ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಸ್ವಿಗ್ಗಿ ಮತ್ತು ಜೊಮ್ಯಾಟೊಗಳನ್ನು ಬಿಟ್ಟು ಮಕ್ಕಳಿಗೆ ತಾಯಂದಿರ ಕೈ ರುಚಿ ತೋರಿಸಿ- ಹೈಕೋರ್ಟ್

ತಿರುವನಂತಪುರಂ: ಆಧುನಿಕ ಕಾಲದಲ್ಲಿ ಮಾನವನ ಜೀವನಶೈಲಿ ಬದಲಾಗಿದ್ದು ಈಗ ಬಟ್ಟೆ,ಆಹಾರ ಸೇರಿ ಎಲ್ಲಾ ವಸ್ತುಗಳೂ ಆನ್ ಲೈನ್ ನಲ್ಲೇ ಮಾರಾಟ ನಡೆಯುತ್ತಿದೆ. ಮೊಬೈಲ್ ನಲ್ಲಿ ಬುಕ್ ಮಾಡಿದರೇ ಸಾಕು ಎಲ್ಲವೂ ಮನೆಯ ಬಾಗಿಲಿಗೆ ಬಂದು ಬೀಳುತ್ತವೆ. ಅಂತೆಯೇ ಬೇಕಾದ ಆಹಾರವೂ ಸಹ ಬಾಗಿಲಿಗೆ ಬಂದು ತಲುಪುತ್ತದೆ. Swiggy ಮತ್ತು Zomato ನಂತಹ ಆನ್ಲೈನ್ ಆಹಾರ ವಿತರಕ ಕಂಪನಿಗಳಿಂದಾಗಿ ಇಂದು 24X7 ಆರ್ಡರ್ ಮಾಡಿ ತಿನ್ನುವ ಪರಿಕಲ್ಪನೆ ಇದೆ.

ಆನ್ ಲೈನ್ ಆರ್ಡರ್ ಮಾಡಿ ತರಸಿಕೊಂಡು  ತಂದೆ ತಾಯಂದಿರು, ಪೋಷಕರು ತಿನ್ನುವುದಲ್ಲದೆ ತಮ್ಮ ಮಕ್ಕಳಿಗೂ ಇದೇ ಅಭ್ಯಾಸ ಮಾಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್, ಸ್ವಿಗ್ಗಿ ಮತ್ತು ಜೊಮ್ಯಾಟೊಗಳನ್ನು ಬಿಟ್ಟು ಮಕ್ಕಳಿಗೆ ತಾಯಂದಿರ ಕೈ ರುಚಿ ತೋರಿಸಿ ಎಂದು ಸಲಹೆ ನೀಡಿದೆ.

ಅಶ್ಲೀಲ ಚಿತ್ರಗಳ ವೀಕ್ಷಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುವ ವೇಳೆ ಕೇರಳ ಹೈಕೋರ್ಟ್  ಈ ಹೇಳಿಕೆ ನೀಡಿದೆ.  ಸ್ವಿಗ್ಗಿ ಮತ್ತು ಜೊಮ್ಯಾಟೊಗಳನ್ನು ಬಿಟ್ಟು ಮಕ್ಕಳಿಗೆ ತಾಯಂದಿರ ಕೈ ರುಚಿ ತೋರಿಸಬೇಕು ಎಂದು ನ್ಯಾಯಮೂರ್ತಿ ಪಿವಿ ಕಾನ್ಹಿಕೃಷ್ಣನ್ ಸಲಹೆ ನೀಡಿದ್ದಾರೆ. ಮಕ್ಕಳಿಗೆ ತಾಯಿಯ ಕೈಯಿಂದ ಅಡುಗೆ ಮಾಡುವ ಮಹತ್ವವನ್ನು ನ್ಯಾಯಾಧೀಶರು ಒತ್ತಿ ಹೇಳಿದರು.

ಹೊರಾಂಗಣದಲ್ಲಿ ಆಟವಾಡಲು ಮಕ್ಕಳನ್ನು ಪ್ರೋತ್ಸಾಹಿಸಿ, ಜೊತೆಗೆ ಮನೆಯಲ್ಲಿಯೇ ರುಚಿಕರವಾಗಿ ಅಡುಗೆ ಮಾಡಿ ಮಕ್ಕಳಿಗೆ ನೀಡಿ ಎಂಬ ಆಸಕ್ತಿಕರ ಸಲಹೆಗಳನ್ನು ನೀಡಿದರು. ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಬೇಡಿ, ಸ್ವಿಗ್ಗಿ, ಜೊಮ್ಯಾಟೊದಲ್ಲಿ ಆರ್ಡರ್ ಮಾಡುವಂತೆ ಪ್ರೋತ್ಸಾಹಿಸಬೇಡಿ’ ಎಂದು ಸೂಚಿಸಿದರು.

ಆದಷ್ಟು ಅಪ್ರಾಪ್ತರಿಗೆ ಮೊಬೈಲ್ ಕೊಡಬೇಡಿ. ಅಗತ್ಯವಿದ್ದರೆ ಆಗಾಗ ಗಮನಿಸುತ್ತಿರಿ..ಫೋನಿನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ಮಕ್ಕಳ ಮೇಲೆ ಸೂಕ್ತ ನಿಗಾವಹಿಸಬೇಕು. ಇಲ್ಲದಿದ್ದಲ್ಲಿ ಸ್ಮಾರ್ಟ್ ಫೋನ್‌ನಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.

 

Related posts

ಕರಾಳ ದಿನ: ಮುಂಬೈ 26 \11 ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ…..

ಅವಧಿಗೂ ಮುನ್ನ ಕರ್ನಾಟಕಕ್ಕೆ ಕಾಲಿಟ್ಟ ಚಳಿಗಾಲ: ಮುಂದಿನ ವಾರ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ.

ಕನ್ನಡ ಭಾಷಾ ಕಲಿಕೆ ನಮ್ಮ ಸಂಸ್ಕೃತಿಯ ಭಾಗ-ಪ್ರೊ.ಜೆ.ಎಲ್.ಪದ್ಮನಾಭ