ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭದ್ರಾ ಜಲಾಶಯದಿಂದ ನಾಲೆಗಳಿಗೆ ನಿರಂತರವಾಗಿ ನೀರು ಹರಿಸದಂತೆ ಆಗ್ರಹಿಸಿ ರೈತರ ಪ್ರತಿಭಟನೆ.

ಶಿವಮೊಗ್ಗ: ಭದ್ರಾ ಜಲಾಶಯದಿಂದ ನಾಲೆಗಳಿಗೆ ನಿರಂತರವಾಗಿ ನೀರು ಹರಿಸದಂತೆ ಆಗ್ರಹಿಸಿ ರೈತರು ಶಿವಮೊಗ್ಗದ ಭದ್ರಾ ನೀರಾವರಿ-ಕಾಡಾ ಕಚೇರಿ ಮುಂಭಾಗ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತರು ಇಂದು ಪ್ರತಿಭಟನೆ ನಡೆಸಿದರು.
ಸರ್ಕಾರ ಭದ್ರಾ ಜಲಾಶಯದಿಂದ 100 ದಿನಗಳ ಕಾಲ ನೀರು ಹರಿಸುವುದಾಗಿ ತೀರ್ಮಾನ ಮಾಡಿದೆ. ಆದರೆ ಜಲಾಶಯದಲ್ಲಿ ಈಗ ಕೇವಲ 165 ಅಡಿ ನೀರು ಮಾತ್ರ ಇದೆ. ಸತತವಾಗಿ ನೀರು ಹರಿಸಿದರೆ ಪ್ರತಿದಿನ ನಾಲ್ಕು ಇಂಚು ಪ್ರಮಾಣದ ನೀರು ಖಾಲಿ ಆಗುತ್ತದೆ. 80 ದಿನ ಹರಿಸಿದರೆ 30 ಅಡಿ ನೀರು ಖಾಲಿ ಆಗಿ ಜಲಾಶಯದಲ್ಲಿ ನೀರೇ ಇಲ್ಲವಾಗುತ್ತದೆ. ಬೇಸಿಗೆಗಳಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ರೈತರು ತಿಳಿಸಿದರು.
ಭದ್ರಾ ಅಚ್ಚುಕಟ್ಟು ಆಶ್ರಯದ ಎಲ್ಲಾ ರೈತರ ಬೆಳೆಗಳ ಹಿತವನ್ನು ಕಾಪಾಡಿಕೊಳ್ಳಬೇಕಾಗಿದೆ. ಆದರೆ ಭತ್ತದ ಬೆಳೆಗೆ ನೀರು ಹರಿಸುತ್ತೇವೆ ಎಂದು ಜಲಾಶಯದ ನೀರನ್ನು ಪೋಲು ಮಾಡುತ್ತಿರುವುದು ಸರಿಯಲ್ಲ. ಭತ್ತ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ಮಧ್ಯೆ ವಿಷದ ಬೀಜ ಬಿತ್ತಿ ಹೊಡೆದಾಡುವಂತೆ ಮಾಡುವುದನ್ನು ಬಿಟಟು ರೈತರ ಹಿತ ಕಾಪಾಡಲು ಆಗ್ರಹಿಸಿದರು.
ನಿರಂತರವಾಗಿ 100 ದಿನಗಳ ಕಾಲ ನೀರು ಹರಿಸಲು ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಈಗ ನೀರು ಹರಿಸಿದರೆ ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಈ ಕೂಡಲೇ ನಾಲೆಗಳಿಗೆ ಹರಿಸುವ ನೀರು ಸ್ಥಗಿತ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭೆ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಹೊರಗಡೆ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Related posts

ಸಿಎಂ ಸಿದ್ದರಾಮಯ್ಯ ಬಗ್ಗೆ ಪೋಸ್ಟ್ ಹಾಕಿ ನೆಟ್ಟಿಗರಿಗೆ ಆಹಾರವಾದ ಚಕ್ರವರ್ತಿ ಸೂಲಿಬೆಲೆ.

ಆಕಾಶವಾಣಿಯಲ್ಲಿ ನವದೇವಿ ದರ್ಶನ- ನವರಾತ್ರಿ ವಿಶೇಷ ಕಾರ್ಯಕ್ರಮ ಸರಣಿ

ಡಿಕೆಶಿ ವಿರುದ್ಧ ಕುತಂತ್ರ- ಬಂಡೆಯನ್ನು ಅಲ್ಲಾಡಿಸಲು ಬಿಜೆಪಿಯಿಂದ ಅಸಾಧ್ಯ: ಆರ್. ಮೋಹನ್ ಕಿಡಿ