ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗಸಿನಿಮಾ

ಹಳೆಯ ಚಲನಚಿತ್ರಗಳ ಗುಣಮಟ್ಟವನ್ನು ಈಗಿನ ಚಿತ್ರಗಳು ಕೂಡ ಕಾಯ್ದುಕೊಳ್ಳಬೇಕು- ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಹಳೆಯ ಚಲನಚಿತ್ರಗಳಲ್ಲಿ ಮಧುರ ಗೀತೆಗಳು ಮತ್ತು ಅದರ ಸಾಹಿತ್ಯ ಹಾಗೂ ಚಿತ್ರಕಥೆ, ನಿರ್ದೇಶನ ಎಲ್ಲವೂ ಕೂಡ ಅವಿಸ್ಮರಣೀಯವಾಗಿತ್ತು. ಇಡೀ ಕುಟುಂಬದೊಂದಿಗೆ ಚಿತ್ರಗಳನ್ನು ನೋಡಬಹುದಿತ್ತು. ಈಗಿನ ಚಿತ್ರಗಳು ಕೂಡ ಅದೇ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ದಸರಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಾಗಾರದಿಂದ ಶಿವಮೊಗ್ಗದಿಂದಲೇ ಅತ್ಯುತ್ತಮ ಯುವ ಸಾಹಿತಿಗಳು, ಗಾಯಕರು, ನಿರ್ದೇಶಕರು ಪ್ರಯೋಜನ ಪಡೆಯಲಿ ಎಂದು ನಾನು ಆಶಿಸುತ್ತೇನೆ. ಕರ್ಕಶವಾದ ಸಂಗೀತ, ಸಾಹಿತ್ಯವಿಲ್ಲದ ಗೀತೆಗಳು, ಅದರ ಹೊರತಾಗಿ ನಮ್ಮ ಸಾಂಸ್ಕøತಿಕ ಮೆರುಗನ್ನು ಹೆಚ್ಚಿಸುವ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳು ಮತ್ತು ಚಿತ್ರಗೀತೆಗಳು ಬರಬೇಕಾಗಿದೆ. ಹಳೆಯ ಹಾಡುಗಳು ಇಂದಿಗೂ ಜೀವಂತವಾಗಿವೆ. ಹೊಸ ಚಿತ್ರಗಳ ಗೀತೆಗಳು ಬೇಗನೆ ಮರೆಯಾಗುತ್ತವೆ ಎಂದ ಅವರು, ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅನುಭವೀ ಸಾಹಿತಿಗಳು ಇದ್ದಾರೆ ಎಂದರು.
ಅವರಿಂದ ಮಾಹಿತಿ ಪಡೆದು ಅಳವಡಿಸಿಕೊಳ್ಳಿ ಎಂದರು. ಮೊದಲ ಅವಧಿಯಲ್ಲಿ ಚಲನಚಿತ್ರ ಮತ್ತು ಸಾಹಿತ್ಯದ ಬಗ್ಗೆ ಚಿಂತಕರಾದ ಶಾಂತಾರಾಂ ಪ್ರಭು, ಎರಡನೇ ಅವಧಿಯಲ್ಲಿ ಚಲನಚಿತ್ರ ಮತ್ತು ಕಿರುಚಿತ್ರ ನಿರ್ಮಾಣದ ಬಗ್ಗೆ ಡಿ. ಸತ್ಯಪ್ರಕಾಶ್, ಚಲನಚಿತ್ರ ಛಾಯಾಗ್ರಹಣದ ಬಗ್ಗೆ ಹೆಸರಾಂತ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಮತ್ತು ನಾಲ್ಕನೆ ಅವಧಿಯಲ್ಲಿ ಹಾಡು ಹುಟ್ಟಿದ ಬಗೆ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಸ್. ಶ್ರೀಧರ ಮೂರ್ತಿ ಅವರಿಂದ ಉಪನ್ಯಾಸ ನಡೆಯಿತು.
ವೇದಿಕೆಯಲ್ಲಿ ಶ್ರೀಧರಮೂರ್ತಿ, ಶಾಂತಾರಾಂ ಪ್ರಭು, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಯು.ಹೆಚ್. ವಿಶ್ವನಾಥ್, ಮಂಜುನಾಥ್, ಶಂಕರ್, ವೈದ್ಯನಾಥ್ ಮೊದಲಾದವರಿದ್ದರು.

Related posts

ಭಾರಿ ಮಳೆಗೆ ಬೆಂಗಳೂರು ತತ್ತರ: ತಡರಾತ್ರಿ ಬಿಬಿಎಂಪಿ ವಾರ್ ರೂಮ್ ಗೆ ಭೇಟಿ ನೀಡಿ ಡಿಸಿಎಂ ಡಿ.ಕೆ ಶಿವಕುಮಾರ್ ಪರಿಶೀಲನೆ.

ಸಮುದಾಯದ ಅಭಿವೃದ್ಧಿ ಸಂಸ್ಥೆಗಳ ಪಾತ್ರ ಮಹತ್ತರ-ಎನ್.ಗೋಪಿನಾಥ್

ಗೊಂದಲಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕ-ಭವಿಷ್ಯ ನುಡಿದ ಕಾಲಜ್ಞಾನಿ ಕೊಡೇಕಲ್ ಬಸವಣ್ಣ..