ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸಚಿವ ಎಸ್.ಎಸ್ ಮಲ್ಲಿಕಾರ್ಜುನರನ್ನ ಭೇಟಿ: ಭದ್ರಾ ಅಣೆಕಟ್ಟೆಯಿಂದ ನೀರು ಬಿಡುವ ವಿಚಾರ ಚರ್ಚಿಸಿದ ಹೆಚ್.ಆರ್. ಬಸವರಾಜಪ್ಪ

ಶಿವಮೊಗ್ಗ: ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನರವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪನವರು ಭದ್ರಾ ಅಣೆಕಟ್ಟೆಯಿಂದ ನೀರು ಬಿಡುವ ವಿಚಾರವಾಗಿ ಭೇಟಿ ಮಾಡಿದರು.
ಅಣೆಕಟ್ಟೆಯಲ್ಲಿ ಈಗಿರುವ ನೀರಿನಲ್ಲಿ ಭದ್ರಾ ಬಲದಂಡೆಯಲ್ಲಿ 2650ಕ್ಯೂಸೆಕ್ಸ್, ಎಡದಂಡೆಯಲ್ಲಿ 380ಕ್ಯೂಸೆಕ್ಸ್ ಹರಿಸಿದರೆ 100ದಿನಗಳಿಗೆ ಸಾಕಾಗುತ್ತದೆ. ಈ ಪ್ರಮಾಣದಲ್ಲಿ ನೀರು ಹರಿಸಿದರೆ ನಾಲಾ ಕೊನೆಅಂಚಿನ ರೈತರಿಗೆ ನೀರು ತಲುಪುವುದಿಲ್ಲ. ಈ ಕಾರಣದಿಂದಾಗಿ ಹಿಂದಿನ ವರ್ಷಗಳಲ್ಲಿ ಅಣೆಕಟ್ಟೆ ತುಂಬಿದಾಗ ಬಲದಂಡೆಯಲ್ಲಿ 3200ಕ್ಯೂಸೆಕ್ಸ್, ಎಡದಂಡೆಯಲ್ಲಿ 480ಕ್ಯೂಸೆಕ್ಸ್ ನೀರು ಹರಿಸಿದರೆ ನಾಲಾ ಕೊನೆ ಭಾಗದ ರೈತರಿಗೆ ನೀರು ತಲುಪಿಸಲಾಗುತ್ತದೆ. ಆದರೆ ಈ ಪ್ರಮಾಣದಲ್ಲಿ ನೀರು ಹರಿಸಿದರೆ ಈಗ ಅಣೆಕಟ್ಟೆಯಲ್ಲಿ ಸಂಗ್ರಹವಿರುವ ನೀರು 80ದಿನಗಳಿಗೆ ಮಾತ್ರ ಸಾಕಾಗುತ್ತದೆ.
ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನೂ ಮುಂದಿನ ದಿನಗಳಲ್ಲಿ ಮಳೆ ಬಂದು ಅಣೆಕಟ್ಟೆ ತುಂಬುವ ಸಾಧ್ಯತೆ ಕಡಿಮೆ ಇದೆ. ಆ ಕಾರಣದಿಂದ ತತಕ್ಷಣ ನೀರಾವರಿ ಸಲಹಾ ಸಮಿತಿ, ಸಂಭಂದಪಟ್ಟ ಕೃಷಿ, ತೋಟಗಾರಿಕೆ, ಹವಮಾನ ಇಲಾಖೆ ತಜ್ಞರು, ಶಾಸಕರು, ಮಂತ್ರಿಗಳನ್ನೊಳಗೊಂಡ ಸಭೆಯನ್ನು ಕರೆದು ಚರ್ಚಿಸಿ ಈ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಸಚಿವರನ್ನು ಭೇಟಿ ಮಾಡಿ ತಿಳಿಸಲಾಯಿತು.

ಇದಕ್ಕೆ ಸಂಬಂದಿಸಿದಂತೆ ಸಚಿವರು ತಕ್ಷಣವೇ ಸಭೆ ಕರೆದು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಹೊನ್ನೂರು ಮುನಿಯಪ್ಪ, ಮುಖಂಡರಾದ ಗಿರೀಶ್ ಹಾಜರಿದ್ದರು.

Related posts

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ.

ಲೇಖಕರು, ಬುದ್ದಿಜೀವಿಗಳಿಗೆ ಬೆದರಿಕೆ ಪತ್ರ: ಕ್ರಮಕ್ಕೆ ಆಗ್ರಹಿಸಿ ಸರ್ಕಾರದ  ಬಾಗಿಲು ತಟ್ಟಿದ ಸಾಹಿತಿಗಳು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ: ಅಂಜುಮನ್ ಸಂಸ್ಥೆ ಅರ್ಜಿ ವಜಾ