ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಮೂಹ ಸಂವಹನದಿಂದ ನಾವೀನ್ಯ ಯೋಜನೆಗಳು ಸಾಧ್ಯ-ಡಾ.ಶ್ರೀಕಂಠೇಶ್ವರಸ್ವಾಮಿ

ಶಿವಮೊಗ್ಗ : ವಿದ್ಯಾರ್ಥಿಗಳು ಸಮೂಹ ಸಂವಹನದೊಂದಿಗೆ ಬೆರೆತು ನಾವೀನ್ಯ ಯೋಜನೆಗಳನ್ನು ರೂಪಿಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮಾಜಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಶ್ರೀಕಂಠೇಶ್ವರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಉಪನ್ಯಾಸಕರಿಗಾಗಿ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಪೇಟೆಂಟ್ ಫೈಲಿಂಗ್ ಮತ್ತು ಸಂಶೋಧನಾ ಪ್ರಸ್ತಾವನೆಗಳ ಬರವಣೆಗೆ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹ ತಮ್ಮ ಸುತ್ತಲಿನ ವಾತಾವರಣದಲ್ಲಿರುವ ಸಮಸ್ಯೆಗಳನ್ನೇ ನಾವೀನ್ಯತೆಯ ಮೂಲಕ ಪರಿಹರಿಸುವ ಯೋಚನೆಗಳನ್ನು ಮಾಡಬೇಕಿದೆ. ಅಂತಹ ಪ್ರೇರಣಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸುವ ಕಾರ್ಯ ಉಪನ್ಯಾಸಕರಿಂದ ಆಗಬೇಕಿದೆ.
ವಿದ್ಯಾರ್ಥಿಗಳ ನಾವೀನ್ಯ ಯೋಜನೆಗಳನ್ನು ಗೌರವಿಸುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಿ. ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ನಿಮ್ಮನ್ನು ಮತ್ತು ವಿದ್ಯಾರ್ಥಿಗಳನ್ನು  ಸೀಮಿತಗೊಳಿಸ ಬೇಡಿ ಎಂದು ಉಪನ್ಯಾಸಕರಿಗೆ ಕಿವಿ ಮಾತು ಹೇಳಿದರು.
ಎಂಎಸ್ಎಂಇ ಮೂಲಕ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಶೀಲತೆ ಹೆಚ್ಚು ಬೆಂಬಲವನ್ನು ನೀಡುತ್ತಿದೆ. ವಿ.ಜಿ.ಎಸ್.ಟಿ, ಕೆ.ಎಸ್.ಸಿ.ಎಸ್.ಟಿ ಮೂಲಕ ನಾವೀನ್ಯ ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಲು ಉತ್ತೇಜನೆ ನೀಡುತ್ತಿದೆ ಎಂದು ಹೇಳಿದರು.
ಕೆ.ಎಸ್.ಸಿ.ಎಸ್.ಟಿ ಪೇಟೆಂಟ್ ಮಾಹಿತಿ ಕೇಂದ್ರದ ಎಂ.ಜಿ.ನಾಗಾರ್ಜುನ ಮಾತನಾಡಿ, ಕಲೆ ವಾಣಿಜ್ಯ ವಿಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಪೇಟೆಂಟ್ ಫೈಲಿಂಗ್ ಮಾಡಬಹುದಾಗಿದೆ. ಕೋಟ್ಯಾಂತರ ರೂಪಾಯಿ ಆರ್ಥಿಕ ವ್ಯವಹಾರ ಕೇವಲ ನಾವೀನ್ಯ ಯೋಚನೆಯ ಪೇಟೆಂಟ್ ಫೈಲಿಂಗ್ ಮಾಡುವುದರ ಮೂಲಕ ನಡೆಸುತ್ತಿರುವವರು ಅನೇಕರಿದ್ದಾರೆ. ನಾವೀನ್ಯ ಯೋಚನೆಗೆ ಅಂತಹ ಶಕ್ತಿಯಿದೆ. ದೇಶದ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲಿ ನಾವೀನ್ಯ ಯೋಚನೆಗಳು ಸ್ಥಾನ ಪಡೆದಿದೆ ಎಂದು ಹೇಳಿದರು.
ಎನ್ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ಪ್ರೌಢಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪೇಟೆಂಟ್ ಫೈಲಿಂಗ್ ಮಾಡಿದ ಅನೇಕ ಉದಾಹರಣೆಗಳಿವೆ. ಉಪನ್ಯಾಸಕರು ತಾಂತ್ರಿಕವಾಗಿ ಮತ್ತು ನಾವೀನ್ಯಯುತವಾಗಿ ಉನ್ನತಿಕರಣ ಹೊಂದಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲರಾದ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಕೆ.ಎಲ್.ಅರುಣ್ ಕುಮಾರ್, ಸಿ.ಎಂ.ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಸೆಪ್ಟಂಬರ್ ನಿಂದ ತರಕಾರಿ ಬೆಲೆ ಇಳಿಕೆ

ಜಿಮೇಲ್,ಯೂಟ್ಯೂಬ್ ಬಳಕೆದಾರರಿಗೆ ` ಶಾಕ್ : ಈ ಖಾತೆಗಳನ್ನ ಡಿಲೀಟ್ ಮಾಡಲು ಮುಂದಾದ ಗೂಗಲ್..

ಶಿಕ್ಷಣದ ಜತೆಯಲ್ಲಿ ಮೌಲ್ಯಯುತ ಅಂಶಗಳ ಕಲಿಕೆ ಮುಖ್ಯ-ಬಿ.ಕೃಷ್ಣಪ್ಪ