ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯಸಿನಿಮಾ

ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನಟ ಉಪೇಂದ್ರ ವಿರುದ‍್ಧದ 2ನೇ ಎಫ್ ಐಆರ್ ಗೂ ತಡೆ ನೀಡಿದ ಹೈಕೋರ್ಟ್.

ಬೆಂಗಳೂರು:  ಆಕ್ಷೇಪಾರ್ಹ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಿಯಲ್ ಸ್ಟಾ ಉಪೇಂದ್ರ ವಿರುದ್ಧ ದಾಖಲಾಗಿದ್ದ 2ನೇ ಎಫ್ ಐಆರ್ ಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ನಟ  ಉಪೇಂದ್ರ ನೀಡಿದ ಆಕ್ಷೇಪಾರ್ಹ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ನಟ ಉಪೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು. ಈ ಮಧ್ಯೆ ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನಟ ಉಪೇಂದ್ರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಎಫ್ ಐ ಆರ್ ರದ್ಧು ಕೋರಿ ಉಪೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ಹೈಕೋರ್ಟ್  ಮೊದಲ ಎಫ್​ಐಆರ್​ಗೆ ​ ಮಧ್ಯಂತರ ತಡೆ ನೀಡಿತ್ತು. ಅದೇ ರೀತಿ ಇದೀಗ ಎರಡನೇ ಎಫ್​​ಐಆರ್​ಗೂ ಹೈಕೋರ್ಟ್ ತಡೆ ಕೊಟ್ಟಿದೆ.

Related posts

ಐವರು ಶಸ್ತ್ರಸಜ್ಜಿತ ಉಗ್ರರನ್ನು ಹತ್ಯೆಗೈದು ಸಾಹಸ ಮೆರೆದ ಓರ್ವ ಯುವತಿ..

ಸಿರಿಧಾನ್ಯ ಆಹಾರ ಸ್ಪರ್ಧೆಯಲ್ಲಿ ವಾಣಿಭಟ್ ಪ್ರಥಮ.

ಸಮನ್ವಯ ಟ್ರಸ್ಟ್ ನಿಂದ ಉಚಿತ ವಾಚನಾಲಯ: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಧ್ಯಯನ ಕೇಂದ್ರ