವನ ರೂಪಿಸಿಕೊಂಡಿದ್ದಾರೊ ಅವರಿಗೆ ಮಾತ್ರ ಅರ್ಥವಾಗುತ್ತದೆ. ಓರ್ವ ಪತ್ರಕರ್ತ, ಲೇಖಕ, ಚಳುವಳಿಗಾರ ಸಾಹಿತಿಯಾದ ಗಾ.ರಾ.ಶ್ರೀನಿವಾಸ್ ಅವರು ಎಲ್ಲಾ ರಂಗಗಳಲ್ಲೂ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಜನಪರ ಸಾಹಿತಿ ಹಾಗೂ ಹೋರಾಟಗಾರರಾಗಿ ಬೆಳಕು ಚೆಲ್ಲುವ ಕೃತಿಯನ್ನು ಸಂಗೀತದ ಮೂಲಕ ಹೊರತಂದಿದ್ದಾರೆ. ಅವರಿಗೆ ಶುಭವಾಗಲಿ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ಹಸಿದ ಹೊಟ್ಟೆಯ ನೋವು ಹಸಿದವನಿಗೆ ಮಾತ್ರ ತಿಳಿಯುತ್ತದೆ. ಸಾಮಾನ್ಯ ಜನರ ಸಂಕಷ್ಟದ ಅರಿವು ಗಾ.ರಾ. ಶ್ರೀನಿವಾಸ್‍ಗೆ ಇದೆ. ಓರ್ವ ಪತ್ರಕರ್ತನಾಗಿ ಸಾಮಾಜಿಕ ಹೋರಾಟಗಾರನಾಗಿ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಬಾರಿ ಏಕಾಂಗಿ ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ.22 ವರ್ಷ ರಾಜಕಾರಣದಲ್ಲಿ ನಾನು ಅನೇಕ ಏಳುಬೀಲು ಕಂಡಿದ್ದೇನೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆನ್ನುವುದೇ ಉದ್ದೇಶವಾಗಿರಬೇಕು. ಗಾ.ರಾ. ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಎಲ್. ಸತೀಶ್ ರೈತಗೀತೆ ಬಿಡುಗಡೆಯಲ್ಲಿ ಕೈಜೋಡಿಸಿದರು. ಗಾಯಕರಾದ ಉಷಾದೇವಿ ಉಡುಪ, ಸ್ವರ ಸಂಯೋಜಿ ಮಂಗಳಾ ಅಶೋಕ್ ಶಿವಮೊಗ್ಗ, ಸಂಗೀತ ನೀಡಿದ ಅದಿತ್ಯ ಎ., ಅನಂತನಾಗ ಸ್ಟುಡಿಯೋ, ಗ್ರಾಫಿಕ್ ಎಡಿಟರ್ ಕಾರ್ತಿಕ್, ಮಾರ್ಗದರ್ಶಕ ಶಿವಮೊಗ್ಗ ರಾಮಣ್ಣ ಇವರನ್ನು ಸನ್ಮಾನಿಸಲಾಯಿತು.
ಮುಕ್ತಿಯಾರ್ ಅಹ್ಮದ್, ಚಿನ್ನಪ್ಪ, ಜ್ಯೋತಿ ಹರಳಪ್ಪ, ನುಡಿಗಿಡ ಸಂಪಾದಕ ಹೆಚ್.ಎನ್. ಮಂಜುನಾಥ್ ಮೊದಲಾದವರಿದ್ದರು

Related posts

ಅ.15ರಿಂದ ಅ.29ರ ವರೆಗೆ ಶ್ರೀ ಶರನ್ನವರಾತ್ರೋತ್ಸವ.

ಚಿಕ್ಕ ಸೇವೆಯಾದರೂ ನಿರಂತರ ಸೇವೆಗಳಿಂದ ಸಮಾಜದ ಉನ್ನತಿ ಸಾಧ್ಯ: ಲಯನ್ ಅಧ್ಯಕ್ಷ ಶಿವಯೋಗಿ ಗೌಡ

ಕ್ಯಾನ್ಸರ್ ರೋಗದ ಬಗ್ಗೆ ಇನ್ಮುಂದೆ ಭಯ ಬೇಡ: 7 ನಿಮಿಷದ ಚಿಕಿತ್ಸೆಯ ಮೊದಲ ಇಂಜಕ್ಷನ್ ಬಿಡುಗಡೆ..