ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದಲ್ಲಿ ಅತಿವೃಷ್ಠಿ, ಬರಗಾಲ: ಬೇಳೆಕಾಳುಗಳ ಬೆಲೆಯಲ್ಲಿ ಏರಿಕೆ..

ಬೆಂಗಳೂರು: ರಾಜ್ಯದ  ಉತ್ತರ ಕರ್ನಾಟಕ  ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಠಿ, ಬರಗಾದಿಂದಾಗಿ ಬೇಳೆಕಾಳುಗಳ ಇಳುವರಿ ಕುಸಿತ ಕಂಡಿದ್ದು ಬೇಳೆಕಾಳುಗಳ ಬೆಲೆ ಏರಿಕೆಯಾಗಿದೆ.   

ಇಳುವರಿ ಕಡಿಮೆಯಾದ ಹಿನ್ನೆಲೆ ಬೆಂಗಳೂರಿಗೆ ಬರುತ್ತಿದ್ದ ಸಾಕಷ್ಟು ದಿನಸಿ ಸಮಾಗ್ರಿಗಳ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ತೊಗರಿ ಬೇಳೆ, ಹೆಸರು ಬೇಳೆ, ಜೋಳ, ಉದ್ದಿನ ಬೇಳೆ, ಅಕ್ಕಿ ಸೇರಿದಂತೆ ಆಹಾರಧಾನ್ಯಗಳ ಬೆಲೆ ಹೆಚ್ಚಳವಾಗಿದೆ. 2021-22ರ ರಲ್ಲಿ ಆಹಾರಧಾನ್ಯಗಳು 143.68 ಲಕ್ಷ ಟನ್ ಉತ್ಪಾದನೆಯಾಗಿದ್ದರೇ, ಈ ವರ್ಷ 2022-23ರ ರಲ್ಲಿ ಆಹಾರ ಧಾನ್ಯಗಳು 135.48 ಲಕ್ಷ ಟನ್ ಉತ್ಪಾದನೆಗೆ ಕುಸಿತ ಕಂಡಿದೆ.

ಬೇಳೆಕಾಳುಗಳ ದರ ಶೇ 20 ರಿಂದ 25 ರಷ್ಟು ಏರಿಕೆಯಾಗಿದೆ. ಅಗತ್ಯ ದಿನಸಿ ಸಾಮಾಗ್ರಿಗಳ ಬೇಲೆ ಡಿಸೆಂಬರ್ ಬಳಿಕ ಮತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಶೇ.30ರಷ್ಟು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇದು ದುಪ್ಪಟ್ಟಾಗುವ ಸಾಧ್ಯತೆ ಇದೆ. ಇದರಿಂದ ಸಿಲಿಕಾನ್ ಸಿಟಿ ಜನರಿಗೆ ಬಿಗ್ ಟೆನ್ಷನ್ ಶುರುವಾಗಿದೆ.

ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಸಂಕಷ್ಟ ಎದುರಾಗಿದೆ. ನೀರಲ್ಲದೆ ಬೆಳೆಗಳು ಒಣಗುತ್ತಿವೆ. ರಾಜ್ಯದ 161 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಇದರಿಂದ ಸಿರಿಧ್ಯಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಈ ಬೆಲೆ ಏರಿಕೆಯ ಬಿಸಿ ಬೆಂಗಳೂರಿನ ಜನರಿಗೆ ತಟ್ಟಿದೆ.

 

Related posts

ತುಳಜಾಭವಾನಿ ದೇವಸ್ಥಾನದಲ್ಲಿ 84 ನೇ ವರ್ಷದ ಶ್ರೀ ಗಣೇಶೋತ್ಸವ.

ವಿಪಕ್ಷ ನಾಯಕರ ಆಯ್ಕೆ ವಿಚಾರ: ಶಾಸಕರ ಅಭಿಪ್ರಾಯ ಪಡೆದು ತೀರ್ಮಾನ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟ.