ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದಿನಕ್ಕೆ ಕನಿಷ್ಟ 4 ಸಾವಿರ ಹೆಜ್ಜೆ ಹಾಕಿದ್ರೆ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಗೊತ್ತೆ..?

ನವದೆಹಲಿ:  ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ. ದೈಹಿಕ ವ್ಯಾಯಾಮವಿಲ್ಲದ ಜೀವನ ಮುಂತಾದ ಕಾರಣಗಳಿಂದ ಹಲವು ರೋಗಗಳು ಜನರನ್ನ ಬಾಧಿಸುತ್ತಿವೆ. ಈ ಮಧ್ಯೆ ಹೃದಯಸಂಬಂಧಿ ಖಾಯಿಲೆಗಳಿಗೆ ಎಷ್ಟೋ ಮಂದಿ ಬಲಿಯಾಗುತ್ತಿದೆ. ಈ ಮಧ್ಯೆ ದೇಹಕ್ಕೆ ವ್ಯಾಯಾಮ ಮುಖ್ಯ ಇಲ್ಲದಿದ್ದರೇ ದೇಹ ಜಡ್ಡುಗಟ್ಟಿದಂತಾಗುತ್ತದೆ. ದಿನನಿತ್ಯ ಕೂತಲ್ಲೆ ಕುಳಿತರೇ, ಏನೂ ದೈಹಿಕ ವ್ಯಾಯಾಮಾಗಳನ್ನ ಮಾಡದಿದ್ದರೇ ಖಾಯಿಲೆಗಳು ಬರುವುದು ಕಟ್ಟಿಟ್ಟ ಬುತ್ತಿ. ಈ ನಡುವೆ ದಿನಕ್ಕೆ ಕನಿಷ್ಟ 4 ಸಾವಿರ ಹೆಜ್ಜೆಗಳನ್ನಾಕಿದರೇ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು ಎಂಬ ವಿಚಾರ ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಹೌದು, ನಿತ್ಯ ಅಗತ್ಯ ವಾಕಿಂಗ್ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ. ದಿನಕ್ಕೆ ಕನಿಷ್ಠ 3967 ಹೆಜ್ಜೆಗಳನ್ನು ಹಾಕುವುದರಿಂದ ನಿಮ್ಮ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು. ನಿತ್ಯ ನೀವು ಕನಿಷ್ಠ 2337 ಹೆಜ್ಜೆಗಳನ್ನು ಹಾಕಿದರೆ ಹೃದಯ ಸಂಬಂಧಿ ಕಾಯಿಲೆಯನ್ನು ಆದಷ್ಟು ಕಡಿಮೆ ಮಾಡಬಹುದು. ಈ ಸಂಬಂಧ ಸಂಶೋಧಕರು ಸುಮಾರು 2,26,889 ಜನರ ಮೇಲೆ ಈ ಅಧ್ಯಯನ ನಡೆಸಿ,  ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತಿ ದಿನವೂ ಬಿರುಸಿನ ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಬಹಿರಂಗ ಕೂಡಾ ಆಗಿದೆ.

ವಿವಿಧ 17 ಬಗೆಯ ಪ್ರಯೋಗಗಳನ್ನ ಇವರೆಲ್ಲ ಮೇಲೆ ಮಾಡಿ, ಈ ಅಂಶಗಳನ್ನು ಗುರುತಿಸಲಾಗಿದೆ.  ನೀವು ನಾಲ್ಕು ಸಾವಿರ ಹೆಜ್ಜೆಗಳನ್ನೇ ಹಾಕಬೇಕೆಂದೇನೂ ಇಲ್ಲ. ಜಸ್ಟ್ ಸಾವಿರ ಹೆಜ್ಜೆಗಳನ್ನು ದಿನವೂ ಹಾಕಿದರೆ ಸಾಕು ಶೇ 15 ರಷ್ಟು ಅಪಾಯವನ್ನು ಕಡಿಮೆ ಮಾಡಬಹುದು ಅನ್ನುತ್ತಾರೆ ತಜ್ಞರು.

ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 500 ರಿಂದ 1,000 ಹೆಜ್ಜೆಗಳನ್ನು ನಡೆಯುವುದರಿಂದ  ಹೃದಯ ಕಾಯಿಲೆಗಳಿಂದ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬ ಅಂಶವನ್ನು ಗಮನಿಸಲಾಗಿದೆ

ದುರ್ದೈವದ ಸಂಗತಿ ಎಂದರೆ ವಿಶ್ವದ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನರು ದೈಹಿಕ ಚಟುವಟಿಕೆಯನ್ನೇ ಮಾಡುವುದಿಲ್ಲ ಎನ್ನುತ್ತವೆ ಸಾಕಷ್ಟು ಅಧ್ಯಯನದ ವರದಿಗಳು. ಅಧ್ಯಯನದ ಪ್ರಕಾರ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತ್ತು ಕಡಿಮೆ ಆದಾಯದ ದೇಶಗಳಿಗಿಂತ ಹೆಚ್ಚಿನ ಆದಾಯದ ದೇಶಗಳಲ್ಲಿ ಹೆಚ್ಚಿನ ಜನರು ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ.ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ  ಅಂಕಿ – ಅಂಶಗಳ ಪ್ರಕಾರ, ದೈಹಿಕ ಚಟುವಟಿಕೆ  ಕೊರತೆ  ವಿಶ್ವದಲ್ಲಿ ಸಾವಿಗೆ ನಾಲ್ಕನೇ ಅತಿ ದೊಡ್ಡ ಕಾರಣವಾಗಿದೆ. ದೈಹಿಕ ಚಟುವಟಿಕೆಯ ಕೊರತೆಯು ಪ್ರತಿ ವರ್ಷ 3.2 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆಯಂತೆ.

