ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭವಿಷ್ಯವು ಪ್ರಸ್ತುತದಲ್ಲಿ ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ- ಡಾ . ಅರುಣ್ .ಎಂ .ಎಸ್

ಶಿವಮೊಗ್ಗ:  ನಾವು ನಮ್ಮ ಇಂದಿನ ದಿನವನ್ನು ಉತ್ತಮ ನಾಳೆಗಾಗಿ ಬಳಸಿಕೊಳ್ಳಬೇಕು. ಏಕತೆಯೇ ಶಕ್ತಿ. ಹಾಗಾಗಿ ವೈದ್ಯ ಸಮೂಹ ಒಂದಾಗಿ ಒಂದು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ನಮ್ಮ ಸಂಘದ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರುವತ್ತ ಇಂದು ಪ್ರಯತ್ನ ಸಾಗಿದೆ . ನಮ್ಮ ದೇಶವನ್ನು ಶಕ್ತಿಯುತ ಮತ್ತು ವಿಶ್ವದಲ್ಲಿ ಗೌರವಾನ್ವಿತವಾಗಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಾವು ಒಂದಾಗೋಣ, ಕಷ್ಟಪಟ್ಟು ಕೆಲಸ ಮಾಡೋಣ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ . ಅರುಣ್ .ಎಂ .ಎಸ್ ಅವರು ಹೇಳಿದರು .

77ನೇ ಸ್ವಾತಂತ್ರ ದಿನಾಚರಣೆಯನ್ನು ಭಾರತೀಯ ವೈದ್ಯಕೀಯ ಸಂಘ ಅತ್ಯಂತ ಸಡಗರದಿಂದ ಆಚರಿಸಲಾಯಿತು . 100 ಕ್ಕೂ ಹೆಚ್ಚು ಸದಸ್ಯರ ಭಾಗವಹಿಸುವಿಕೆಯೊಂದಿಗೆ  ಹಬ್ಬದ ವಾತಾವರಣದೊಂದಿಗೆ ಸಮಾರಂಭ ನಡೆಯಿತು .
ಅಧ್ಯಕ್ಷ ಡಾ.ಅರುಣ್ ಎಂ ಎಸ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಕೆಲಸ ಮಾಡಿ ಸಮಾಜದ ಉನ್ನತಿಗೆ ಹೇಗೆ ಸಹಾಯ ಮಾಡಬಹುದು ಎಂಬ ಸಂದೇಶ ನೀಡಿದರು. 14.8.2023 ನೇ ತಾರೀಖು  ಮುಕ್ತಾಯವಾದ ಒಂದು ತಿಂಗಳ ಅವಧಿಯ ಅಧಿಕಸ್ಯ ಅಧಿಕಫಲಂ ಮೆಗಾ ಆರೋಗ್ಯ ಜಾಗೃತಿ  ಶಿಬಿರದಲ್ಲಿ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಭಾಗವಹಿಸಿದ ವೈದ್ಯರಿಗೆ ಐಎಂಎ  ಪಿನ್‌ಗಳನ್ನು ವಿತರಿಸಲಾಯಿತು. ದೂರದರ್ಶನದ  ಹಿಂದಿನ ಕಾಲದ ಮಿಲೇ  ಸುರ್ ಮೇರಾ ತುಮ್ಹಾರಾ ಗೀತೆಯನ್ನು ಸದಸ್ಯರಾದ ಡಾ.ದಯಾನಂದ್, ಡಾ.ರೇಖಾ, ಡಾ.ಚೇತನ್, ಡಾ.ರಾಮಚಂದ್ರ ಬಾದಾಮಿ, ಡಾ.ರಕ್ಷಾ ರಾವ್ ಮತ್ತು ಡಾ.ಝೀನತ್ ಅವರು ಕರೋಕೆಯೊಂದಿಗೆ ಪ್ರಸ್ತುತಪಡಿಸಿದರು. ಉಪಹಾರದೊಂದಿಗೆ ಅಧಿವೇಶನ ಮುಕ್ತಾಯವಾಯಿತು. ಕಾರ್ಯದರ್ಶಿ ಡಾ . ರಕ್ಷಾ ರಾವ್ ಕಾರ್ಯಕ್ರಮ ನಿರೂಪಿಸಿದರು . ಖಜಾಂಚಿ ಡಾ. ಶಶಿಧರ್ ವಂದನಾರ್ಪಣೆ ನಡೆಸಿದರು

Related posts

2024ರ ಲೋಕಸಭೆ ಚುನಾವಣೆ: ಕಾಂಗ್ರೆಸ್’ನಿಂದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ..

ಸಮಸ್ತ ಇಸ್ರೋ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು…ರಮೇಶ್ ಶೆಟ್ಟಿ ಶಂಕರಘಟ್ಟ

2019ಕ್ಕಿಂತ ಮುಂಚೆ ನೋಂದಾಯಿಸಲಾದ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ: ಬದಲಿಸದಿದ್ದರೇ ಬೀಳುತ್ತೆ ದಂಡ..