ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ- ಮಂಜುನಾಥ್

ಶಿವಮೊಗ್ಗ: ಶುದ್ಧಆಮ್ಲಜನಕಎಲ್ಲರಿಗೂದೊರೆಯಲು ಹೆಚ್ಚು ಹೆಚ್ಚು ಸಸಿಗಳನ್ನು ನೆಡುವಜತೆಯಲ್ಲಿ ಪೋಷಣೆ ಮಾಡಬೇಕು. ಜಾಗತಿಕತಾಪಮಾನಕಡಿಮೆ ಮಾಡುವದೃಷ್ಠಿಯಿಂದಲೂ ಪರಿಸರ ಸಂರಕ್ಷಣೆ ನಮ್ಮೆಲ್ಲರಕರ್ತವ್ಯಎಂದು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹೇಳಿದರು.
ಶಿವಮೊಗ್ಗ ನಗರದ ಶುಶ್ರೂಷಕರಕ್ವಾಟರ್ಸ್‍ನಲ್ಲಿಇನ್ನರ್‍ವ್ಹೀಲ್ ಶಿವಮೊಗ್ಗ ಪೂರ್ವ ಹಾಗೂ ಶರಾವತಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ವನ ಮಹೋತ್ಸವಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ನಗರೀಕರಣದಯೋಜನೆಯಿಂದಕಾಂಕ್ರೀಟ್ ಪರಿಸರ ನಿರ್ಮಾಣಆಗುತ್ತಿದ್ದು, ಪರಿಸರ ಮರೆಯಾಗುತ್ತಿದೆ.ನಗರ ಪ್ರದೇಶಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಹೆಚ್ಚು ಹೆಚ್ಚು ಸಸಿಗಳನ್ನು ನೆಡಬೇಕುಎಂದು ತಿಳಿಸಿದರು.
ಇನ್ನರ್‍ವ್ಹೀಲ್‍ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಾಯು ಮಾಲಿನ್ಯವು ಹೆಚ್ಚಾಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಇದರಿಂದ ಪರಿಸರತುಂಬಾ ಹಾನಿಯಾಗುತ್ತದೆ.ಎಲ್ಲರೂಜಾಗೃತರಾಗಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕುಎಂದು ಹೇಳಿದರು.
ಇನ್ನರ್‍ವ್ಹೀಲ್ ಶಿವಮೊಗ್ಗ ಪೂರ್ವಅಧ್ಯಕ್ಷೆ ಶ್ವೇತಾ ಆಶಿತ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ಬೇರೆ ಬೇರೆ ಬಡಾವಣೆಗಳಲ್ಲಿ ಸಸಿಗಳನ್ನು ನೆಡುವಜತೆಯಲ್ಲಿ ಪೋಷಿಸುವ ಕೆಲಸ ಮಾಡಲಾಗುತ್ತಿದೆ.ಪ್ರತಿಯೊಬ್ಬರುಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಸಿ ನೆಡುವಜತೆಯಲ್ಲಿ ಪೋಷಣೆ ಮಾಡುವಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಅರಣ್ಯ ಇಲಾಖೆ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್‍ಅವರಿಗೆ ಅಭಿನಂದಿಸಿ ಗೌರವಿಸಲಾಯಿತು.ಡಾ. ಕಡಿದಾಳ್ ಗೋಪಾಲ್, ಇನ್ನರ್‍ವ್ಹೀಲ್ ಶಿವಮೊಗ್ಗ ಕಾರ್ಯದರ್ಶಿ ವಾಗ್ದೇವಿ ಬಸವರಾಜ್, ಬಿಂದು ವಿಜಯ್‍ಕುಮಾರ್, ವೀಣಾ ಹರ್ಷ, ಪುಷ್ಪಾ ಶೆಟ್ಟಿ, ವಿಜಯರಾಯ್ಕರ್, ಸುಮಾ ಮಂಜುನಾಥ್, ಅನೂಪ್, ಕೆ.ಜಿ.ರಾಮಚಂದ್ರರಾವ್, ಸೀತಾ ಲಕ್ಷ್ಮೀ, ರೋಟರಿ ಮಾಜಿ ಸಹಾಯಕಗವರ್ನರ್ ಜಿ.ವಿಜಯ್‍ಕುಮಾರ್, ಮಧುರಾ ಮಹೇಶ್, ಪೂರ್ಣಿಮಾ ನರೇಂದ್ರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಬಡ ದಲಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಿ: ದಸಂಸ ಪ್ರತಿಭಟನೆ.

ಚಂದ್ರಯಾನ-3 ಬಗ್ಗೆ ವ್ಯಂಗ್ಯ: ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಪ್ರಕರಣ ದಾಖಲು.

ಒಂದೇ ಕಡೆ 10 ವರ್ಷ ಪೂರೈಸಿದ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಸಿದ್ಧತೆ.