ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಿವೃತ್ತರಾದ ಎ. ಹಾಲೇಶಪ್ಪರಿಗೆ ಬೀಳ್ಕೊಡುಗೆ

ಶಿವಮೊಗ್ಗ: ಸಾಗರದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ನಿವೃತ್ತರಾದ ಎ. ಹಾಲೇಶಪ್ಪ ಅವರನ್ನು ನಿನ್ನೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸಾಗರ ಗಂಗಾಮತ ಸಮಾಜ, ಸೇರಿದಂತೆ ವಿವಿಧ ತಾಲೂಕುಗಳ ಸಮಾಜದ ಘಟಕಗಳು ಮತ್ತು ಗೆಳೆಯರು ಸಾಗರದ ಭೀಮನಕೋಣೆ ರಸ್ತೆಯಲ್ಲಿರುವ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಹಾಲೇಶಪ್ಪ ಮತ್ತು ಅವರ ಪತ್ನಿ ಲಕ್ಷ್ಮೀದೇವಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಸೂಗೂರು ಶೇಖರಪ್ಪ, ಹಾಲೇಶಪ್ಪ ಅವರು ದಕ್ಷ ಆಡಳಿತಗಾರರಾಗಿದ್ದರು. ಅವರ 40 ವರ್ಷದ ಸೇವೆಯಲ್ಲಿ ನೆನಪಿನಲ್ಲಿಡುವ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸರ್ಕಾರಿ ಸೇವೆಗೆ ಸೇರಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಕೇವಲ ಸರ್ಕಾರಿ ಕೆಲಸವಲ್ಲದೆ ಗಂಗಾಮತ ಸಮಾಜದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಕಣ್ಮಣಿಯಾಗಿದ್ದರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎ. ಹಾಲೇಶಪ್ಪ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಎಂಬುದು ಅನಿವಾರ್ಯವಾಗಿದೆ. ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ. ಜೊತೆಗೆ ನಮ್ಮ ಸಮಾಜದ ಕೆಲಸವನ್ನು ಮಾಡುವ ಹಂಬಲವಿದೆ. ನನ್ನ ಎಲ್ಲಾ ಕೆಲಸಗಳಿಗೆ ನಮ್ಮ ಸಿಬ್ಬಂದಿಗಳು, ಅಧಿಕಾರಿಗಳು ಗೆಳೆಯರು ಸಮಾಜದ ಬಾಂಧವರು ಕಾರಣರಾಗಿದ್ದಾರೆ. ಇವರೆಲ್ಲರ ಪ್ರೀತಿಗೆ ನಾನು ಮೂಕವಿಸ್ಮಿತನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ನೌಕರ ವರ್ಗದವರು, ಸಮಾಜದ ಮುಖಂಡರು, ಬಂಧುಗಳು, ಗೆಳೆಯರು ಇದ್ದರು.

Related posts

ಭಯೋತ್ಪಾದನೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ವೇದಿಕೆ ಕೊಡಬೇಡಿ- ಟಿವಿ ಚಾನೆಲ್ ಗಳಿಗೆ ಕೇಂದ್ರ ಸರ್ಕಾರ ಸೂಚನೆ.

ಹೆಂಡತಿ- ಮಕ್ಕಳ ಮುಂದೆಯೇ ಎಂಎಲ್ ಸಿ 3ನೇ ಮದುವೆ : ಸಾಕ್ಷಿಯಾಗಿ ಸಹಿ ಹಾಕಿದ ಸಾಥ್ ನೀಡಿದ 2ನೇ ಪತ್ನಿ.

ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧಗೊಳ್ಳುವ ಅಭ್ಯರ್ಥಿಗಳಲ್ಲಿ ನಿಖರವಾದ ಗುರಿ ಇರಬೇಕು-ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