ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಆರೋಗ್ಯವಂತ ಮಕ್ಕಳು ಈ ದೇಶದ ಉತ್ತಮ ಪ್ರಜೆಗಳಾಗಬೇಕು-ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ತಾಯಿ ಮಕ್ಕಳ ಆರೋಗ್ಯ ಅತಿ ಮುಖ್ಯ. ಆರೋಗ್ಯವಂತ ಮಕ್ಕಳು ಈ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಆದಿಚುಂಚನಾಗಿರಿ ಸಮುದಾಯ ಭವನದಲ್ಲಿ ಶಾಶ್ವತಿ ಮಹಿಳಾ ವೇದಿಕೆ ಶಿವಮೊಗ್ಗ, ಜೆಸಿಐ ಇಂಟರ್‍ನ್ಯಾಷನಲ್ ಸಂಸ್ಥೆ, ಅಖಿಲ ಕರ್ನಾಟಕ ಒಕ್ಕಲಿಗರ ರಾಜ್ಯ ಸಂಘ ಶಿವಮೊಗ್ಗ ಮಹಿಳಾ ಘಟಕ, ಆದಿಚುಂಚನಗಿರಿ ಮಠ, ಇವರ ಸಹಭಾಗಿತ್ವದಲ್ಲಿ ಬಡ ಗರ್ಭಿಣಿಯರಿಗೆ ಉಚಿತ ಉಡಿತುಂಬುವ (ಸೀಮಂತ) ಕಾರ್ಯಕ್ರಮ ಮತ್ತು ಮಹಿಳಾ ಜಾಗೃತಿ ಸಮಾವೇಶ, ಸಾಂಸ್ಕøತಿಕ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ಕ್ರೀಡಾಕೂಟದಲ್ಲಿ ಗೆದ್ದ ಜಿಲ್ಲೆಯ ಮತ್ತು ನಗರದ 300ಕ್ಕೂ ಹೆಚ್ಚು ಸಂಘ ಸಂಸ್ಥೆಯ ಮಹಿಳೆಯರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಭೂ ತಾಯಿಗೆ ಹೆಚ್ಚು ಗೌರವ ಕೊಡುತ್ತೇವೆ. ಭೂ ತಾಯಿಗೆ ಉಡಿ ತುಂಬುವಂತೆ ಇಂದು ತಾಯಂದಿರಿಗೆ ಉಡಿ ತುಂಬಿದ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ತಾಯಂದಿರಿಗೆ ಸಂತೋಷ ಉಂಟು ಮಾಡುವ ಸಂಭ್ರಮದ ಕಾರ್ಯಕ್ರಮ. ತಾಯಂದಿರು, ಮಕ್ಕಳು ಆರೋಗ್ಯದಿಂದ ಇರಬೇಕು. ನಾಳೆ ಹುಟ್ಟುವ ಮಕ್ಕಳು ಜಾತಿ ಮತ ಮರೆತು ನಮ್ಮ ದೇಶಕ್ಕೆ ಉತ್ತಮ ಗೌರವ ತರುವ ಪ್ರಜೆಗಳಾಗಲಿ. ದೇವರು ತಾಯಂದಿರಿಗೆ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಭವಿಷ್ಯ ನೀಡಲು ಶಕ್ತಿ ಕೊಡಲಿ ಎಂದರು.
ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಮಾತನಾಡಿ, ನಮ್ಮ ಧರ್ಮದಲ್ಲಿ ಅನೇಕ ಆಚರಣೆ. ಮನೆ ಮುಂದೆ ಸಗಣಿ ಸಾರಿಸುತ್ತಿದ್ದರು. ರಂಗೋಲಿ ಹಾಕುತ್ತಿದ್ದರು. ಸಗಣಿ ಸಾರಿಸಿದರೆ ಕ್ರಿಮಿ ಬರಲ್ಲ. ಹಿಟ್ಟಿನ ರಂಗೋಲಿಯಿಂದ ಇರುವೆಗಳಿಗೆ ಆಹಾರ.
ದೇವರಿಗೆ ತೆಂಗಿನ ಕಾಯಿ ಒಡೆಯುತ್ತೇವೆ. ಕಾಯಿ ಒಳಗಿರುವುದು ಪ್ರಪಂಚ. ಅದರೊಳಗಿನ ನೀರು ಪೆÇ್ರೀಕ್ಷಣೆ ಮಾಡುವುದು ಅರಿಷಡ್ವರ್ಗ ನಾಶ ಆಗಲಿ ಅಂತ ಎಂದರು.
ಸೀಮಂತ, ಗರ್ಭ ಸಂಸ್ಕಾರ ಸೇರಿ ನಲವತ್ತು ಸಂಸ್ಕಾರ ಇತ್ತು. ಈಗ ಹದಿನಾರು ಉಳಿದಿದೆ. ಹುಟ್ಟಿನಿಂದ ಸಾವಿನವರೆಗೆ ಸಂಸ್ಕಾರ ಇದೆ. ಗರ್ಭಧಾರಣಾ ಸಂಸ್ಕಾರ ಸಹ ಇದೆ ಎಂದರು.
ಸೀಮಂತದ ನಂತರ ಗರ್ಭಿಣಿ ಸ್ತ್ರೀಯನ್ನು ತಾಯಿ ಮನೆಗೆ ಕಳಿಸುತ್ತಾರೆ. ತಾಯಿ ಮನೆ ಸ್ವಾತಂತ್ರ್ಯ ಹೆಚ್ಚು. ವಿಶ್ರಾಂತಿ ಸಿಗಲಿ ಎಂದು. ಇದೊಂದು ಸಂಪ್ರದಾಯ. ಗರ್ಭಸಂಸ್ಕಾರ ಸರಿಯಾಗಿ ಅನುಸರಿಸಿದರೆ ಸಹಜ ಹೆರಿಗೆ ಸಾಧ್ಯತೆ ಹೆಚ್ಚು ಎಂದರು.
ಶಾಶ್ವತಿ ಮಹಿಳಾ ವೇದಿಕೆಯ ಶಾಂತ ಸುರೇಂದ್ರ ಮಾತನಾಡುತ್ತಾ, ಪ್ರಪಂಚದಲ್ಲಿ ಹುಟ್ಟಿದ ಮೇಲೆ ಆರೋಗ್ಯ ಇರಬೇಕು. ಇಲ್ಲಾಂದ್ರೆ ಯಾವ ಸಾಧನೆ ಆಗಲ್ಲ. ಒಂದಾಗಿ ಸಮಾಜ ಕಟ್ಟೋಣ. ತಾಳ್ಮೆ,. ಸಜ್ಜನಿಕೆ ಸನ್ನಡತೆ ಮಕ್ಕಳಿಗೆ ಕಲಿಸಬೇಕು. ಸಮಾಜಮುಖಿ ಕಾರ್ಯಕ್ರಮ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಶ್ವತಿ ಮಹಿಳಾ ವೇದಿಕೆಯ ಹಾಗೂ ಒಕ್ಕಲಿಗರ ಸಂಘದ ಮಹಿಳಾ ಘಟಕದ ಪ್ರಮುಖರಾದ ಪ್ರತಿಮಾ ಡಾಕಪ್ಪ ಗೌಡ, ಚಂದ್ರಮತಿ ಹೆಗಡೆ ಮತ್ತಿತರರು ಇದ್ದರು.

Related posts

 ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ, ಮಾತುಕತೆ

ಅನ್ನಭಾಗ್ಯ ಯೋಜನೆ ಯಶಸ್ವಿ: 3.92 ಕೋಟಿ ಫಲಾನುಭವಿಗಳ ಖಾತೆಗೆ ರೂ. 2,444 ಕೋಟಿ ಹಣ ಜಮೆ

ತಾಯಿ ಭಾಷೆಯಿಂದ ನಿಜವಾದ ಭಾವನೆ ವ್ಯಕ್ತಪಡಿಸಲು ಸಾಧ್ಯ : ಡಿ.ಮಂಜುನಾಥ