ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬೇಡಿದ ವರದ ಕರುಣಿಸುವ ಗಜಗೌರಿ-ಕೆ.ಎಲ್.ಜಗದೀಶ್ವರ್

ಶಿವಮೊಗ್ಗ: ಬೇಡಿದ ವರವನು ಕರುಣಿಸುವ, ಆತ್ಮವಿಶ್ವಾಸ ಮನಶಾಂತಿ ವೃದ್ಧಿಸುವ ಗಜಗೌರಿ ವೃತ ಮಹಿಳೆಯರ ಅಚ್ಚು ಮೆಚ್ಚಿನ ಜನಪ್ರಿಯ ಹಬ್ಬವಾಗಿದ್ದು, ಗಣೇಶ ಹಬ್ಬದ ಜತೆಯಲ್ಲಿ ಕೆಲವೇ ಜನರು ಗಜಗೌರಿ ವೃತ ಆಚರಣೆ ಮಾಡುತ್ತಾರೆ ಎಂದು ಶಿಮೂಲ್ ಮಾಜಿ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಸುನಂದಾ ಜಗದೀಶ್ವರ್ ಅವರ ನಿವಾಸದಲ್ಲಿ ಗಜಗೌರಿ ವೃತ ಸಂದರ್ಭದಲ್ಲಿ ವೃತದ ಮಾಹಿತಿ ನೀಡಿ, 400 ವರ್ಷಗಳ ಇತಿಹಾಸದಿಂದ ಹಾಗೂ ಹಳೇಯ ತಲೆಮಾರುಗಳಿಂದ ನಿರಂತರವಾಗಿ ಆಚರಣೆ ಮಾಡುತ್ತಿದ್ದು, ಗಜಗೌರಿ ಸಂಪೂರ್ಣ ಮರದಿಂದ ಹಾಗೂ ಶಿರದ ಭಾಗ ಮಣಿಯಿಂದ ತಯಾರಿ ಮಾಡಿ 3 ದಿನಗಳ ಕಾಲ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಗಜ ಗೌರಿ ವೃತವನ್ನು ಶ್ರದ್ಧೆ ಭಕ್ತಿ ಏಕಾಗ್ರತೆಯಿಂದ ಆಚರಣೆ ಮಾಡುವವರಿಗೆ ದೇವರು ಸಕಲವನ್ನು ಕರುಣಿಸುತ್ತದೆ ಎಂಬ ಪ್ರತೀತಿ ಇದೆ. ಮೂರು ದಿನದ ವೃತದಲ್ಲಿ ಮುತ್ತೈದೆಯರಿಗೆ ಬಾಗಿನ ಫಲ ತಾಂಬೂಲ ಪ್ರಸಾದ ಹಾಗೂ ಬಳೆ ಉಡಿ ತುಂಬುವ ಮುಖಾಂತರ ಆಚರಿಸಿ ಕೊನೆಯ ದಿನ ಸಾಮೂಹಿಕ ಅನ್ನ ಸಂತರ್ಪಣೆಯೊAದಿಗೆ ಸಂಪನ್ನಗೊಳಿಸಲಾಗುವುದು ಎಂದರು.

ವಿಶೇಷ ಗಜ ಗೌರಿ ವೃತದಲ್ಲಿ ಶಿವಮೊಗ್ಗ ನಗರ ಹಾಗೂ ಗ್ರಾಮದ ಸುಮಂಗಲಿಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ನಂದಿತಾವರೆ ಶಾಸ್ತ್ರ ಪೀಠದ ಶ್ರೀ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಆಶೀರ್ವಚನ ನೆರವೇರಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಷಡಾಕ್ಷರಿ, ಎಸ್.ಪಿ.ದಿನೇಶ್, ಜಿ.ವಿಜಯ್‌ಕುಮಾರ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಶ್ವೇತಾ ಆಶಿತ್, ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ವಾಗ್ದೇವಿ ಬಸವರಾಜ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ರಾಜ್ಯಬಿಜೆಪಿಗೆ ನೂತನ ಸಾರಥಿ: ಕಮಲ ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ.

ಚಂದ್ರಯಾನ-3 ಯಶಸ್ವಿ: ಆ.26ಕ್ಕೆ ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ.

ಗೊಂದಲಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ-ಭವಿಷ್ಯ ನುಡಿದ ಕಾಲಜ್ಞಾನಿ ಕೊಡೇಕಲ್ ಬಸವಣ್ಣ..