ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಯುವ ಕಾಂಗ್ರೆಸ್ ನಿಂದ ಸ್ವಾತಂತ್ರೋತ್ಸವ ದಿನಾಚರಣೆ – ಮಹಿಳಾ ಸಬಲೀಕರಣಕ್ಕೆ ಶಕ್ತಿ ನೀಡಲು ಎಲ್ಲಾ ಬ್ಲಾಕ್ ಮಟ್ಟದಲ್ಲಿ ಮಹಿಳೆಯರಿಂದ ಧ್ವಜಾರೋಹಣ – ಜಿಲ್ಲಾಧ್ಯಕ್ಷ ಹೆಚ್‍.ಪಿ.ಗಿರೀಶ್

ಶಿವಮೊಗ್ಗ:  ಆಗಸ್ಟ್ 15ರ ನಾಳೆ ಸ್ವಾತಂತ್ರೋತ್ಸವ ದಿನಾಚರಣೆ ಸುಸಂದರ್ಭದಲ್ಲಿ ಮಹಿಳಾ ಸಬಲೀಕರಣದ ದೈಯೋದ್ದೇಶದೊಂದಿಗೆ ಜಿಲ್ಲೆಯ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಯುವ ಕಾಂಗ್ರೆಸ್ ನಿಂದ ‘ಶಕ್ತಿ ಸೂಪರ್ ಸ್ತ್ರೀ’ (ಅದ್ಭುತ ಮಹಿಳೆ’ ) ಶೀರ್ಷಿಕೆ ಅಡಿಯಲ್ಲಿ ಮಹಿಳೆಯರಿಂದ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್ ತಿಳಿಸಿದ್ದಾರೆ.

* ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಮಹಿಳಾಸಬಲೀಕರಣಗೊಳಿಸಲು ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ವಿಧಾನಸಭಾ ಮಟ್ಟದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶಕ್ತಿ ಕ್ಲಬ್ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ರಾಜಕೀಯ, ಸಾಮಾಜಿಕ, ಶಿಕ್ಷಣ ಸೇರಿದಂತೆ ಇನ್ನು ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸಲು ಶಕ್ತಿ ನೀಡುವಂತಹ ಕಾರ್ಯಕ್ರಮ ಆಯೋಜನೆ ಮಾಡಲಿದ್ದು, ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗಿದ್ದು ಜೊತೆಗೆ ಅವರ ಹಕ್ಕನ್ನು ಪ್ರತಿಪಾದಿಸಲು ಶಕ್ತಿ ಕುಂಠಿತವಾಗಿದ್ದು, ಇಂತಹ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮಹಿಳೆಯರಿಗೆ ಶಕ್ತಿ ಮತ್ತು ಉತ್ತೇಜನ ನೀಡಲು ‘ಅದ್ಭುತ ಮಹಿಳೆ’ ಎಂಬ ಕಾರ್ಯಕ್ರಮದ ಶೀರ್ಷಿಕೆ ಅಡಿಯಲ್ಲಿ ಸ್ವತಂತ್ರೋತ್ಸವದ ಅಂಗವಾಗಿ ದೇಶಾದ್ಯಂತ ಮಹಿಳೆಯರ ಕೈಯಲ್ಲಿ ಧ್ವಜಾರೋಹಣ ಮಾಡುವ ಮುಖಾಂತರ ಮೊದಲನೇ ಕಾರ್ಯಕ್ರಮವನ್ನು ನಡೆಸುತ್ತಿದ್ದು*

ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಜಿಲ್ಲೆಯಾದ್ಯಂತ ಬ್ಲಾಕ್ ಮಟ್ಟದಲ್ಲಿ ಯುವ ಕಾಂಗ್ರೆಸ್‌ನ ಕಾರ್ಯಕರ್ತರು, ಮಹಿಳೆಯರ ನೇತೃತ್ವದಲ್ಲಿ ಧ್ವಜಾರೋಹಣ ಮಾಡಬೇಕೆಂದು , ಏಳು ವಿಧಾನಸಭಾ ಕ್ಷೇತ್ರದ ಬ್ಲಾಕ್ ಯುವ ಕಾಂಗ್ರೆಸ್‌ ಮಟ್ಟದಲ್ಲಿ ಧ್ವಜರೋಹಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ

Related posts

ವಕೀಲರ ಮುಂದೆ ನಡೆಯುವ ವಿವಾಹಕ್ಕೂ ಮನ್ನಣೆ- ಸುಪ್ರೀಂಕೋರ್ಟ್

ಸರ್ಕಾರದ ನಿರ್ಧಾರ: ಈ ವರ್ಷ ‘ಶಿಕ್ಷಕ ವರ್ಗಾವಣೆ’ ಇಲ್ಲ:

ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ: ಸಿಎಂ ಸಿದ್ದರಾಮಯ್ಯ ನುಡಿ