ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಶಿವಮೊಗ್ಗ

ಶಿಕ್ಷಣ ಪ್ರೇಮಿ, ಸಾಂಸ್ಕೃತಿಕ ರಾಯಭಾರಿ, ಸಜ್ಜನ ರಾಜಕಾರಣಿ ಡಾ.ಮಂಜುನಾಥ ಭಂಡಾರಿಯವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ….

ವಿಶೇಷ ಲೇಖನ: ಎಂ.ರಮೇಶ್ ಶೆಟ್ಟಿ, ಶಂಕರಘಟ್ಟ

ಶಿಕ್ಷಣ,ಸಮಾಜ,ಸಾಂಸ್ಕøತಿಕ ಹಾಗೂ ರಾಜಕೀಯವಾಗಿ ಕಾರ್ಯನಿರ್ವಹಿಸಿರುವ ಬಹುಜನ ಕಾಳಜಿ ಇರುವ, ಕ್ರಿಯಾಶೀಲತೆಗೆ ಒಡ್ಡಿಕೊಳ್ಳಬಹುದಾದ ವಿಧಾನಪರಿಷತ್ ಸದಸ್ಯರು, ಶಿಕ್ಷಣತಜ್ಞರು, ಏಐಸಿಸಿ ಸದಸ್ಯರು, ರಾಜ್ಯ ಕೆಪಿಸಿಸಿ ಉಪಾಧ್ಯಾಕ್ಷರಾದ ಡಾ.ಮಂಜುನಾಥ ಭಂಡಾರಿಯವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ….

ಜಿಲ್ಲೆ, ರಾಜ್ಯ ರಾಷ್ಟ್ರರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಂಜುನಾಥ ಭಂಡಾರಿ, ಅತ್ಯಂತ ಸಜ್ಜನ ರಾಜಕಾರಣಿಯಂದೇ ಹೆಸರು ಮಾಡಿದ್ದಾರೆ.

ಮಂಜುನಾಥ್ ಭಂಡಾರಿ ಕಳೆದ ಹಲವು ವರ್ಷಗಳಿಂದ ರಾಜಕಾರಣದಲ್ಲಿ ಇದ್ದಾರೆ. ಹಾಗೆ ನೋಡಿದರೆ, ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಬಹುದಿತ್ತು. ಎಐಸಿಸಿ ಸದಸ್ಯರಾಗಿದ್ದ ಇವರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದರು. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಗಳೂರು-ಉಡುಪಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ದೂರದೃಷ್ಟಿ ಇರುವ ಇವರು ರಾಜಕಾರಣದಲ್ಲಿ ತನ್ನದೇ ಹೆಸರು ಮಾಡುತ್ತಿದ್ದಾರೆ.

ಶಿಕ್ಷಣ ತಜ್ಞರು ಆಗಿರುವ ಇವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ, ಹೊಸದೃಷ್ಟಿಕೋನವನ್ನು ಚಿಂತನೆ ನಡೆಸುತ್ತಿದ್ದಾರೆ. ಹಲವು ಸುಧಾರಣೆಗಳನ್ನು ತಂದಿದ್ದಾರೆ. ಸಮಾಜದಲ್ಲಿ ಉದ್ಯಮ ಬೆಳವಣಿಗೆಗೂ ಇವರು ಶ್ರಮಿಸುತ್ತಿದ್ದಾರೆ. ಯುವ ನಾಯಕನಾಗಿ ಜಗತ್ತಿನ ಹಲವು ರಾಷ್ಟ್ರಗಳನ್ನು ಸಂದರ್ಶಿಸಿ, ಅತೀ ಗಣ್ಯರ ಜೊತೆ ಚಿಂತನ-ಮಂಥನ ನಡೆಸಿದ್ದಾರೆ. ಜಾರ್ಜ್‍ಬುಷ್‍ರವರು ಇವರಿಗೆ ಪ್ರಶಸ್ತಿ ನೀಡಿ, ಗೌರವಿಸಿದ್ದಾರೆ. ಹೀಗಾಗಿ ಭಂಡಾರಿಯವರು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಕೂಡ ಹೆಸರು ಮಾಡಿದ್ದಾರೆ.

