ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

 ಮುನಿರತ್ನಗೆ ಅನುದಾನ ಬೇಕಿದ್ರೆ ಸಿಎಂ ಬಳಿ ಹೋಗಿ ಕೇಳಲಿ- ಸಂಸದ ಡಿ.ಕೆ ಸುರೇಶ್  ತಿರುಗೇಟು.

ಬೆಂಗಳೂರು: ತನ್ನ ಕ್ಷೇತ್ರದ ಅನುದಾನ ಕಡಿತ ಮಾಡಿದ ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕ ಮುನಿರತ್ನಗೆ ಸಂಸದ ಡಿ.ಕೆ ಸುರೇಶ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಮುನಿರತ್ನಗೆ ಅನುದಾನ ಬೇಕಿದ್ದರೇ ಸಿಎಂ ಬಳಿ ಹೋಗಿ ಕೇಳಲಿ.  ನಾನು ಸರ್ಕಾರ ಅಲ್ಲ ಸರ್ಕಾರ ಅಂದರೆ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಇದ್ದಾರೆ. ಅವರ ಬಳಿಯೂ ಕೇಳಲಿ. ಮುನಿರತ್ನ ಹೇಳಿದ ಹಾಗೆ ನಾನು ಸಾಮಾನ್ಯ ಸಂಸದ ಅಷ್ಟೆ ಎಂದರು.

ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶವಿದೆ. ಅಭಿವೃದ್ದಿ ವಿಚಾರದಲ್ಲಿ ನಾನು ಎಲ್ಲರಿಗೂ ಸಹಕಾರ ಕೊಡುತ್ತೇನೆ. ಬಿಬಿಎಂಪಿ ಚೀಫ್ ಕಮಿಷನರ್ ಗೆ ಪತ್ರ ಬರೆದು ದೂರು ನೀಡಿದ್ದರು ವಾರ್ಡ್ ಒಂದರಲ್ಲಿ ಅಕ್ರಮ ನಡೆದಿದೆ ಎಂದು ದೂರು ಬರೆದಿದ್ದರು.  ಮುನಿರತ್ನ ಪ್ರೊಡ್ಯೂಸರ್ ಇನ್ನೂ ಏನೇನು ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ ನೋಡೋಣ. ಶಾಸಕರು ಹಣ ಎಲ್ಲೆಲ್ಲಿ ಹಾಕಿಕೊಂಡ್ರೋ ಗೊತ್ತಿಲ್ಲ. ಯಾವ ರಜಕಾಲುವೆ ಮುಚ್ಚಲು ಹಣ ಹಾಕಿಕೊಂಡ್ರು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

Related posts

8ನೇ ಖಂಡವನ್ನು ಪತ್ತೆಹಚ್ಚಿದ ವಿಜ್ಞಾನಿಗಳು: ಇದರ ವಿಶೇಷತೆ ಏನು…?

ಪೆಟ್ರೋಲ್ ,ಡೀಸೆಲ್, ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಚಿಂತನೆ.

ಕಾವ್ಯಕ್ಕೆ ಯಾವುದೇ ಕಟ್ಟಳೆಗಳು ಇರಬಾರದು-ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