ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಆಹ್ವಾನ ಇಲ್ಲದೆ ಜಿ-20 ಸಭೆಗೆ ನಾನು ಹೇಗೆ ಹೋಗಲಿ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ.

ಕಲಬುರಗಿ: ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ  ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

ಈ ಕುರಿತು ಸ್ವತಃ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆಹ್ವಾನ ಇಲ್ಲದೆ ಜಿ20 ಸಭೆಗೆ ನಾನು ಹೇಗೆ ಹೋಗಲಿ. ಜಿ 20 ಸಭೆ ಸಮಾರಸ್ಯದ ಸಭೆ. ದೇಶದಲ್ಲಿ, ಪ್ರಪಂಚದಲ್ಲಿ ಗದ್ದಲ ಇಲ್ಲದೆ ಸಾಮರಸ್ಯದಿಂದ ಇರುವುದು ಒಳ್ಳೆಯದು ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ,  ಬಿಜೆಪಿ, ಜೆಡಿಎಸ್ ​ ಒಂದಾಗುವ ಪ್ರಯತ್ನ ಮಾಡುತ್ತಿದ್ದಾರೆ. ದೇವೇಗೌಡರು, ಮೋದಿ ಕೈಕೈ ಹಿಡಿದುಕೊಂಡಿದ್ದನ್ನು ನೋಡಿದ್ದೇನೆ. ಎಷ್ಟು ಸ್ಥಾನ ಕೇಳುತ್ತಾರೆ ಎಷ್ಟು ಸ್ಥಾನ ಕೊಡ್ತಾರೆಂಬುದು ಕ್ಲಿಯರ್ ಆಗಿಲ್ಲ.  ಈ ನಡುವೆ ನಾವು 60% ಮತಗಳನ್ನು ಪಡೆಯಬೇಕು ಅಂತಾ ಲೆಕ್ಕಾಚಾರ ಇದೆ. ಇಂಡಿಯಾ ಮೈತ್ರಿಕೂಟ ನಾಲ್ಕನೇ ಮೀಟಿಂಗ್​ ಕೂಡ ಮಾಡುತ್ತಿದ್ದೇವೆ. ಜೆಡಿಎಸ್​ ಐಡಿಯಾಲಜಿ ಚೇಂಜ್​ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

Related posts

ಕರ್ನಾಟಕ ಉದ್ಯೋಗದಾತರ ತವರು ಆಗುವುದರಲ್ಲಿ ಸಂಶಯವಿಲ್ಲ- ಡಿಸಿಎಂ ಶಿವಕುಮಾರ್ ವಿಶ್ವಾಸ.

ಆಟೋ ನಿಲ್ದಾಣದ ಆಟೋ ಶೆಲ್ಟರ್ ಉದ್ಘಾಟಿಸಿದ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವೆನೆ ಮಾಡಲ್ಲ ಯಾಕೆ..? ವೈಜ್ಞಾನಿಕ ಕಾರಣವೇನು ಗೊತ್ತೆ..?