ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ನೀರಲ್ಲಿ ಮುಳುಗಿದ ಬಾಲಕನನ್ನ ಬದುಕಿಸಿದ ಗಣೇಶ: ಹೇಗೆ ಅಂತಿರಾ..?

ಸೂರತ್: ಹಿಂದೂಗಳ ಪವಿತ್ರ ಹಬ್ಬ ಸಡಗರ ಸಂಭ್ರಮದಿಂದ ಆಚರಿಸುವ ಗಣೇಶ ಹಬ್ಬ ಮುಗಿದು 15 ದಿನ ಕಳೆದಿದ್ದು ಈಗಾಗಲೆ ಗಣೇಶಮೂರ್ತಿ ವಿಸರ್ಜನಾ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಸಮುದ್ರಕ್ಕೆ ವಿಸರ್ಜಿಸಲಾಗಿದ್ದ ಗಣೇಶ ಇದೀಗ ಒಬ್ಬ ಬಾಲಕನ ರಕ್ಷಣೆ ಮಾಡಿದ್ದಾನೆ.

ಹೌದು, ಗುಜರಾತ್ ನ ಡುಮಾಸ್ನಲ್ಲೂ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಲಖನ್ ಎಂಬ ಬಾಲಕ ನಿರಂತರವಾಗಿ 36 ಗಂಟೆಗಳ ಕಾಲ ಸಮುದ್ರದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ, ಕೊನೆಗೆ ಸಾವನ್ನು ಗೆದ್ದು ಬಂದಿದ್ದಾನೆ. ಗಣೇಶನ ವಿಗ್ರಹಕ್ಕೆ ಜೋಡಿಸಿದ್ದ ಮರದ ಸಹಾಯದಿಂದ ಅವರು 36 ಗಂಟೆಗಳ ಕಾಲ ಸಮುದ್ರದಲ್ಲಿಯೇ ಇದ್ದು, ಜೀವ ಉಳಿಸಿಕೊಂಡು ಬಂದಿದ್ದಾನೆ.

ಸೂರತ್ನ ಮೊರಭಾಗಲ್ ಪ್ರದೇಶದ 13 ವರ್ಷದ ಬಾಲಕ ಲಖನ್ ದೇವಿಪೂಜಕ್ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು. ಕುಟುಂಬ ಸಮೇತ ಬಂದಿದ್ದ ಲಖನ್ ಅಂಬಾಜಿ ದರ್ಶನದ ಬಳಿಕ ಡುಮಾಸ್ ಸಮುದ್ರ ತೀರದಲ್ಲಿ ಸ್ನಾನ ಮಾಡುತ್ತಿದ್ದ. ಅಲೆಗಳ ಅಬ್ಬರದಲ್ಲಿ ಅವನ ಕಿರಿಯ ಸಹೋದರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಅವನನ್ನು ರಕ್ಷಿಸಲು ಲಖನ್ ಸಮುದ್ರಕ್ಕೆ ಹಾರಿದ್ದಾನೆ. ಆದರೆ ಸ್ಥಳೀಯರು ಕಿರಿಯ ಸಹೋದರನನ್ನು ರಕ್ಷಿಸಿದ್ದಾರೆ. ಆದರೆ ಲಖನ್ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ

ರಕ್ಷಣಾ ತಂಡ ಲಖನ್ ಗಾಗಿ ಹುಡುಕಾಟ ಆರಂಭಿಸಿದರೂ ಯಶಸ್ಸು ಸಿಕ್ಕಿರಲಿಲ್ಲ. ಲಖನ್ ನ ಶವ ಸಿಕ್ಕರೂ ದೇವರ ಆಶೀರ್ವಾದ ಎಂದು ಸ್ವೀಕರಿಸುತ್ತೇವೆ ಎಂದು ಮನೆಯವರು ಹೇಳಿಕೊಂಡಿದ್ದರು. ಆದರೆ ಲಖನ್ ಅದೃಷ್ಟ ಮತ್ತೆ ಜೀವಂತವಾಗಿ ಮರಳಿಬಂದಿದ್ದಾನೆ. ಇದರಲ್ಲಿ ದೇವರ ಕೃಪೆ ಕೂಡ ಅಡಗಿದೆ.

