ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರಾಷ್ಟ್ರಮಟ್ಟದ ವಿಜ್ಞಾನ ವಿಚಾರಸಂಕಿರಣದಲ್ಲಿ ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಗೋವರ್ಧನ ಗೌಡರಿಗೆ ದ್ವಿತೀಯ ಸ್ಥಾನ

ಶಿವಮೊಗ್ಗ: ರಾಷ್ಟ್ರಮಟ್ಟದ ವಿಜ್ಞಾನ ವಿಚಾರಸಂಕಿರಣದಲ್ಲಿ ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಗೋವರ್ಧನ ಗೌಡ ಅವರು ದ್ವಿತೀಯ ಸ್ಥಾನ ಪಡೆಯವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಬಿಇಓ ಅಭಿನಂದನೆ
ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ  ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಪ್ರೌಢ ಶಾಲೆಯ  ವಿದ್ಯಾರ್ಥಿ ಗೋವರ್ಧನ್ ಗೌಡ ಎ.ಎಸ್. ಅವರು ಎರಡನೆ ಸ್ಥಾನ ಗಳಿಸಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದು ಆ ಸಾಧಕ ವಿದ್ಯಾರ್ಥಿ, ಪೋಷಕರು ಹಾಗೂ  ತರಬೇತಿಗೊಳಿಸಿದ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರಿಗೆ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಹೃತ್ಪೂರ್ವಕವಾಗಿ  ಅಭಿನಂದಿಸಿದ್ದಾರೆ.
ರಾಮಕೃಷ್ಣ ವಿದ್ಯಾನಿಕೇತನ ಅಭಿನಂದನೆ:
ರಾಜ್ಯಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಕ್ಕೆ ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಹತ್ತನೇ ತರಗತಿ ವಿದ್ಯಾರ್ಥಿ ಗೋವರ್ಧನ ಗೌಡ ಆಯ್ಕೆಯಾಗಿದ್ದು ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಅಭಿನಂದಿಸಿದ್ದಾರೆ.
ಗೋವರ್ಧನ್ ಅವರು ಕಳೆದ ಅಕ್ಟೋಬರ್ 12ರಂದು ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರಗೋಷ್ಠಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಧಾನ್ಯಗಳು ಅದ್ಭುತ ಆಹಾರವೇ ಅಥವಾ ರೂಡಿಗತ ಪಥ್ಯಾಹಾರವೇ ಎಂಬ ವಿಷಯವನ್ನು ಹಲವು ಉದಾಹರಣೆಗಳ ಸಹಿತ ಅತ್ಯಂತ ವ್ಯವಸ್ಥಿತವಾಗಿ ಪ್ರಸ್ತುತಪಡಿಸಿದ್ದ ಗೋವರ್ಧನ್ ಗೌಡ ಅವರು ಶಿವಮೊಗ್ಗದ ಶ್ರೀಕಾಂತ್ ಹಾಗೂ ಸುಮನಾ ದಂಪತಿಗಳ ಪುತ್ರ.
ಗೋವರ್ಧನ್ ಗೌಡ ಅವರ ಸಾಧನೆಗೆ, ರಾಷ್ಟ್ರಮಟ್ಟಕ್ಕೆ ಗೆಲುವಿನೊಂದಿಗೆ ರಾಮಕೃಷ್ಣ  ವಿದ್ಯಾಸಂಸ್ಥೆಗೆ ಹಾಗೂ ಶಿವಮೊಗ್ಗ ಜಿಲ್ಲೆಗೆ ವಿಶೇಷವಾಗಿ ಇಡೀ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದ ಗೋವರ್ಧನ್ ಹಾಗೂ ಅವರ ಪೋಷಕರನ್ನು ಶಾಲಾ ಆಡಳಿತ ಮಂಡಳಿ  ಪರವಾಗಿ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಅಭಿನಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ತೀರ್ಥೇಶ್ ಹಾಗೂ ವಿಜ್ಞಾನ ಶಿಕ್ಷಕಿ ಕೆ.ಜಿ. ಮಂಜುಳಾ ಹಾಗೂ ಶಿಕ್ಷಕ ವೃಂದವನ್ನು ಅಭಿನಂಧಿಸಿದ್ದಾರೆ.

Related posts

ನುದಾನಿತ ಪಿಂಚಣಿ ವಂಚಿತ ನೌಕರರ ಸಮಸ್ಯೆ ಬಗರಹರಿಲು ಆಗ್ರಹ: ನ.5ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ

ಹುತಾತ್ಮ ಯೋಧ ಪ್ರಾಂಜಲ್ ಅಂತಿಮಯಾತ್ರೆ: ಶೋಕಸಾಗರದಲ್ಲಿ ಕುಟುಂಬ.

ಚುನಾವಣಾ ಅಭ್ಯರ್ಥಿಗಳು ಕುಟುಂಬಸ್ಥರ ಆಸ್ತಿ ವಿವರ ಸಲ್ಲಿಸದಿರುವುದು ಭ್ರಷ್ಟಾಚಾರಕ್ಕೆ ಸಮ- ಹೈಕೋರ್ಟ್.