ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಸಹಾಯಧನ ಭಾರಿ ಹೆಚ್ಚಳ

ನವದೆಹಲಿ: ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು UGC JRF, SRF  ಸಹಾಯಧನ ಭಾರಿ ಹೆಚ್ಚಳ ಮಾಡಲಾಗಿದೆ.

ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂಶೋಧನಾ ಫೆಲೋಶಿಪ್ ಸಹಾಯವನ್ನು ಹೆಚ್ಚಿಸಲಾಗಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಮಾಹಿತಿಯ ಪ್ರಕಾರ,  ಫೆಲೋಶಿಪ್ ಮೊತ್ತದಲ್ಲಿನ ಹೆಚ್ಚಳವು ಜನವರಿ 2023 ರಿಂದ ಪೂರ್ವಾನ್ವಯವಾಗಲಿದೆ.

ಜೂನಿಯರ್ ರಿಸರ್ಚ್ ಫೆಲೋಶಿಪ್(JRF) ಅನ್ನು 31,000 ರೂ. ನಿಂದ 37,000 ರೂ.ಗೆ ಏರಿಸಲಾಗಿದೆ ಮತ್ತು ಹಿರಿಯ ಸಂಶೋಧನಾ ಫೆಲೋಶಿಪ್(SRF) ತಿಂಗಳಿಗೆ 35,000 ರೂ.ನಿಂದ 42,000 ರೂ.ಗೆ ಏರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಿಸರ್ಚ್ ಅಸೋಸಿಯೇಟ್-I ತಿಂಗಳಿಗೆ 57,000 ರೂ.ನಿಂದ 58,000 ರೂ.ಗೆ ಹೆಚ್ಚಿಸಲಾಗಿದೆ. ರಿಸರ್ಚ್ ಅಸೋಸಿಯೇಟ್-II ತಿಂಗಳಿಗೆ 49,000 ರೂ.ನಿಂದ ರೂ 61,000 ರೂ.ಗೆ ಹೆಚ್ಚಳ ಮಾಡಲಾಗಿದೆ.

ಅದೇ ರೀತಿ ರಿಸರ್ಚ್ ಅಸೋಸಿಯೇಟ್-3ಗೆ 13,000 ರೂ. ಹೆಚ್ಚಳವಾಗಲಿದೆ. ಅವರ ಫೆಲೋಶಿಪ್ 54,000 ರೂ. ಬದಲಿಗೆ ತಿಂಗಳಿಗೆ 67,000 ರೂ. ಆಗಿರುತ್ತದೆ.

ಫೆಲೋಶಿಪ್ ಮೊತ್ತವನ್ನು ಹೆಚ್ಚಿಸಲು ಕೇಂದ್ರವು ಹೆಚ್ಚುವರಿ 725 ಕೋಟಿ ರೂ. ನೀಡಿದೆ. ಅಖಿಲ ಭಾರತ ಸಂಶೋಧನಾ ವಿದ್ವಾಂಸ ಸಂಘವು ಸಂಶೋಧನಾ ಫೆಲೋಶಿಪ್ನ ಗಾತ್ರವನ್ನು ಹೆಚ್ಚಿಸುವಂತೆ ಒತ್ತಾಯಿಸಿತ್ತು.

 

Related posts

ಸಮಪ್ರಮಾಣದ ಪರಿಹಾರ, ಮನೆಗೊಂದು ಉದ್ಯೋಗ, ಸೈಟ್ ಗಾಗಿನ ನಿರಾಶ್ರಿತರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ. 

ಪ್ರತಿ ಐವರಲ್ಲಿ ಇಬ್ಬರು ಭಾರತೀಯರಿಗೆ ಆನ್ ಲೈನ್ ಶಾಪಿಂಗ್ ಒಲವು.

ಏಕದಿನ ಏಷ್ಯಾಕಪ್ 2023: ಇಂಡೋ- ಪಾಕ್ ಕದನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.