ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಅಲರಾಂ ಅಂತಾ ದಿಂಬಿನ ಕೆಳೆಗೆ ಮೊಬೈಲ್ ಇಡೋದು ತುಂಬಾ ಡೇಂಜರ್..

ಬೆಂಗಳೂರು: ಬೆಳಿಗ್ಗೆ ಬೇಗ ಎದ್ಧೇಳಲು ಸಾಮಾನ್ಯವಾಗಿ ಎಲ್ಲರೂ ಮೊಬೈಲ್ ನಲ್ಲಿ ಅಲರಾಂ ಇಟ್ಟು ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುತ್ತಾರೆ. ಆದರೆ ಅಲರಾಂ ಅಂತಾ ದಿಂಬಿನ ಕೆಳೆಗೆ ಮೊಬೈಲ್ ಇಡೋದು ತುಂಬಾ ಡೇಂಜರ್.

ಹೌದು, ದಿನಪೂರ್ತಿ ಮೊಬೈಲ್ ಮೈಗೆ ಅಂಟಿಕೊಂಡೇ ಇರುತ್ತೆ. ವಾಶ್ ರೂಂಗೆ ಹೋಗಿ, ಬೆಡ್ ರೂಮಿಗೆ ಹೋಗಲಿ, ವಾಕಿಂಗ್ ಮಾಡಿ, ಜಾಗಿಂಗ್ ಮಾಡಿ, ಮೊಬೈಲ್ ಕೈ ತಪ್ಪಲ್ಲ. ಎಲ್ಲೇ ಹೋದರೂ ಮೊಬೈಲ್ ಅನ್ನ ಕೈಯಲ್ಲೇ ಇಟ್ಟುಕೊಂಡು ಓಡಾಡುತ್ತೇವೆ. ರಾತ್ರಿ ಮಲಗುವಾಗ ಅಲರಾಂ ಇಟ್ಟು ಇಂಟರ್ನೆಟ್ ಆನ್ ಇಟ್ಕೊಂಡು ಮಲಕ್ಕೊಳ್ಳುತ್ತೀವಿ. ಇಂಟರ್ನೆಟ್ ಆಫ್ (internet off)ಮಾಡಬಹುದಲ್ವಾ ಅಂದರೆ ಯಾರದ್ದಾದ್ರೂ ಅರ್ಜೆಂಟ್ ಮೆಸೇಜ್ ಇದ್ರೆ.. ಅಂತ ಟೆನ್ಶನ್.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮೊಬೈಲ್ ಚಟವಾಗಿಬಿಟ್ಟಿದೆ. ಹಾಲು ಕುಡಿಯುವ ಮಕ್ಕಳ ಕೈಯಲ್ಲೂ ಮೊಬೈಲ್ ಬೇಕು. ಹಿಂದೆ ಆಟವಾಡಲು ಆಟಸಾಮಾನುಗಳನ್ನ ಬಳಸುತ್ತಿದ್ದರು. ಆದರೆ ಈಗ ಮಗುವಿನ ಕೈಗೆ ಮೊಬೈಲ್ ಕೊಟ್ಟರೇ ಸಾಕು ಸುಮ್ಮನಾಗಿನಬಿಡುತ್ತದೆ.  ಇನ್ನೂ ಯುವಕರ ಸ್ಥಿತಿಯಂತೂ ಮೊಬೈಲ್ ಕೈಯಲ್ಲಿಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿಬಿಟ್ಟಿದೆ. ಬೆಳಗ್ಗೆ ಎದ್ದಾಗಲೂ ಮೊಬೈಲ್ ನೋಡುವುದು, ಮಲಗುವಾಗುವಾಗಲೂ ಮೊಬೈಲ್ (mobile) ಪಕ್ಕದಲ್ಲಿಟ್ಟು ಮಲಗುವುದು ರೂಢಿಯಾಗಿಬಿಟ್ಟಿದೆ. ಇವರ ಇನ್ನೊಂದು ಕೆಟ್ಟ ಅಭ್ಯಾ ಅಂದರೆ ದಿಂಬಿನ ಕೆಳಗಿಟ್ಟು ಜಾರ್ಜ್ ಮಾಡುವುದು.

ಕೆಲವರು ಹಾಸಿಗೆಯ ಮೇಲೆ ಮಲಗುವಾಗ ದಿಂಬಿನ ಕೆಳಗೆ ಅಥವಾ ತಲೆಯ ಬಳಿ ಇಟ್ಟು ಫೋನ್ ಚಾರ್ಜ್ ಮಾಡುತ್ತಾರೆ. ಅನೇಕ ಬಾರಿ ಅವರು ತಮ್ಮ ಫೋನ್ ಚಾರ್ಜ್ನಲ್ಲಿ ಇಟ್ಟು ಮಲಗುತ್ತಾರೆ. ಇದರಿಂದ ಬೆಳಗ್ಗೆ ಚಾರ್ಜ್ ಆಗಿಲ್ಲ ಅನ್ನೋ ತಲೆಬಿಸಿ ಇರೋದಿಲ್ಲ.

