ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ.

ಬೆಂಗಳೂರು: ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಿಸಬಹುದು ಎನ್ನಲಾಗುತ್ತಿದೆ.

ಸರ್ಕಾರವು ಮೂರು ಪ್ರತಿಶತದಷ್ಟು ಡಿಎಯನ್ನು ಹೆಚ್ಚಿಸಿದರೆ, ನಂತರ ನೌಕರರ ತುಟ್ಟಿ ಭತ್ಯೆಯು 42% ರಿಂದ 45% ಕ್ಕೆ ಹೆಚ್ಚಾಗುತ್ತದೆ. ಇದರೊಂದಿಗೆ ಪಿಂಚಣಿದಾರರ ಡಿಆರ್ ಕೂಡ ಶೇ.3ರಿಂದ ಶೇ.45ರಷ್ಟು ಹೆಚ್ಚಾಗಲಿದೆ.

ಜುಲೈ ಒಂದರಿಂದ ಮೂರು ತಿಂಗಳ ನಡುವೆ ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸುತ್ತದೆ ಎನ್ನಲಾಗಿದೆ. ಡಿಎ ಮತ್ತು ಡಿಆರ್ ಹೆಚ್ಚಳದ ಲಾಭವನ್ನು 1 ಕೋಟಿ ನೌಕರರು ಮತ್ತು ಪಿಂಚಣಿದಾರರು ಪಡೆಯಲಿದ್ದಾರೆ.

ಕಳೆದ ಬಾರಿ ಜನವರಿ 1ರಿಂದ ಜಾರಿಗೆ ಬರುವಂತೆ ಶೇ.4ರಷ್ಟು ಡಿಎ ಹೆಚ್ಚಿಸಿದ್ದ ಸರ್ಕಾರ, ಶೇ.38ರಿಂದ ಶೇ.42ಕ್ಕೆ ಏರಿಕೆ ಮಾಡಿದ್ದು, ಈಗ ಶೇ.3ರಷ್ಟು ಹೆಚ್ಚಳ ಮಾಡಿದ ನಂತರ ಶೇ.45ರಷ್ಟು ಡಿಎ ಹೆಚ್ಚಾಗಲಿದೆ.

 

Related posts

ಶಿವಮೊಗ್ಗದ ಪಶು ವೈದ್ಯಕೀಯ ಕ್ರೀಡಾಪಟುಗಳು: 17ನೇ ಅಂತರ್ ರಾಜ್ಯಮಟ್ಟದ ಕ್ರೀಡಾಕೂಟಲ್ಲಿ ಉತ್ತಮ ಸಾಧನೆ

ಮಕ್ಕಳ ದಸರಾ – ರಾಜ್ಯಮಟ್ಟದ ಕುಡೋ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಗಳಿಗೆ ಚಾಲನೆ.

7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಇನ್ನ ತಿಂಗಳು ಬಾಕಿ: ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಗುತ್ತಾ ಗುಡ್ ನ್ಯೂಸ್