ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಒರಿಜಿನಲ್ ಜೆಡಿಎಸ್ ನಮ್ಮದೇ:  ಬಿಜೆಪಿ ಜೊತೆ ಹೋಗಲ್ಲ- ಹೆಚ್ ಡಿಡಿ ಮತ್ತು ಹೆಚ್.ಡಿಕೆಗೆ ಸೆಡ್ಡು ಹೊಡೆದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ಬೆಂಗಳೂರು:  ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ಧ ಜೆಡಿಎಸ್  ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಇದೀಗ  ಜೆಡಿಎಸ್ ವರಿಷ್ಠ ಹೆಚ್ ​ಡಿ ದೇವೇಗೌಡರು  ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸೆಡ್ಡು ಹೊಡೆದಿದ್ದಾರೆ.

ನಾನು ಅಧ್ಯಕ್ಷ, ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಒರಿಜಿನಲ್ ಜೆಡಿಎಸ್ ನಮ್ಮದೇ. ಯಾವುದೇ ಕಾರಣಕ್ಕೂ ಎನ್ ಡಿಎ ಮೈತ್ರಿಕೂಟ ಪರ ಹೋಗಲ್ಲ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಜೆಡಿಎಸ್ ಕರ್ನಾಟಕ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಜೆಡಿಎಸ್ ಪಕ್ಷದ್ದು ಜಾತ್ಯತೀತ ಸಿದ್ಧಾಂತ. ಬಿಜೆಪಿ ಸಿದ್ಧಾಂತವೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಸೋಲಬೇಕಿದೆ. ಹೀಗಾಗಿ ನಾವು ಬಿಜೆಪಿ ಜೊತೆ ಹೋಗಲ್ಲ.  ನಾನು ತೀರ್ಮಾನ ಮಾಡಿದ್ದೇನೆ. ರಾಜ್ಯಾಧ್ಯಕ್ಷನಾಗಿ ನಾನು ತೀರ್ಮಾನ ತೆಗೆದುಕೊಂಡಿದ್ದೀನಿ. ಹೆಚ್.ಡಿಕೆ ಉಚ್ಛಾಟನೆಗೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.  ಇದರಲ್ಲಿ ಶಾಸಕರು ಏನ್ ಮಾಡ್ತಾರೆ ಕಾದು ನೋಡಿ ಎಂದರು.

ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ತತ್ವ ಸಿದ್ಧಾಂತ, ತತ್ವ ಬೇರೆ ಇದೆ, ಅದಕ್ಕೆ‌ ನಾವು ವಿರೋಧ ಮಾಡುತ್ತೇವೆ ಎಂದ  ಸಿಎಂ ಇಬ್ರಾಹಿಂ, ಮುಂದೆ ಎನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ಯಾರನ್ನ ನೀವು ನಂಬಿದ್ದೀರಿ ಅವರೇ ನಿಮ್ಮ ಕೈ ಕೊಟ್ಟರು. ನಮ್ಮ ಮನೆಯಲ್ಲಿ ನಾವು ಇದ್ದೇವೆ. ಮುಂದೆ ಎನಾಗುತ್ತೆ ಪರದೆ ಮೇಲೆ ನೋಡಬೇಕು. ನಾನು ಹೆದರುವನು ಅಲ್ಲ, ಬೆದರಿಕೆ ಹಾಕಲ್ಲ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

Related posts

ಕನ್ನಡ ಸಾಹಿತ್ಯ ಪರಿಷತ್ತಿನ  ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ʻರತ್ನʼ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಟ್ವಿಟರ್’ ಬಳಕೆದಾರರಿಗೆ ಬಿಗ್ ಶಾಕ್: ಮಾಸಿಕ ಶುಲ್ಕ ವಿಧಿಸುವ ಬಗ್ಗೆ ಚಿಂತನೆ.

ಎಲ್ಲ ಚಿಕ್ಕ ಮಕ್ಕಳು ಸಿಹಿ ತಿನಿಸು ತಂದ ನಂತರ ತಪ್ಪದೇ ಬ್ರಷ್ ಮಾಡಿಸಬೇಕು-ಡಾ.ವಿನಯ ಶ್ರೀನಿವಾಸ್ ಸಲಹೆ