ಆದರೆ ಹೀಗೆ ಮಾಡೋದು ಮೊಬೈಲ್ಗೂ ಹಾಳು. ಆ ಮೊಬೈಲ್ ಓನರ್ಗಂತೂ ಹಂಡ್ರೆಡ್ ಪರ್ಸೆಂಟ್ ಹಾಳು. ಹಾಸಿಗೆಯ ಮೇಲೆ ದಿಂಬಿನ ಕೆಳಗೆ ಮೊಬೈಲ್ ಫೋನ್ ಇಡುವುದರಿಂದ ಮೆದುಳಿಗೆ ಹಾನಿಯಾಗುತ್ತದೆ. ಇದು ಮಕ್ಕಳಿಗೆ ಇನ್ನೂ ಅಪಾಯಕಾರಿ. ಅವರ ನೆತ್ತಿ ಮತ್ತು ತಲೆಬುರುಡೆ ಹೆಚ್ಚು ತೆಳುವಾಗಿರುವುದರಿಂದ. ಅದಕ್ಕಾಗಿಯೇ ವಿಕಿರಣವು ಅವರ ಮೆದುಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.

ಮೊಬೈಲ್ ಫೋನ್ಗಳಿಂದ ಹೊರಹೊಮ್ಮುವ ವಿಕಿರಣವು ಕ್ಯಾನ್ಸರ್ ಮತ್ತು ಟ್ಯೂಮರ್ ನಂಥಾ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೊಬೈಲ್ ಮಕ್ಕಳಿಂದ ದೂರವಿದ್ದಷ್ಟು ಒಳ್ಳೆಯದು. ಜೊತೆಗೆ ಇದು ವ್ಯಕ್ತಿಯ ಲೈಂಗಿಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್ ಪೋನ್ಗಳಿಂದ ಹೊರಹೊಮ್ಮುವ ವಿಕಿರಣವು ಸಂತಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅನೇಕ ವರದಿಗಳು ಎಚ್ಚರಿಸುತ್ತವೆ. ಇದು ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡಬಹುದು. ತನ್ನ ಫೋನ್ ಅನ್ನು ಯಾವಾಗಲೂ ತನ್ನ ಜೇಬಿನಲ್ಲಿ ಇಟ್ಟುಕೊಳ್ಳುವವರ ವೀರ್ಯದ ಸಂಖ್ಯೆ ಕಡಿಮೆಯಾಗಬಹುದು ಆತ ತಂದೆಯಾಗಲು ಸಮಸ್ಯೆಯಾಗಬಹುದು. ಇನ್ನು ಮೊಬೈಲ್ ಗೂ ಇದು ಹಾನಿ. ರಾತ್ರಿಯೆಲ್ಲ ಚಾರ್ಜ್ ಆಗಿ ಅದರ ಬ್ಯಾಟರಿ ಹಾಳಾಗುತ್ತದೆ. ಬಹಳ ಬೇಗ ಮೊಬೈಲ್ ಬ್ಯಾಟರಿ ಸಮಸ್ಯೆ ಕಾಣಿಸಬಹುದು.

ಇದರ ಬದಲು ನಿದ್ರಿಸುತ್ತಿರುವಾಗ ಮೊಬೈಲ್ ಪವರ್ ಆಫ್ ಮಾಡಿ ಅಥವಾ ಏರೋಪ್ಲೇನ್ ಮೋಡ್’ನಲ್ಲಿ ಇರಿಸೋದು ಬೆಟರ್. ಇಲ್ಲ ಮೊಬೈಲ್ ಆನ್ನಲ್ಲೇ ಇರಬೇಕು ಅನ್ನುವವರು ಮೊಬೈಲ್ ಅನ್ನು ಮಲಗುವ ಸ್ಥಳದಿಂದ ಹಲವಾರು ಅಡಿ ದೂರದಲ್ಲಿರಿಸಿ. ನಮ್ಮಲ್ಲಿ ಹಲವರು ತಮ್ಮ ಮೊಬೈಲ್ ಫೋನ್ ಅನ್ನು ಅಲಾರಾಂ ಆಗಿ ಬಳಸುತ್ತಾರೆ. ಅಲರಾಂ ಸೆಟ್ ಮಾಡಿ ಮೊಬೈಲ್ ದೂರ ಇಟ್ಟರೆ ಇನ್ನೂ ಒಳ್ಳೆಯದು.

 

Related posts

ಬಡ ದಲಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಿ: ದಸಂಸ ಪ್ರತಿಭಟನೆ.

ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ: ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದ 9ನೇ ತರಗತಿ ವಿದ್ಯಾರ್ಥಿನಿ.

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದೇವರು ಒಳ್ಳೆಯದು ಮಾಡಲಿ-ಸಚಿವ ಮಧು ಬಂಗಾರಪ್ಪ