ಸಮುದ್ರದ ದೊಡ್ಡ ಅಲೆಗಳ ಕೊಚ್ಚಿ ಹೋಗಿದ್ದ ಲಖನ್, 36 ಗಂಟೆಗಳ ಕಾಲ ಸಮುದ್ರದಲ್ಲೇ ಕಳೆದಿದ್ದ.  ಈ ಬಗ್ಗೆ ಅವನೇ ಪ್ರತಿಕ್ರಿಯಿಸಿದ್ದು ನನ್ನ ತಮ್ಮ ಮುಳುಗುತ್ತಿದ್ದ, ನಾನು ಅವನನ್ನು ಉಳಿಸಲು ಅವನ ಹಿಂದೆ ಹೋದೆ. ಆತನನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಕ್ಕೆ ಹೋದೆ. ಅಲ್ಲದೆ ಇದ್ದ ಮೂರು ವ್ಯಕ್ತಿಗಳು ಸಮುದ್ರದಲ್ಲಿ ಈಜುತ್ತಿದ್ದರು. ನಾನು ಅವರನ್ನು ಕಾಪಾಡಲು ಕೂಗಿಕೊಂಡೆ . ಅವರು ನನ್ನ ಸಹಾಯಕ್ಕೆ ಬಂದು ನನ್ನ ಕೈ ಹಿಡಿದರು. ಆದರೆ ನನ್ನ ಕೈ ಜಾರಿತು. ಅಷ್ಟರಲ್ಲಿ ನನ್ನ ಕೈಗೆ ಗಣೇಶ ಮೂರ್ತಿಯನ್ನಿಡುವ ಮಣೆ ಸಿಕ್ಕಿತು, ನಾನು ಅದರ ಮೇಲೆ ಕುಳಿತುಕೊಂಡೆ ಎಂದು ಹೇಳಿದ್ದಾನೆ.

ಮರುದಿನ ಮಧ್ಯಾಹ್ನ ನಾನು ದೊಡ್ಡ ಹಡಗನ್ನು ನೋಡಿದೆ, ಆದರೆ ಅದರೊಳಗೆ ಯಾರು ಕಾಣಿಸಲಿಲ್ಲ. ನಾನು ಕೂಗಿಕೊಂಡೆ ಆದರೆ ನನ್ನ ಧ್ವನಿ ಅವರನ್ನು ತಲುಪಲಿಲ್ಲ. ಹಾಗಾಗಿ ನಾನು ಕೂಗುವುದನ್ನು ನಿಲ್ಲಿಸಿದೆ. ಸಂಜೆಯಾಗುತ್ತಿದ್ದಂತೆ ಇನ್ನೊಂದು ದೋಣಿ ಅಲ್ಲಿಗೆ ಬಂದಿತು. ಆಗ ನಾನು ಕೈ ಬೀಸಿ ಕೂಗಿದೆ, ಇದನ್ನು ನೋಡಿ ನನ್ನ ಬಳಿಗೆ ಬಂದು ಹಗ್ಗ ನೀಡಿ ರಕ್ಷಣೆ ಮಾಡಿದರು.

ಈ ಸಮಯದಲ್ಲಿ ನನಗೆ ತಲೆಸುತ್ತು ಬರುತ್ತಿತ್ತು ಮತ್ತು ಸರಿಯಾಗಿ ಮಾತನಾಡಲೂ ಆಗುತ್ತಿರಲಿಲ್ಲ. ಮೀನುಗಾರರು ನನಗೆ ಆಹಾರವನ್ನು ನೀಡಿದರು. ತಿಂದ ನಂತರ ನಾನು ನಿದ್ರೆಗೆ ಜಾರಿದೆ. ಬಾಲಕನನ್ನು ರಕ್ಷಿಸಿದ ಮೀನುಗಾರರೊಬ್ಬರು, ಹುಡುಗ ಸಮುದ್ರದಲ್ಲಿ ಕೈ ಬೀಸುತ್ತಿದ್ದನ್ನು ಗಮನಿಸಿ ನಾವು ಅವನ ಬಳಿಗೆ ಹೋಗಿ ದೋಣಿಯಲ್ಲಿ ಕರೆದುಕೊಂಡು ಬಂದೆವು ಎಂದು ತಿಳಿಸಿದ್ದಾರೆ.

ಇನ್ನು ಬಾಲಕನ ಕುಟುಂಬ ಮಗ ಬದುಕಿ ಬರುತ್ತಾನೆ ಎಂಬ ಆಸೆಯನ್ನ ಕೈಬಿಟ್ಟಿದ್ದರು. ಲಖನ್ನನ್ನು ಜೀವಂತವಾಗಿ ನೋಡಲು ಸಾಧ್ಯವಿಲ್ಲ ಎಂದು ಕುಟುಂಬ ಭಾವಿಸಿದೆ. ಲಖನ್ ಬದುಕಿಲ್ಲದಿದ್ದರೂ, ಕೊನೆಯ ಬಾರಿಗೆ ಮಗನ ಪಾರ್ಥಿವ ಶರೀರವನ್ನು ನೋಡಿ ಅಂತಿಮ ಸಂಸ್ಕಾರ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರು ಲಖನ್ ಜೀವಂತವಾಗಿ ಹಿಂತಿರುಗಿ ಬಂದಿದ್ದನ್ನು ನೋಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

 

Related posts

 ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳಿಗೆ  ಸಿಎಂ ಸಿದ್ದರಾಮಯ್ಯ ಸನ್ಮಾನ, ಅಭಿನಂದನೆ. 

ಕಾಂಗ್ರೆಸ್ ಕಚೇರಿಯಲ್ಲಿ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ: ಸಚಿವರು ಭಾಗಿ.

ಏಕದಿನ ವಿಶ್ವಕಪ್ ಗೆ  ಟೀಂ ಇಂಡಿಯಾ ಪ್ರಕಟ:  ಏಕೈಕ ಕನ್ನಡಿಗನಿಗೆ ಸ್ಥಾನ.