ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ:ಇನ್ಮುಂದೆ ಟಿಕೆಟ್​​ಗಾಗಿ ಕ್ಯೂ ನಿಲ್ಲಬೇಕಿಲ್ಲ

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಸಿಹಿಸುದ್ದಿ ನೀಡಿದ್ದು ಇನ್ಮುಂದೆ  ಮೆಟ್ರೋ ಪ್ರಯಾಣಿಕರು ಟಿಕೆಟ್​​ಗಾಗಿ ಕ್ಯೂ ನಿಲ್ಲಬೇಕಿಲ್ಲ. ವಾಟ್ಸಪ್​​​, ಯಾತ್ರಾ QR ಕೋಡ್​​​​ ಬಳಸಿ ಟಿಕೆಟ್ ಖರೀದಿಸಬಹುದು.

ಹೌದು, ಪ್ರತಿ ಬಾರಿಯೂ ಟಿಕೆಟ್ ​ಗಾಗಿ ಸರತಿ ಸಾಲಿನಲ್ಲಿ ನಿಂತು  ಕಾಯುವುದಕ್ಕೆ ಬ್ರೇಕ್ ಬಿದ್ದಿದೆ. ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಪರದಾಡುವ ಪ್ರಯಾಣಿಕರು ಇನ್ಮುಂದೆ   ಮನೆ, ಕಚೇರಿ ಅಥವಾ ತಾವಿದ್ದ ಸ್ಥಳದಿಂದಲೇ ಮುಂಗಡವಾಗಿ ಮೊಬೈಲ್‌ ಕ್ಯೂಆರ್‌ ಟಿಕೆಟ್‌ ಪಡೆಯಬುದು. ಜೊತೆಗೆ ಮೊಬೈಲ್​​​ QR ಟಿಕೆಟ್​ಗಳು ಟೋಕನ್​​​ ದರಕ್ಕಿಂತ 5% ರಿಯಾಯ್ತಿ ಇರಲಿದೆ. ಇದೇ ನವೆಂಬರ್‌ 16ರಿಂದ ಈ ಹೊಸ ಸೌಲಭ್ಯ ಸಿಗಲಿದೆ.

ನವೆಂಬರ್‌ 16ರಿಂದಲೇ ಮೊಬೈಲ್‌  ಕ್ಯೂಆರ್‌ ಕೋಡ್‌ ಗ್ರೂಪ್‌ ಟಿಕೆಟ್‌ ಗಳನ್ನು ಪರಿಚಯಿಸಲು ಬಿಎಮ್​ಆರ್​ಸಿಎಲ್ ಮುಂದಾಗಿದೆ. ಪ್ರಸ್ತುತ ಮೊಬೈಲ್‌ ಕ್ಯೂಆರ್‌ ಟಿಕೆಟ್‌ ಗಳನ್ನು ಮೊಬೈಲ್‌ ಅಪ್ಲಿಕೇಷನ್‌ ಗಳ ಮೂಲಕ ಒಬ್ಬ ಪ್ರಯಾಣಿಕನಿಗೆ ಒಂದು ಟಿಕೆಟ್‌ ನೀಡಲಾಗುತ್ತಿದೆ. ಗುಂಪು ಟಿಕೆಟ್‌ ಗಳನ್ನೂ ಕ್ಯೂಆರ್‌ ಕೋಡ್‌ ಮೂಲಕ ನೀಡಬೇಕು ಎಂದು ಪ್ರಯಾಣಿಕರು ಈ ಹಿಂದೆ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಮೊಬೈಲ್‌ ಕ್ಯೂಆರ್‌  ಗ್ರೂಪ್‌ ಟಿಕೆಟ್‌ ಜಾರಿಗೆ ತರಲಾಗಿದೆ. ಈ ಟಿಕೆಟ್‌ ಗಳು ಟೋಕನ್‌ ದರಕ್ಕಿಂತ ಶೇಕಡಾ 5ರಷ್ಟು ರಿಯಾಯಿತಿಯನ್ನು ಹೊಂದಿರುತ್ತವೆ. ನ.16 ರಿಂದ ಒಮ್ಮೆ ಆರು ಜನರ ಗುಂಪು ಪ್ರಯಾಣಿಸಲು ಅನುಕೂಲವಾಗುವಂತೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳ ಪರಿಚಯ ಮಾಡಲಾಗುತ್ತಿದೆ.

Related posts

ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ಮೆಹಕ್ ಶರೀಫ್ ಅಧಿಕಾರ ಸ್ವೀಕಾರ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಮಾರ್ಗದರ್ಶನ ಅಗತ್ಯ-ಡಾ. ದಿನೇಶ್

ಮೈಸೂರು ರಾಜವಂಶಸ್ಥ ಯಧುವೀರ ಒಡೆಯರ್ ಅವರಿಗೆ ಸನ್ಮಾನ.