2002ರಲ್ಲಿ ಭಂಡಾರಿ ಫೌಂಡೇಷನ್ ಸ್ಥಾಪಿಸಿ ಆ ಮೂಲಕ ಸಾಮಾಜಿಕ ನ್ಯಾಯ, ಯುವಕರಿಗೆ ಶಿಕ್ಷಣ, ಜನಸಾಮಾನ್ಯರ ಜೀವನ ಉತ್ತಮಗೊಳಿಸುವತ್ತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶಿಕ್ಷಣ ಕ್ಷೇತ್ರದ ಜೊತೆಗೆ ಸದಾ ನೆಂಟನ್ನು ಇಟ್ಟುಕೊಂಡಿರುವ ಇವರು ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ವಿಶೇಷ ಆಹ್ವಾನಿತರೂ ಆಗಿದ್ದಾರೆ. ಭಾರತೀಯ ಇಂಜಿನೀಯರ್‍ಗಳ ಸಂಸ್ಥೆ ಇವರ ಸಾಧನೆಯನ್ನು ಗುರುತಿಸಿ “ಶ್ರೇಷ್ಠ ಇಂಜಿನೀಯರ್” ಎಂಬ ಪ್ರಶಸ್ತಿಯನ್ನು ಕೂಡ ನೀಡಿದೆ.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಇತರೆ ಭಾರತೀಯ ಮಂಡಳಿಗಳು ಶಿಕ್ಷಣಕ್ಕಾಗಿ ಮಾಡಿರುವ ಇವರ ಸೇವೆಯನ್ನು ಗುರುತಿಸಿ, “ರಾಷ್ಟ್ರೀಯ ಕರ್ನಾಟಕ ಶಿಕ್ಷಣ ಪ್ರಶಸ್ತಿ”ಯನ್ನು ನೀಡಿದೆ.

ಭಂಡಾರಿ ರೈತ ಕುಟುಂಬದಲ್ಲಿ ಜನಿಸಿದವರು. ಸುಮಾರು 4 ದಶಕಗಳ ಕಾಲ ಅವರ ಪರಿಶ್ರಮದಿಂದ ಮತ್ತು ಸಾಧನೆಗಳಿಂದ ಉನ್ನತ ಸ್ಥಾನಕ್ಕೆ ಏರಿದವರು. ಕಾಂಗ್ರೆಸ್ ಪಕ್ಷದ ಸಂಘಟನೆಯ ಜೊತೆಗೆ ಶಿಕ್ಷಣ ಕ್ಷೇತ್ರವನ್ನು, ಕ್ರೀಡಾ ಕ್ಷೇತ್ರವನ್ನು, ಸಾಮಾಜಿಕ ಕ್ಷೇತ್ರವನ್ನು ಆವರಿಸಿಕೊಂಡು ಸಾಮಾಜಿಕ ನ್ಯಾಯ ಮತ್ತು ಪ್ರಗತಿಗೆ ಶ್ರಮಿಸಿದವರು.

ವಿದ್ಯಾರ್ಥಿ ದೆಸೆಯಲ್ಲಿಯೇ ರಾಜಕೀಯ ಪಾದಾರ್ಪಣೆಮಾಡಿ, ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ, ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಯುವ ರಾಜಕಾರಣಿಯಾಗಿ ಪಕ್ಷದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಸಂಘಟನೆಗೆ ಒತ್ತುಕೊಟ್ಟು ಜನಸೇವೆ ಮಾಡುತ್ತಾ ರಾಜಕೀಯದ ಅರಿವನ್ನು ವಿಸ್ತರಿಸುವಲ್ಲಿ  ತನ್ನದೇ ಆದ ಪಾತ್ರವನ್ನು ವಹಿಸಿದ್ದಾರೆ.

ಭಂಡಾರಿಯವರು ಭಂಟ್ವಾಳ ತಾಲ್ಲೂಕಿನ ತೆಂಕಬೆಳ್ಳೂರು ಗ್ರಾಮದ ಬಂಟಕೃಷಿ ಕುಟುಂಬದ  ಮನೆತನದವರು. ಇವರ ತಂದೆ ದಿ|| ಕೊಳಂದೆಗುತ್ತು ವೆಂಕಪ್ಪ ಭಂಡಾರಿ ಮತ್ತು ತಾಯಿ ರಾಧಾ ಭಂಡಾರಿಯವರ ಸುಪುತ್ರರಾಗಿದ್ದಾರೆ.