ದಿನವೊಂದಕ್ಕೆ 1000 ಹೆಜ್ಜೆ ನಡೆಯುವುದರಿಂದ ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಈ ಅಧ್ಯಯನ ಖಚಿತ ಪಡಿಸಿದೆ. ಮತ್ತೊಂದೆಡೆ, ನಿತ್ಯ ಕನಿಷ್ಠ 500 ಹೆಜ್ಜೆ ನಡೆಯುವುದರಿಂದ ಹೃದ್ರೋಗದಿಂದ ಉಂಟಾಗುವ ಮರಣವನ್ನು ಶೇಕಡಾ 7 ರಷ್ಟು ಕಡಿಮೆ ಮಾಡಬಹುದು ಅನ್ನುತ್ತೆ ಈ ವರದಿ.ಯಾವುದೇ ಕಾರಣದಿಂದ ಸಾವುಗಳನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 4000 ಹೆಜ್ಜೆಗಳಷ್ಟು ನಡೆಯುವುದರಿಂದ ಎಲ್ಲ ರೋಗಗಳಿಂದ ದೂರು ಇರಬಹುದು ಅಂತಾರೆ ಪೋಲೆಂಡ್ನ ಲೋಡ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಮಾಸಿಜ್ ಬನಾಚ್. ವಾಕಿಂಗ್ ಮಾಡುವುದು ಪುರುಷರು ಮತ್ತು ಮಹಿಳೆಯಲ್ಲಿ ಸಮಾನ ಪ್ರಭಾವ ಬೀರುತ್ತದೆ ಎನ್ನುತಾರೆ ಅವರು.ದಿನಕ್ಕೆ ಕನಿಷ್ಟ 4 ಸಾವಿರ ಹೆಜ್ಜೆ ಹಾಕಿದ್ರೆ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಗೊತ್ತೆ..?
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ. ದೈಹಿಕ ವ್ಯಾಯಾಮವಿಲ್ಲದ ಜೀವನ ಮುಂತಾದ ಕಾರಣಗಳಿಂದ ಹಲವು ರೋಗಗಳು ಜನರನ್ನ ಬಾಧಿಸುತ್ತಿವೆ. ಈ ಮಧ್ಯೆ ಹೃದಯಸಂಬಂಧಿ ಖಾಯಿಲೆಗಳಿಗೆ ಎಷ್ಟೋ ಮಂದಿ ಬಲಿಯಾಗುತ್ತಿದೆ. ಈ ಮಧ್ಯೆ ದೇಹಕ್ಕೆ ವ್ಯಾಯಾಮ ಮುಖ್ಯ ಇಲ್ಲದಿದ್ದರೇ ದೇಹ ಜಡ್ಡುಗಟ್ಟಿದಂತಾಗುತ್ತದೆ. ದಿನನಿತ್ಯ ಕೂತಲ್ಲೆ ಕುಳಿತರೇ, ಏನೂ ದೈಹಿಕ ವ್ಯಾಯಾಮಾಗಳನ್ನ ಮಾಡದಿದ್ದರೇ ಖಾಯಿಲೆಗಳು ಬರುವುದು ಕಟ್ಟಿಟ್ಟ ಬುತ್ತಿ. ಈ ನಡುವೆ ದಿನಕ್ಕೆ ಕನಿಷ್ಟ 4 ಸಾವಿರ ಹೆಜ್ಜೆಗಳನ್ನಾಕಿದರೇ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು ಎಂಬ ವಿಚಾರ ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಹೌದು, ನಿತ್ಯ ಅಗತ್ಯ ವಾಕಿಂಗ್ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ. ದಿನಕ್ಕೆ ಕನಿಷ್ಠ 3967 ಹೆಜ್ಜೆಗಳನ್ನು ಹಾಕುವುದರಿಂದ ನಿಮ್ಮ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು. ನಿತ್ಯ ನೀವು ಕನಿಷ್ಠ 2337 ಹೆಜ್ಜೆಗಳನ್ನು ಹಾಕಿದರೆ ಹೃದಯ ಸಂಬಂಧಿ ಕಾಯಿಲೆಯನ್ನು ಆದಷ್ಟು ಕಡಿಮೆ ಮಾಡಬಹುದು. ಈ ಸಂಬಂಧ ಸಂಶೋಧಕರು ಸುಮಾರು 2,26,889 ಜನರ ಮೇಲೆ ಈ ಅಧ್ಯಯನ ನಡೆಸಿ, ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತಿ ದಿನವೂ ಬಿರುಸಿನ ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಬಹಿರಂಗ ಕೂಡಾ ಆಗಿದೆ.
ವಿವಿಧ 17 ಬಗೆಯ ಪ್ರಯೋಗಗಳನ್ನ ಇವರೆಲ್ಲ ಮೇಲೆ ಮಾಡಿ, ಈ ಅಂಶಗಳನ್ನು ಗುರುತಿಸಲಾಗಿದೆ. ನೀವು ನಾಲ್ಕು ಸಾವಿರ ಹೆಜ್ಜೆಗಳನ್ನೇ ಹಾಕಬೇಕೆಂದೇನೂ ಇಲ್ಲ. ಜಸ್ಟ್ ಸಾವಿರ ಹೆಜ್ಜೆಗಳನ್ನು ದಿನವೂ ಹಾಕಿದರೆ ಸಾಕು ಶೇ 15 ರಷ್ಟು ಅಪಾಯವನ್ನು ಕಡಿಮೆ ಮಾಡಬಹುದು ಅನ್ನುತ್ತಾರೆ ತಜ್ಞರು.
ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 500 ರಿಂದ 1,000 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯ ಕಾಯಿಲೆಗಳಿಂದ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬ ಅಂಶವನ್ನು ಗಮನಿಸಲಾಗಿದೆ
ದುರ್ದೈವದ ಸಂಗತಿ ಎಂದರೆ ವಿಶ್ವದ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನರು ದೈಹಿಕ ಚಟುವಟಿಕೆಯನ್ನೇ ಮಾಡುವುದಿಲ್ಲ ಎನ್ನುತ್ತವೆ ಸಾಕಷ್ಟು ಅಧ್ಯಯನದ ವರದಿಗಳು. ಅಧ್ಯಯನದ ಪ್ರಕಾರ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತ್ತು ಕಡಿಮೆ ಆದಾಯದ ದೇಶಗಳಿಗಿಂತ ಹೆಚ್ಚಿನ ಆದಾಯದ ದೇಶಗಳಲ್ಲಿ ಹೆಚ್ಚಿನ ಜನರು ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ.ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ – ಅಂಶಗಳ ಪ್ರಕಾರ, ದೈಹಿಕ ಚಟುವಟಿಕೆ ಕೊರತೆ ವಿಶ್ವದಲ್ಲಿ ಸಾವಿಗೆ ನಾಲ್ಕನೇ ಅತಿ ದೊಡ್ಡ ಕಾರಣವಾಗಿದೆ. ದೈಹಿಕ ಚಟುವಟಿಕೆಯ ಕೊರತೆಯು ಪ್ರತಿ ವರ್ಷ 3.2 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆಯಂತೆ.
ದಿನವೊಂದಕ್ಕೆ 1000 ಹೆಜ್ಜೆ ನಡೆಯುವುದರಿಂದ ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಈ ಅಧ್ಯಯನ ಖಚಿತ ಪಡಿಸಿದೆ. ಮತ್ತೊಂದೆಡೆ, ನಿತ್ಯ ಕನಿಷ್ಠ 500 ಹೆಜ್ಜೆ ನಡೆಯುವುದರಿಂದ ಹೃದ್ರೋಗದಿಂದ ಉಂಟಾಗುವ ಮರಣವನ್ನು ಶೇಕಡಾ 7 ರಷ್ಟು ಕಡಿಮೆ ಮಾಡಬಹುದು ಅನ್ನುತ್ತೆ ಈ ವರದಿ.ಯಾವುದೇ ಕಾರಣದಿಂದ ಸಾವುಗಳನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 4000 ಹೆಜ್ಜೆಗಳಷ್ಟು ನಡೆಯುವುದರಿಂದ ಎಲ್ಲ ರೋಗಗಳಿಂದ ದೂರು ಇರಬಹುದು ಅಂತಾರೆ ಪೋಲೆಂಡ್ನ ಲೋಡ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಮಾಸಿಜ್ ಬನಾಚ್. ವಾಕಿಂಗ್ ಮಾಡುವುದು ಪುರುಷರು ಮತ್ತು ಮಹಿಳೆಯಲ್ಲಿ ಸಮಾನ ಪ್ರಭಾವ ಬೀರುತ್ತದೆ ಎನ್ನುತಾರೆ ಅವರು.

Related posts

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಬಂಗಾರಪ್ಪನವರು – ದೀನಬಂಧು ಸೇವಾಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಅಭಿಮತ

ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ಭಾಗಿಯಾಗಲಿದ್ದಾರೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ.

ನನ್ನನ್ನು ತಡೆಯುವವರ ಮೇಲೆ ಸಿಟ್ಟಿಲ್ಲ. ಅವರು ನಮ್ಮ ಸ್ನೇಹಿತರೆ- ಚಕ್ರವರ್ತಿ ಸೂಲಿಬೆಲೆ.