ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ತಾಯಿ ಭಾಷೆಯಿಂದ ನಿಜವಾದ ಭಾವನೆ ವ್ಯಕ್ತಪಡಿಸಲು ಸಾಧ್ಯ : ಡಿ.ಮಂಜುನಾಥ

ಶಿವಮೊಗ್ಗ : ನಮ್ಮ ತಾಯಿ ಭಾಷೆಯಿಂದ ಮಾತ್ರ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ನಿಧಿಗೆ ಹೋಬಳಿ ಘಟಕ ಗಾಜನೂರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಗಾಜನೂರು ಜವಾಹಾರ್ ನವೋದಯ ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಬುಧವಾರ ಏರ್ಪಡಿಸಿದ್ದ ಕಥೆ ಕವನ ಪ್ರಬಂಧ ರಚನಾ ಕಮ್ಮಟ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಹಾಗೂ ತೆಂಗಿನ ಹೊಂಬಾಳೆಯನ್ನು ಅರಳಿಸುವುದರ ಮೂಲಕ ಉದ್ಘಾಟಿಸಿದರು.
ದೇಶದಲ್ಲಿ 1900 ಭಾಷೆಗಳು ಇದ್ದು ಅದರಲ್ಲಿ ಕನ್ನಡ ಅತ್ಯಂತ ಶ್ರೇಷ್ಠ ಭಾಷೆ ಎಂಬುದನ್ನ ನಮಗೆ ಬಂದ ಜ್ಞಾನಪೀಠ ಪ್ರಶಸ್ತಿ ಹೇಳುತ್ತದೆ. ಇಂತಹ ನಮ್ಮ ಅದ್ಭುತ ಭಾಷೆಯನ್ನು ನಾವು ಅತ್ಯಂತ ಹೆಮ್ಮೆಯಿಂದ ಬಳಸಬೇಕು. ಕನ್ನಡದ ಬಗೆಗಿನ ತಾತ್ಸಾರ ಎಂದಿಗೂ ಸಲ್ಲದು‌. ವಿದ್ಯಾರ್ಥಿಗಳು ಕನ್ನಡದ ಸಾಹಿತ್ಯಾತ್ಮಕ ಕೃಷಿಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಿ.
ಹೇಗೆ ಹೊಂಬಾಳೆಯ ಒಳಗಡೆ ಕಾಯಿಗಳು ಅಡಗಿರುತ್ತೋ ಹಾಗೆ ನಮ್ಮ ಒಳಗಿನ ಪ್ರತಿಭೆಯನ್ನು ಅರಳಿಸಿಕೊಳ್ಳಲು ನಾವು ಇಂಥ ವೇದಿಕೆಯನ್ನು ಬಳಸಿಕೊಳ್ಳಬೇಕು ಅದಕ್ಕಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ ಕತೆ ಕವನ ಪ್ರಬಂಧ ರಚನಾ ಕಮ್ಮಟಗಳನ್ನು  ಏರ್ಪಡಿಸಿ ಮಕ್ಕಳೊಳಗೆ ಅಡಗಿರುವ ಪ್ರತಿಭೆಗೆ ಸ್ವಲ್ಪ ಮಾರ್ಗದರ್ಶನ ನೀಡಿ ವೇದಿಕೆಯನ್ನು ನಿರ್ಮಿಸುತ್ತಿದೆ ಎಂದು ತಿಳಿಸಿದರು.
ಗಾಜನೂರಿನ ಜವಾಹರ್ ನವೋದಯ ಶಾಲೆಯ ಪ್ರಾಂಶುಪಾಲರದ ವೆಲ್ಲಿಯಮ್ಮ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರದ ಬಿ.ಆರ್ ಲವ, ಸಾಹಿತಿ ಸೂರ್ಯ ಕುಮಾರ್, ಸಂಶೋಧನಾ ವಿದ್ಯಾರ್ಥಿ ಎಂ.ಎಸ್ ಕಾವ್ಯ ಮಕ್ಕಳಿಗೆ ಕಥೆ, ಕವನ ಮತ್ತು ಪ್ರಬಂಧ ಕುರಿತು ಮಾತನಾಡಿದರು. ನಿಧಿಗೆ ಕಸಾಪ ಹೋಬಳಿ ಘಟಕದ ಅಧ್ಯಕ್ಷರಾದ ಜಗದೀಶ್, ತಾಲೂಕು ಕಸಾಪ ಕಾರ್ಯದರ್ಶಿ ದಿನೇಶ್ ಹೊಸನಗರ ಉಪಸ್ಥಿತರಿದ್ದರು. ನವೋದಯ ಮಕ್ಕಳ ತಂಡ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ನವೀನ್ ನಿರೂಪಿಸಿ, ರಾಥೋಡ್ ವಂದಿಸಿದರು.

Related posts

ಕಾಂಗ್ರೆಸ್ ನಿಂದ ಗೆದ್ದು ಬೇರೆ ಪಕ್ಷದ ಪರ ಪ್ರಚಾರ ನಡೆಸಿದ್ನಾದ ಲ್ವರು ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹ.

ರೈತರು ಬರ ಪರಿಹಾರ, ಇತರೇ ಸೌಲಭ್ಯ ಪಡೆಯಲು `FID’ ಕಡ್ಡಾಯ.

ಆ.13ರಂದು ಗುರುವಂದನಾ ಹಾಗೂ ವಿಶೇಷ ಸತ್ಸಂಗ ಕಾರ್ಯಕ್ರಮ.