2004ರಲ್ಲಿ ಸೋನಿಯಾಗಾಂಧಿಯವರ ಮೂಲಕ ರಾಜೀವ ವಿಕಾಸಕೇಂದ್ರ ಪ್ರಸ್ತಾವನೆಗೆ ಪ್ರಧಾನ ಮಂತ್ರಿ ಮನಮೋಹನ್‍ಸಿಂಗ್‍ರವರಿಂದ ಅನುಮೋದನೆ ಪಡೆದರು. ಅದೇ ಇಂದಿನ ಆಧಾರ್‍ಕಾರ್ಡ್ ಮತ್ತು ಡಿಜಿಟಲ್ ಇಂಡಿಯಾದ ತಳಪಾಯವಾಗಿದೆ. ಇಂದಿರಾ ಜ್ಯೋತಿ ಯೋಜನೆಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಮುಖ್ಯ ರೂವಾರಿ ಕೂಡ ಇವರಾಗಿದ್ದಾರೆ.

ಒಟ್ಟಿನಲ್ಲಿ ಡಾ.ಭಂಡಾರಿಯವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ತುಂಬುಹೃದಯದ ಶುಭಾಶಯಗಳನ್ನು ಕೋರುತ್ತಾ, ಡಾ.ಭಂಡಾರಿಯವರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‍ನ ಎಲ್ಲಾ ಘಟಕಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ಇವರು ಧೀಮಂತ ನಾಯಕರಲ್ಲದೆ, ಯುವಕರ ಕಣ್ಮಣಿಯೂ ಆಗಿದ್ದಾರೆ. ಈ ಕಾರಣದಿಂದಲೇ ಇವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ರಾಜಕಾರಣದಲ್ಲಿ ಇವರು ಮತ್ತಷ್ಟು ಅಭಿವೃದ್ಧಿ ಸಾಧಿಸಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಆಡಳಿತಕ್ಕೆ ಬರುವ ನಿಟ್ಟಿನಲ್ಲಿ ಇವರ ಸೇವೆ ಗಮನಾರ್ಹ. ಜೊತೆಗೆ ಶಿಕ್ಷಣ ಕ್ಷೇತ್ರ ಹಾಗೂ ಉದ್ಯಮ ಕ್ಷೇತ್ರಕ್ಕೆ ಹೆಚ್ಚು ಒತ್ತುಕೊಡಲಿ.  ತಮ್ಮ ಭಂಡಾರಿ ಪೌಂಡೇಷನ್ ಮೂಲಕ ಬಡಜನರಿಗೆ, ಹಿಂದುಳಿದವರಿಗೆ ನೆರವು ನೀಡಲಿ ಎಂಬುದು ನಮ್ಮ ಆಶಯವಾಗಿದೆ.

‘ಇಡೀ ಜಗತ್ತನ್ನೇ ಸಂಚಾರ ಮಾಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಇಂತಹದ್ದೊಂದು ಸಂಸ್ಥೆಯನ್ನು ಕಂಡಿಲ್ಲ. ಅಲ್ಲದೇ ಇಷ್ಟು ಅಚ್ಚುಕಟ್ಟಾಗಿ ಮೂಲ ವಿಜ್ಞಾನಕ್ಕೆ ಒತ್ತು ನೀಡುವಂತಹ ಅದರಲ್ಲಿಯೂ ಸರ್ಕಾರಿ ಶಾಲಾ ಮಕ್ಕಳನ್ನು ಭಾಗವಹಿಸಲು ಅವಕಾಶ ಕಲ್ಪಿಸಿ ಆ ವಿದ್ಯಾರ್ಥಿಗಳು ಗುರಿ ತಲುಪಲು ಹೊಸ ಸ್ಫೂರ್ತಿ ಹಾಗೂ ಚೈತನ್ಯವನ್ನು ಡಾ.ಮಂಜುನಾಥ ಭಂಡಾರಿಯವರು ನೀಡಿದ್ದನ್ನು   ಕಂಡು ನಾನು ಬೆರಗಾಗಿದ್ದೇನೆ’

ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ಜ್ ಹೊರಾಕೆ, ವಿಜ್ಞಾನ ಸಮಾವೇಶ,ಮಂಗಳೂರು.

 

 

 

 

 

 

 

 

 

 

Related posts

ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ಕಾರಣ- ಕೆಎಸ್ ಈಶ್ವರಪ್ಪ ಆರೋಪ.

ಮಕ್ಕಳ ದಸರಾ – ರಾಜ್ಯಮಟ್ಟದ ಕುಡೋ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಗಳಿಗೆ ಚಾಲನೆ.

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್ : ಟೊಮ್ಯಾಟೊ ಆಯ್ತು ಈಗ ಬೇಳೆಕಾಳುಗಳ ದರ ಹೆಚ್ಚಳ..