ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹಬ್ಬಗಳು ಸಂಸ್ಕೃತಿಯ ಪ್ರತಿಬಿಂಬ-ಡಾ. ಕೆ.ಆರ್.ಶ್ರೀಧರ್

ಶಿವಮೊಗ್ಗ: ಹಬ್ಬಗಳು ನಮ್ಮ ಸಂಸ್ಕೃತಿ ಪ್ರತಿಂಬಿಸುವ ಕೆಲಸ ಮಾಡುತ್ತವೆ. ಪ್ರೀತಿ ವಿಶ್ವಾಸದ ಜತೆಯಲ್ಲಿ ಆತ್ಮವಿಶ್ವಾಸ ಭರವಸೆ ಹೆಚ್ಚಿಸುವ ಕೆಲಸ ಹಬ್ಬಗಳಿಂದ ಆಗುತ್ತದೆ. ಎಲ್ಲರೂ ಒಟ್ಟುಗೂಡಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಆರ್.ಶ್ರೀಧರ್ ಹೇಳಿದರು.

ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯಲ್ಲಿರುವ ಸಾವಿತ್ರಮ್ಮ ಫೈನಾನ್ಸ್ನಲ್ಲಿ ಆಯೋಜಿಸಿದ್ದ ಧನಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯುವಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಹಬ್ಬ ಆಚರಣೆಗಳ ಬಗ್ಗೆ ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮನೋವೈದ್ಯ ಡಾ. ಪವಿತ್ರ ಮಾತನಾಡಿ, ಪ್ರತಿಯೊಬ್ಬ ಹಬ್ಬಗಳಿಗೂ ಅದರದ್ದೇ ಆದ ಮಹತ್ವ ಇದ್ದು, ಹಬ್ಬಗಳ ಆಚರಣೆ ಹೊಂದಿರುವ ಧಾರ್ಮಿಕ ಹಿನ್ನೆಲೆಗಳ ಬಗ್ಗೆ ಸಮಗ್ರವಾಗಿ ಅರಿತುಕೊಳ್ಳಬೇಕು. ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಲಕ್ಷ್ಮೀಪೂಜೆ ಆಚರಿಸುತ್ತಿದ್ದು, ವ್ಯಾಪಾರ ವಹಿವಾಟು ಉತ್ತಮವಾಗಿ ಆರ್ಥಿಕ ಶಕ್ತಿ ವೃದ್ಧಿಸಲು ಪ್ರಾರ್ಥಿಸಲಾಗುತ್ತದೆ ಎಂದು ಹೇಳಿದರು.

ಬೇಡಿದ ವರವನ್ನು ಕರುಣಿಸುವ ಧನಲಕ್ಷ್ಮೀ ಆಚರಣೆಯು ದೇಶದ ವಿವಿಧ ಭಾಗಗಳಲ್ಲಿ ದೀಪಾವಳಿ ಸಂದರ್ಭಗಳಲ್ಲಿ ನಡೆಯುತ್ತದೆ. ಸಂಭ್ರಮ ಸಡಗರದಿಂದ ಪ್ರತಿಯೊಬ್ಬರು ಆಚರಣೆ ಮಾಡುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಲಕ್ಷ್ಮೀ ಪೂಜೆಯನ್ನು ಕುಟುಂಬದಲ್ಲಿ ತಲೆಮಾರುಗಳಿಂದ ನಡೆಸಿಕೊಂಡು ಬರುತ್ತಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಹಬ್ಬ ಆಚರಿಸಲಾಗುತ್ತದೆ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಎಂಎಲ್‌ಸಿ ಡಿ.ಎಸ್.ಅರುಣ್, ಶ್ರೀಕಾಂತ್, ಡಾ. ನಾಗರಾಜ್, ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್, ಗಿನ್ನಿಸ್ ದಾಖಲೆ ಪ್ರಶಸ್ತಿ ಪುರಸ್ಕೃತ ಜಿ.ಸವಿತಾ, ವಾಣಿ, ವಿವಿಧ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು.

Related posts

30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ- ಆರ್ ಬಿಐನಿಂದ ಹೊಸ ನಿಯಮ.

ಅಂದು ನಾನು ಒಪ್ಪಿದ್ರೆ ಐದು ವರ್ಷಗಳ ಸಿಎಂ ಆಗ್ತಾ ಇದ್ದೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

100ಕ್ಕೂ ಹೆಚ್ಚು ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಣೆ- ಕೃಷಿ ಸಚಿವ ಚಲುವರಾಯಸ್ವಾಮಿ.