ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಗೂಗಲ್ ಮ್ಯಾಪ್ ನಲ್ಲೂ ತ್ರಿವರ್ಣ ಧ್ವಜ ಜೊತೆ ಭಾರತ ಹೆಸರು..!

ನವದೆಹಲಿ: ದೇಶದಲ್ಲಿ ಇಂಡಿಯಾ ಬದಲಾಗಿ ಭಾರತ್ ಎಂಬ ವಿಚಾರ ಭಾರಿ ಚರ್ಚೆಯಲ್ಲಿದೆ. ಈ ಮಧ್ಯೆ ಗೂಗಲ್ ಮ್ಯಾಪ್ ಇದೀಗ ಭಾರತ ಹೆಸರನ್ನು ಉಲ್ಲೇಖಿಸಿದೆ. ಗೂಗಲ್ ಮ್ಯಾಪ್ನಲ್ಲಿ ಭಾರತ ಎಂದು ಸರ್ಚ್ ಮಾಡಿದರೆ ತ್ರಿವರ್ಣ ಧ್ವಜ ಸೇರಿ ಭಾರತ ಮ್ಯಾಪ್ ತೋರಿಸಲಿದೆ.

ಜಿ20 ಶೃಂಗಸಭೆಯಲ್ಲಿ ಪ್ರಸೆಡೆಂಟ್ ಆಫ್ ಭಾರತ್, ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಉಲ್ಲೇಖಿಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂಡಿಯಾ ಬದಲು ಭಾರತ ಅನ್ನೋ ಹೆಸರನ್ನು ಬಳಕೆ ಅಧಿಕೃತಗೊಳಿಸಿತು. ಇಂಡಿಯಾ ಹಾಗೂ ಭಾರತ ಹೆಸರಿನ ಕುರಿತು ಚರ್ಚೆಗಳು ತೀವ್ರವಾಗಿ ನಡೆದಿದೆ. ಪರವಾಗಿ ಪ್ರಚಾರ, ಅಪಸ್ವರಗಳು ವ್ಯಕ್ತವಾಗಿದೆ.

ಇಷ್ಟು ದಿನ ಇಂಡಿಯಾ ಎಂದು ಸರ್ಚ್ ಮಾಡಿದರೆ ಮಾತ್ರ ಭಾರತದ ಮ್ಯಾಪನ್ನು ತೋರಿಸುತ್ತಿತ್ತು. ಆದರೆ ಇದೀಗ ಕನ್ನಡದಲ್ಲಿ ಭಾರತ ಅಥವಾ ಹಿಂದಿ, ಇಂಗ್ಲೀಷ್ ಸೇರಿದಂತೆ ಇತರ ಭಾಷೆಗಳಲ್ಲಿ ಸರ್ಚ್ ಮಾಡಿದರೆ ಭಾರತದ ಮ್ಯಾಪನ್ನು ಗೂಗಲ್ ತೋರಿಸುತ್ತದೆ. ವಿಶೇಷ ಅಂದರೆ ಭಾರತ ಹೆಸರಿನ ಜೊತೆಗೆ ತ್ರಿವರ್ಣ ಧ್ವಜವೂ ಪ್ರದರ್ಶಿಸುತ್ತದೆ.

ಈ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ ಸಂವಿಧಾನವು ವಾಸ್ತವವಾಗಿ ಇಂಡಿಯಾ ಹಾಗೂ ಎರಡೂ ಹೆಸರುಗಳನ್ನು ಬಳಸುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಎರಡೂ ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿವೆ’ ಎಂದರು. ‘ಆದರೆ, ನಾವು ನಮ್ಮ ವಿಪಕ್ಷ ಒಕ್ಕೂಟಕ್ಕೆ ಭಾರತ ಎಂದು ಹೆಸರಿಸಿದ್ದರಿಂದ ಸರ್ಕಾರ ಸ್ವಲ್ಪ ಕೆರಳಿಸಿದಂತಿದೆ ಮತ್ತು ಅದು ಅವರೆಲ್ಲರಿಗೂ ಇದರಿಂದ ತಲೆಬಿಸಿ ಆಗಿರಬಹುದು. ಹೀಗಾಗಿ ಕೇಂದ್ರ ಸರ್ಕಾರವು ಹೆಸರನ್ನು ಬದಲಾಯಿಸಲು ನಿರ್ಧರಿಸಿದಂತಿದೆ’ ಎಂದು ಹೇಳಿದರು.

ಇದೀಗ ಕರ್ನಾಟಕದಲ್ಲೂ ಹೆಸರು ಬದಲಾವಣೆ ಚರ್ಚೆ ನಡೆಯುತ್ತಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವುದರಿಂದ ಆರಂಭಗೊಂಡ ಚರ್ಚೆ ಇದೀಗ ಕರ್ನಾಟಕ ಹೆಸರನ್ನು ಬಸವಣ್ಣನ ನಾಡು ಎಂದು ಮರುನಾಮಕರಣ ಮಾಡಬೇಕು ಅನ್ನೋ ಚರ್ಚೆಗಳು ನಡೆಯುತ್ತಿದೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈ ಚರ್ಚೆ ಶುರುವಾಗಿದೆ.

 

Related posts

ಅಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತೆ ಉತ್ತರಿಸಲಿ – ಬಿಎಲ್ ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಕೇಸ್ ತಡೆಗೆ ‘ಆರೋಗ್ಯ ಕವಚ ಯಂತ್ರ’ ಸ್ಥಾಪನೆ..!

ಶೆಟ್ಟರ್ ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ-ಬಿಜೆಪಿ, ಜೆಡಿಎಸ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್