ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕರ್ನಾಟಕದ ಯಾವ ಯಾವ ಜಿಲ್ಲೆಗಳಿಗೆ ಯಾವ ಯಾವ ಬಿರುದು..? ಇಲ್ಲಿದೆ ಮಾಹಿತಿ.

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1 ಬಂತೆಂದರೇ ಸಾಕು ಕನ್ನಡಿಗರ ಹಬ್ಬ. ನವೆಂಬರ್ ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವದ ಸಂಭ್ರಮ ನಡೆಯುತ್ತಿರುತ್ತದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆ ಈ ಬಾರಿ ರಾಜ್ಯ ಸರ್ಕಾರ ವಿಶೇಷವಾಗಿ ವರ್ಷಪೂರ್ತಿ ಕನ್ನಡ ಸಂಭ್ರಮ ಆಚರಿಸುತ್ತಿದೆ.

ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸ ಇದ್ದು, ಕರ್ನಾಟಕ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಭಾಷೆಯನ್ನು ಕೋಟಿ ಕೋಟಿ ಜನರು ಕಲಿಯುತ್ತಿದ್ದಾರೆ.  ಇದರ ಜೊತೆಗೆ ಮತ್ತೊಂದು ವಿಶೇಷತೆ ಕೂಡ ಇದೆ, ಈ ವಿಶೇಷತೆ ಕನ್ನಡಿಗರ ನೆಲದ ಹೆಮ್ಮೆಯ ವಿಚಾರ ಕೂಡ ಹೌದು.

ಅಂದಹಾಗೆ ಕರ್ನಾಟಕ ರಾಜ್ಯ ಭೌಗೋಳಿಕವಾಗಿ ಒಂದೇ ರೀತಿ ಇಲ್ಲ. ದಕ್ಷಿಣ ಭಾಗದಲ್ಲಿ ಒಂದು ರೀತಿಯ ವಾತಾವರಣ ಇದ್ದರೆ, ಉತ್ತರ ಕರ್ನಾಟಕದಲ್ಲಿ ಒಂದು ರೀತಿ ವಾತಾವರಣ ಕಾಣಬಹುದು. ಇದರ ಜೊತೆಗೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗ ಹಸಿರಿನ ಸಿರಿಯನ್ನು ಪಸರಿಸುತ್ತದೆ. ಇದೇ ಕಾರಣಕ್ಕೆ ಕರ್ನಾಟಕದ ಒಂದೊಂದು ಜಿಲ್ಲೆಯೂ ಒಂದು ಬಿರುದು ಪಡೆದಿದೆ. ಹಾಗಾದರೆ ಕರ್ನಾಟಕದ ಜಿಲ್ಲೆಗಳಿಗೆ ಇರುವ ಬಿರುದುಗಳೇನು ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?

1). ವಿಜಯಪುರ – ಗುಮ್ಮಟ ನಗರಿ

2). ಧಾರವಾಡ – ಪೇಡಾ ನಗರಿ

3). ಗದಗ – ಮುದ್ರಣ ನಗರಿ

4). ಗೋಕಾಕ – ಕರದಂಟು ನಗರಿ

5). ಬೆಳಗಾವಿ – ಕುಂದಾ ನಗರಿ

6). ಮಂಗಳೂರು – ಬಂದರು ನಗರಿ

7). ಮಡಿಕೇರಿ – ಮಂಜಿನ ನಗರಿ

8). ಬೆಂಗಳೂರು – ಉದ್ಯಾನ ನಗರಿ

9). ಹಾವೇರಿ – ಏಲಕ್ಕಿ ನಗರಿ

10). ಉಡುಪಿ – ಕೃಷ್ಣ ನಗರಿ

11). ದಾವಣಗೆರೆ – ಬೆಣ್ಣೆ ನಗರಿ

12). ಗಂಗಾವತಿ – ಭತ್ತದ ಕಣಜ

13). ಮೈಸೂರು – ಸಾಂಸ್ಕೃತಿಕ ನಗರಿ

14). ಬಾಗಲಕೋಟೆ – ಕೋಟೆ ನಾಡು

15). ಬಳ್ಳಾರಿ – ಗಣಿ ನಾಡು

16). ಚಿತ್ರದುರ್ಗ – ಕೋಟೆ ನಾಡು

17). ತುಮಕೂರು – ಕಲ್ಪತರು ನಾಡು

18). ಕೋಲಾರ – ಚಿನ್ನದ ನಾಡು

19). ಚನ್ನಪಟ್ಟಣ – ಬೊಂಬೆ ನಾಡು

20). ಮಂಡ್ಯ – ಸಕ್ಕರೆ ನಾಡು

21). ರಾಮನಗರ – ರೇಷ್ಮೆ ನಾಡು

22). ಚಿಕ್ಕಮಗಳೂರು – ಕಾಫಿ ನಾಡು

23). ಬಾದಾಮಿ – ಚಾಲುಕ್ಯರ ನಾಡು

24). ತಲಕಾಡು – ಗಂಗರ ನಾಡು

25). ರಾಯಚೂರು – ಬಿಸಿಲ ನಾಡು

26). ಶಿವಮೊಗ್ಗ – ಮಲೆನಾಡಿನ ಹೆಬ್ಬಾಗಿಲು

27). ಕಲಬುರಗಿ – ತೊಗರಿ ಕಣಜ

28). ಕಾರವಾರ – ಜಲಪಾತಗಳ ತವರೂರು

29). ಭದ್ರಾವತಿ – ಕೈಗಾರಿಕೆಗಳ ನಗರಿ

30). ಯಾದಗಿರಿ – ಗಿರಿಗಳ ನಾಡು

31). ಬೀದರ್ – ಸೂಫಿ ಸಂತರ ನಾಡು

32). ಬನವಾಸಿ – ಕದಂಬರ ನಾಡು

33)ಬೆಂಗಳೂರು-ಸಿಲಿಕಾನ್ ಸಿಟಿ,

ಕನ್ನಡ ನಾಡು, ಭಾರತಕ್ಕೆ ಮಾತ್ರವಲ್ಲ ಇಡೀ ಮನುಷ್ಯ ಕುಲಕ್ಕೆ ಒಂದು ಹೆಮ್ಮೆ. ಯಾಕಂದ್ರೆ ನೈಸರ್ಗಿಕವಾಗಿ ಸಾಂಸ್ಕೃತಿಕವಾಗಿ ಕರ್ನಾಟಕ ಇಡೀ ಜಗತ್ತಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಅದರಲ್ಲೂ ಅಮೆಜಾನ್ ಕಾಡುಗಳನ್ನ ಬಿಟ್ಟರೆ, ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಹಬ್ಬಿಕೊಂಡಿರುವ ಪಶ್ಚಿಮ ಘಟ್ಟಗಳ ಕಾಡೇ ದೊಡ್ಡದು ಎಂಬ ಬಿರುದು ಕೂಡ ಪಡೆದಿದೆ.

 

Related posts

ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ಕಡಿದಾಳ್ ಗೋಪಾಲ್ ಆಯ್ಕೆ: ಅಭಿನಂದನೆ.

ಗೃಹಲಕ್ಷ್ಮೀ ಹಣ ಜಮೆಯಾಗದ ಆರೋಪ: ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ: ವಸತಿ ರಹಿತರಿಗೆ 3 ಲಕ್ಷ ಮನೆಗಳ ನಿರ್ಮಾಣ.