ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಇನ್ಮುಂದೆ ಸುಪ್ರೀಂಕೋರ್ಟ್ ಪ್ರಕರಣಗಳ ವಿವರ ವೆಬ್ ಸೈಟ್ ನಲ್ಲಿ ಲಭ್ಯ.

ನವದೆಹಲಿ:  ತಾಲ್ಲೂಕು ಕೋರ್ಟ್ ಗಳಿಂದ ಹಿಡಿದು ಹೈಕೋರ್ಟ್ ವರೆಗೆ  ಇದ್ದ ಪ್ರಕರಣಗಳ ವಿವರಗಳನ್ನ ವೆಬ್ ಸೈಟ್ ನಲ್ಲಿ ಪಡೆಯುವ ಸೌಲಭ್ಯ  ಇನ್ಮುಂದೇ ಸುಪ್ರೀಂಕೋರ್ಟ್ ನಲ್ಲೂ ಲಭ್ಯವಿರಲಿದೆ.

ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವ ಹಾಗೂ ಇತ್ಯರ್ಥವಾದ ಪ್ರಕರಣಗಳ ವಿವರ ಇನ್ಮುಂದೆ ರಿಯಲ್ ಟೈಮ್ ನಲ್ಲಿ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಹೌದು ಈವರೆಗೆ ತಾಲ್ಲೂಕು ಕೋರ್ಟ್ ಗಳಿಂದ ಹಿಡಿದು ಹೈಕೋರ್ಟ್ ವರೆಗೆ ಮಾತ್ರ ಲಭ್ಯವಿದ್ದ ಈ ವ್ಯವಸ್ಥೆಯನ್ನು ಸುಪ್ರೀಂ ಕೋರ್ಟ್ ಗೂ ವಿಸ್ತರಿಸಲಾಗಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ  ಮಾಹಿತಿ ನೀಡಿದ್ದಾರೆ.

ನ್ಯಾಯಾಲಯದ ಆವರಣದಲ್ಲೇ ವಿಷಯ ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು, ಸುಪ್ರೀಂ ಕೋರ್ಟ್ ನ ದತ್ತಾಂಶಗಳನ್ನು ಶೀಘ್ರದಲ್ಲೇ ನ್ಯಾಯಲಾಯ ಜುಡಿಷಿಯಲ್ ಡೇಟಾ ಗ್ರಿಡ್(NJDG)ಗೆ ಲಿಂಕ್ ಮಾಡಲಾಗುವುದು. ಈ ಮೂಲಕ ಸುಪ್ರೀಂ ಕೋರ್ಟ್ ಕೇಸುಗಳ ಮಾಹಿತಿಯನ್ನು ರಿಯಲ್ ಟೈಮ್ ನಲ್ಲಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದಿದ್ದಾರೆ.

ಎನ್ ಐಸಿಯುನಿಂದ ಅಭಿವೃದ್ಧಿ ಪಡಿಸಿರುವ ವೆಬ್ ಸೈಟ್ ನಲ್ಲಿ ಇನ್ಮುಂದೆ ಸ್ಥಳೀಯ ಕೋಟ್ ಗಳಿಂದ ಹಿಡಿದು ಸುಪ್ರೀಂ ಕೋರ್ಟ್ ನ ವರೆಗೂ ದೇಶದ ಎಲ್ಲಾ ಕೋರ್ಟ್ ಗಳ ಬಾಕಿ ಪ್ರಕರಣಗಳು, ಇತ್ಯರ್ಥವಾದ ಪ್ರಕರಣಗಳು, ತೀರ್ಪುಗಳು ಮುಂತಾದ ಸಮಗ್ರ ಮಾಹಿತಿ ಲಭಿಸಲಿದೆ. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಸದ್ಯ ಎನ್ ಜೆಡಿಜಿಯಲ್ಲಿ ತಾಲ್ಲೂಕು ಕೋರ್ಟ್ ಗಳಿಂದ ಹಿಡಿದು ಹೈಕೋರ್ಟ್ ಗಳವರೆಗೆ ದೇಶದ 18,735 ಕೋರ್ಟ್ ಗಳ ತೀರ್ಪು ಹಾಗೂ ಕೇಸುಗಳ ವಿವರ ರಿಯಲ್ ಟೈಮ್ಸ್ ನಲ್ಲಿ ಅಪ್ ಲೋಡ್ ಆಗುತ್ತಿದೆ. ಆದರೆ ಇದರಲ್ಲಿ ಸುಪ್ರೀಂ ಕೋರ್ಟ್ ಕೇಸುಗಳ ವಿವರ ಲಭ್ಯವಿರಲಿಲ್ಲ. ಹೀಗಾಗಿ ಇನ್ಮುಂದೆhttps://njdg.ecourts.gov.in/njdgnew/index.phpನಲ್ಲೇ ಲಭ್ಯವಾಗುವ ವ್ಯವಸ್ಥೆ ಜಾರಿಗೆ ಬರಲಿದೆ.

 

Related posts

ಜಾಗತಿಕ ಹಸಿವು ಸೂಚ್ಯಂಕ: ಭಾರತದ ಕೆಳಮಟ್ಟದ ಶ್ರೇಯಾಂಕ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ.

ಮೂರು ಡಿಸಿಎಂ ಹುದ್ದೆ ಬೇಡಿಕೆ ಅಭಿಪ್ರಾಯಕ್ಕೆ ನಾನು ಬದ್ಧ- ಸಚಿವ ಕೆ.ಎನ್ ರಾಜಣ್ಣ.

ಡಾ. ಬಾಬು ಜಗಜೀವನ್ ರಾಮ್ ಸಭಾಂಗಣ ಉದ್ಘಾಟನೆ.