ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ವಸತಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸಜ್ಜು; 808 ಹುದ್ದೆ ಭರ್ತಿ ಮಾಡಲು ಸಮ್ಮತಿ..!

ಬೆಂಗಳೂರು: ರಾಜ್ಯದಲ್ಲಿನ ವಸತಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉನ್ನತೀಕರಣ, ವಿದ್ಯಾರ್ಥಿಗಳ ದಾಖಲಾತಿ ದ್ವಿಗುಣ, ಹೊಸದಾಗಿ ಹತ್ತು ವಸತಿ ಶಾಲೆ ಆರಂಭ ತೀರ್ಮಾನ ಹಿನ್ನಲೆಯಲ್ಲಿ 808 ಹುದ್ದೆಗಳ ಭರ್ತಿ ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಹೌದು,ರಾಜ್ಯದಲ್ಲಿ ಹೊಸದಾಗಿ ಹತ್ತು ಶಾಲೆಗಳನ್ನು ಆರಂಭದ ಜತೆಗೆ 808 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇನ್ನೂ 808 ಹುದ್ದೆಗಳ ಪೈಕಿ 10 ಪ್ರಿನ್ಸಿಪಾಲ್, 248 ಉಪನ್ಯಾಸಕರು, 60 ಶಿಕ್ಷಕರು ಸೇರಿದ್ದಾರೆ. ಈ ಪೈಕಿ 10 ಹೊಸ ಮೊರಾರ್ಜಿ ದೇಸಾಯಿ ಶಾಲೆಗೆ 100 ಹುದ್ದೆ ಕೆಪಿ ಎಸ್ ಸಿ ಯಿಂದ ನೇಮಕಕ್ಕೂ ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು, ಪ್ರಿನ್ಸಿಪಾಲ್, ಉಪನ್ಯಾಸಕರು, ಶಿಕ್ಷಕರು, ಇತರೆ ಸಿಬ್ಬಂದಿ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದರ ಬೆನ್ನಲ್ಲೇ 708 ಹುದ್ದೆ ಹೊರಗುತ್ತಿಗೆ, 100 ಖಾಯಂ ಹುದ್ದೆಭರ್ತಿ ಗೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

ಅಲ್ಲದೇ 62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ರಿಂದ 12 ನೇ ತರಗತಿ ವರೆಗೆ ಉನ್ನತೀಕರಣಕ್ಕೆ 558 ಹುದ್ದೆ, 50 ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಳ ವಿದ್ಯಾರ್ಥಿಗಳ ದ್ವಿಗುಣ ಕ್ಕೆ 250 ಹುದ್ದೆ , 6 ರಿಂದ 10 ನೇ ತರಗತಿ ವರೆಗೆ 10 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲು 100 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಆಗಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.

 

Related posts

ಮತ್ತೆ ಕೋವಿಡ್ ಆತಂಕ: ಮುನ್ನೆಚ್ಚರಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ.

ಗ್ಯಾರಂಟಿಗಳಲ್ಲೇ ಮುಳುಗಿರುವ ರಾಜ್ಯ ಸರ್ಕಾರ ರೈತರನ್ನು ಮರೆತಿದೆ-ಕೆ.ಎಸ್. ಈಶ್ವರಪ್ಪ

ನಾಳೆ ಉಚಿತ ದಂತ ತಪಾಸಣೆ ಮತ್ತು ಸಲಹೆ.