ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ?: ಕೇಂದ್ರದ ವಿರುದ್ಧ ವ್ಯಂಗ್ಯವಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ಬೆಲೆ 200 ರೂ. ಇಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಮತ್ತು ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಸಿಲೆಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ..? ಕೇಂದ್ರ ಸರ್ಕಾರದ ಫಲಾನುಭವಿಗಳ ಸಮಾವೇಶ ಮಾಡಿದ್ದು ಅದು ಗಿಮಿಕ್ ಅಲ್ವಾ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಚುನಾವಣೆಗಿಂತ ಮುಂಚೆನೇ ಗ್ಯಾರೆಂಟಿ ಘೋಷಣೆ ಮಾಡಿತ್ತು. ಬಜೆಟ್‌ನಲ್ಲಿ ಘೋಷಣೆ ಕೂಡ ಮಾಡಿತ್ತು. 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಕೆಲಸವನ್ನು ಈ ರೀತಿ ಗಿಮಿಕ್ ಎನ್ನುವುದನ್ನು ಬಿಡಿ. ಸರ್ಕಾರದ ಕೆಲಸಗಳಿಗೆ ಸ್ವಾಗತ ಇರಲಿ, ಕೇವಲ ಟೀಕೆ ಮಾಡೋದಲ್ಲ ಎಂದು ಟಾಂಗ್ ಕೊಟ್ಟರು.

ಟೀಕೆ ಮಾಡುವ ಮುಂಚೆ ನಿಮ್ಮ ಪಕ್ಷದ ಅವಸ್ಥೆ ಏನಿದೆ ಅಂತ ತಿಳಿದುಕೊಳ್ಳಿ. ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲಾಗಿಲ್ಲ. ಅವರಿಗೆ ಸಹಿಸಲು ಆಗುತ್ತಿಲ್ಲ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಫೆಕ್ಟ್ ಆಗ್ತಾ ಇದೆ. ಬಿಜೆಪಿಯವರಿಗೆ ಢವಢವ ಶುರುವಾಗಿದೆ. ಏನಾದರೂ ಮಾಡಬೇಕು ಎಂದು ಮಾತನಾಡೋಕೆ ಶುರು ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಟೀಕಿಸಿದರು.

ಕ್ಲಬ್, ಬಾರ್‌ಗಳಿಗೆ ಇಡೀ ರಾತ್ರಿ ಪರವಾನಿಗೆ ನೀಡಲಾಗಿದೆ ಎಂಬ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್, ಸಾಮಾನ್ಯವಾಗಿ ಇರುವ ಸಮಯವನ್ನೇ ಈಗಲೂ ಮುಂದುವರಿಸಲಾಗಿದೆ.‌ ಟೀಕೆ ಮಾಡುವ ಸಲುವಾಗಿ ಹೀಗೆಲ್ಲ ಹೇಳಿದರೇ ಹೇಗೆ..? ನಿಮ್ಮ ಸರ್ಕಾರದಲ್ಲಿ ನಡೆದಿಲ್ವಾ ಹೀಗೆಲ್ಲ..? ಸರ್ಕಾರದ ಅವ್ಯವಸ್ಥೆಯನ್ನು ಎಲ್ಲಿಲ್ಲಿ ಹೇಳಬೇಕಿದೆ ಅಲ್ಲಿ ಹೇಳಿದ್ದೇವೆ. ಅವತ್ತು ಮಾಡಿದ ತಪ್ಪನ್ನು ಇವತ್ತು ಸಹ ಹೇಳಲು ಧೈರ್ಯ ಇದೆ ಎಂದು ಅವರು ಹೇಳಿದರು.

ಕೊನೆಯ ಮೂರನಾಲ್ಕು ತಿಂಗಳಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಮಂಜೂರು ಮಾಡಿದರು, ಟೆಂಡರ್ ಕರೆದರು. ಅದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆನೇ ಇರಲಿಲ್ಲ. ಸಿದ್ದರಾಮಯ್ಯ ಎಲ್ಲಾ ರೀತಿಯಾಗಿ ಲೆಕ್ಕಾಚಾರ ಮಾಡಿ 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಧಾರವಾಡ ಜಿಲ್ಲೆ ಅಷ್ಟೇ ಅಲ್ಲಾ ಇಡೀ ರಾಜ್ಯದಲ್ಲಿ ಬಿಜೆಪಿಗೆ ಮನೆಯ ಯಜಮಾನನಿಲ್ಲ. ನಾನು ಪ್ರವಾಸ ಹೋದಲ್ಲೆಲ್ಲ ಬಿಜೆಪಿಯ ನೊಂದಂತವರು ನನಗೆ ವ್ಯಯಕ್ತಿಕವಾಗಿ ಭೇಟಿ ಆಗಿದ್ದಾರೆ. ಏನು ಮಾಡಬೇಕು ಅಂತ ಗೊಂದಲದಲ್ಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸೇರ್ತಾರಾ ಮುನೇನಕೊಪ್ಪ ಎಂಬ ವಿಚಾರವಾಗಿ ಮಾತನಾಡಿದ ಜಗದೀಶ್‌ ಶೆಟ್ಟರ್‌, ಮುನೇನಕೊಪ್ಪ ಅವರೊಂದಿಗೆ ವೈಯಕ್ತಿಕವಾಗಿ ಚರ್ಚೆ ಮಾಡಿಲ್ಲ. ಚರ್ಚೆ ಮಾಡದೇ ಅವರ ನಿರ್ಧಾರ ನಾವು ಹೇಳೋಕೆ ಸಾಧ್ಯ ಇಲ್ಲ. ಇಡೀ ರಾಜ್ಯದಲ್ಲಿ ಇದೆ ಪರಿಸ್ಥಿತಿ ಇದೆ. ಅವರೊಂದಿಗೆ ಮಾತುಕತೆ ಮಾಡಿ ನೋಡೋಣ. ಬಿಜೆಪಿ ಅಧೋಗತಿಗೆ ಹೋಗುತ್ತಿದೆ. ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಚುನಾವಣೆಯಲ್ಲಿ ಸಾಕಷ್ಟು ಬಾರಿ ಸೋತಿದ್ದೇವೆ. ಆದರೆ ಈ ರೀತಿ ಸ್ಮಶಾನ ಮೌನ ಇರಲಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

 

Related posts

ಅಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತೆ ಉತ್ತರಿಸಲಿ – ಬಿಎಲ್ ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು.

ಆ.30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ- ಹೆಚ್.ಎಸ್. ಸುಂದರೇಶ್

ಚಿಕ್ಕಬಳ್ಳಾಪುರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ.