ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನ್ಯೂಸ್ ಪೇಪರ್ನಲ್ಲಿ ಆಹಾರ ಪ್ಯಾಕ್ ಮಾಡಿ ಮಾರುವುದನ್ನ ನಿಲ್ಲಿಸಿ- FSSAI ತಾಕೀತು.

ನವದೆಹಲಿ: ನ್ಯೂಸ್ ಪೇಪರ್ ಹಾಗೂ ಇನ್ನೀತರ ಪತ್ರಿಕೆಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) , ಆಹಾರ ಪದಾರ್ಥ ಮಾರಾಟಗಾರರಿಗೆ ತಾಕೀತು ಮಾಡಿದೆ.

ಪತ್ರಿಕೆ ಪ್ರಿಂಟ್ ನಲ್ಲಿ ಬಳಸುವ ಇಂಕ್ ನಲ್ಲಿ ಹಲವು ರೀತಿಯ ರಾಸಾಯನಿಕ ಪದಾರ್ಥಗಳು ಇರುವುದರಿಂದ , ಇವು ಆಹಾರದ ಮೂಲಕ ಮಾನವ ದೇಹವನ್ನು ಸೇರಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಜೊತೆಗೆ ಪೇಪರ್ಗಳು ಬೇರೆ ಬೇರೆ ವಾತಾವರಣಕ್ಕೆ ತೆರೆದುಕೊಳ್ಲುವುದರಿಂದ ಅವುಗಳ ಮೇಲೆ ಬ್ಯಾಕ್ಟೀರಿಯಾ, ವೈರಸ್ಗಳು ಅಂಟಿಕೊಂಡು ಆಹಾರದ ಮೂಲಕ ಖಾಯಿಲೆ ಹರಡಲು ಕಾರಣವಾಗುತ್ತವೆ.

ಅದರಲ್ಲೂ ಬಜ್ಜಿ, ಬೋಂಡಾದಂತಹ ಕರಿದ ಆಹಾರ ಪದಾರ್ಥಗಳ ಎಣ್ಣೆಯನ್ನು ಪೇಪರ್ ಗಳು ಹೀರಿಕೊಂಡು ಪೇಪರ್ ಮೇಲಿನ ರಾಸಾಯನಿಕ ಆಹಾರ ಪದಾರ್ಥ ಸೇರುತ್ತವೆ. ಹೀಗಾಗಿ ಪೇಪರ್ಗಳಲ್ಲಿ ಆಹಾರ ಪ್ಯಾಕ್ ಮಾಡಿ ಸಂಗ್ರಹಿಸುವುದು ಮತ್ತು ಮಾರಾಟವನ್ನು ಕೂಡಲೇ ನಿಲ್ಲಿಸಿ ಎಂದು ತಾಕೀತು ಮಾಡಿದೆ.

ಆಹಾರ ಮಾರಾಟಗಾರರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಇಲ್ಲದಿದ್ದಲ್ಲಿ ದಂಡ ವಿಧಿಸುವುದಾಗಿ ಎಫ್ಎಸ್ಎಸ್ಎಐ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಮಲಾ ವರ್ಧನಾ ರಾವ್ ಆದೇಶ ನೀಡಿದ್ದಾರೆ. ಜೊತೆಗೆ ಈ ನಿಯಮಗಳನ್ನು ರಾಜ್ಯ ಆಹಾರ ಸುರಕ್ಷತೆ ಸಕ್ಷಮ ಪ್ರಾಧಿಕಾರದ ಜೊತೆ ಜಂಟಿಯಾಗಿ ನಿಗಾ ಇಡಲಿದೆ.

 

Related posts

ಸಂಸದ ಡಿ.ಕೆ ಸುರೇಶ್ ಭೇಟಿ : ಎಂ. ರಮೇಶ್ ಶೆಟ್ಟಿ ಅವರಿಗೆ ಪರಿಷತ್ ಟಿಕೆಟ್ ನೀಡುವಂತೆ ಮನವಿ.

25ನೇ ವರ್ಷ ಪೂರೈಸಿದ ಸರ್ಚ್ ಇಂಜಿನ್ ದೈತ್ಯ ಗೂಗಲ್

ಎರಡನೇ ತರಗತಿಯಲ್ಲಿಯೇ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ವರ್ಷಿತಾ