ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇ-ಎಫ್.ಐ.ಆರ್ ಮತ್ತು ಇ-ಚಲನ್ ವ್ಯವಸ್ಥೆ..

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇ-ಎಫ್.ಐ.ಆರ್ ಮತ್ತು ಇ-ಚಲನ್  ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ.

ಇ-ಎಫ್ಐಆರ್, ಇ-ಚಲನ್ ಹಾಗೂ “ಆಂಟಿ ಫೋರೆನ್ಸಿಕ್ಸ್” ವಿಷಯದಲ್ಲಿ ಅಭಿವೃದ್ಧಿಪಡಿಸಿದ ತಾಂತ್ರಿಕ ಸಂಶೋಧನಾ ವರದಿಗೆ  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಚಾಲನೆ ನೀಡಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹೊಸದಾಗಿ ಪರಿಚಯಿಸುತ್ತಿರುವ ಕಳುವಾದ ವಾಹನಗಳ ಶೀಘ್ರ ಪತ್ತೆಗಾಗಿ ಇ-ಎಫ್ಐಆರ್ ಸೌಲಭ್ಯವನ್ನು ಅಭಿವೃದ್ದಿಪಡಿಸಲಾಗಿದ್ದು, ಕರ್ನಾಟಕ ರಾಜ್ಯ ಪೊಲೀಸ್  ಅಧಿಕೃತ ಜಾಲತಾಣ  https://ksp karnataka.gov.in/ ಸಿಟಿಜನ್ ಡೆಸ್ಕ್ ಅಡಿಯಲ್ಲಿರುವ ನಾಗರಿಕ ಕೇಂದ್ರಿತ ತಾಣದಲ್ಲಿ ನೋಂದಾಯಿತರಾಗಿ ಲಾಗಿನ್ ಮಾಡಿ ಮೋಟಾರು ವಾಹನ ಕಳುವಿಗೆ ಸಂಬಂಧಪಟ್ಟಂತೆ ಇ-ಎಫ್ಐಆರ್ ದಾಖಲಿಸಬಹುದು.

ಇ-ಎಫ್ಐಆರ್ ನಿಂದ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡುವುದು ತಪ್ಪುತ್ತದೆ ಮತ್ತು ಅನ್ ಲೈನ್ ನಲ್ಲಿ ವರದಿ ಮಾಡುವುದರಿಂದ ತನಿಖೆಯ ಪ್ರಾರಂಭದ ವೇಗವನ್ನು ಹೆಚ್ಚಿಸುತ್ತದೆ. ಇದೊಂದು ಕಾಗದರಹಿತ ಪರಿಸರ ಸೇವೆಯಾಗಿರುತ್ತದೆ.

ನಾಗರಿಕರು ಈ ವ್ಯವಸ್ಥೆಯಲ್ಲಿ, ತಮ್ಮ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೋಟೋ ಮತ್ತು ದಾಖಲಾತಿಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಸಾಧ್ಯವಾಗುತ್ತದೆ. ನಾಗರಿಕರ ವೈಯುಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ಡೇಟಾ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಭದ್ರತಾ ಕ್ರಮಗಳನ್ನ ಕೈಗೊಂಡಿರುತ್ತದೆ. ಇದು ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದರ ಜೊತೆಗೆ ನಾಗರಿಕರು ಮತ್ತು ಪೆÇಲೀಸ್ ಇಲಾಖೆಯ ನಡುವೆ ವಿಶ್ವಾಸವನ್ನು ಹೆಚ್ಚಿಸುತ್ತದೆ.

ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆ, ಮತ್ತು ಸಂಚಾರ ಪೊಲೀಸ್ ಠಾಣೆಗಳಲ್ಲಿ ಇ-ಚಲನ್ ವವಸ್ಥೆಯನ್ನು ಅಳವಡಿಸಲಾಗಿದೆ. ಇ-ಚಲನ್ ವ್ಯವಸ್ಥೆಯು ಪಾರದರ್ಶಕತೆ ಮತ್ತು ಡಿಜಿಟಲೀಕರಣವನ್ನು, ಹೊಸ ಹಂತಕ್ಕೆ ಕೊಂಡೊಯ್ಯುತ್ತದೆ. ಒಟ್ಟು 700 ವಸರ್ನಲ್ ಡಿಜಿಟಲ್ ಅಸಿಸ್ಟೆಂಟ್ (ಪಿಡಿಎ) ಉಪಕರಣಗಳು ರಾಜ್ಯಾದ್ಯಂತ ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆ, ಪೆÇಲೀಸ್ ಠಾಣೆಗಳಿಗೆ ತಲಾ 02 ಉಪಕರಣಗಳು ಹಾಗೂ ಸಂಚಾರ ಪೊಲೀಸ್ ಠಾಣೆಗಳಿಗೆ ತಲಾ 05 ಉಪಕರಣಗಳನ್ನು ಸದರಿ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗುತ್ತದೆ.

ಡಿಜಿಟಲ್ ಸಂಚಾರ ದಂಡ ವಸೂಲಾತಿಯನ್ನು ರಾಜ್ಯದ ಮೂಲೆ ಮೂಲೆಗಳಿಗೂ ವಿಸ್ತರಿಸುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ, ಮೊದಲ ರಾಜ್ಯವಾಗಿದೆ. ಇ-ಚಲನ್ ವ್ಯವಸ್ಥೆ ಸರ್ಕಾರದ ಖಜಾನೆಯೊಂದಿಗೆ ಸಂಯೋಜನೆಗೊಳಿಸುವಲ್ಲಿ ಕರ್ನಾಟಕ ರಾಜ್ಯವು ಮೊದಲ ರಾಜ್ಯವಾಗಲಿದೆ. ಕಾರ್ಡ್ ಮತ್ತು ಯುಪಿಐ ಬಳಸಿ ಸಂಗ್ರಹಿಸಿದ ದಂಡದ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಖಜಾನೆಗೆ ವರ್ಗಾಯಿಸಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 2500 ಸಂಖ್ಯೆಯ ಪಿಡಿಎ ಉಪಕರಣಗಳು ಪ್ರಾಯೋಜಿಸಲು ಮುಂದೆ ಬಂದಿರುತ್ತಾರೆ. ಕರ್ನಾಟಕ ರಾಜ್ಯ ಖಜಾನೆಯವರು ಸದರಿ 2500 ಸಂಖ್ಯೆಯ ಉಪಕರಣಗಳನ್ನು ಪೆÇಲೀಸ್ ಇಲಾಖೆಗೆ ನೀಡಿರುತ್ತಾರೆ. 2500 ಸಂಖ್ಯೆಯ ಪಿಡಿಎ ಉಪಕರಣಗಳ ಹಂಚಿಕೆ ಕುರಿತು ಖಜಾನೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವೆ ತಿಳುವಳಿಕೆಯ ಒಪ್ಪಂದಕ್ಕೆ (ಮನೋರಾಂಡಮ್ ಆಪ್ ಅಂಡರ್ ಸ್ಟ್ಯಾಂಡಿಂಗ್) ಸಹಿ ಮಾಡಲಾಗಿರುತ್ತದೆ.

ಅಸ್ತಿತ್ವದಲ್ಲಿರುವ ಇ-ಚಲನ್ ವ್ಯವಸ್ಥೆಯು ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸಂಚಾರ ದಂಡ ಪಾವತಿ ಮಾಡಲು ತಮ್ಮ ಕಾರ್ಡ್ ಹಾಗೂ ಯುಪಿಐ ಬಳಸುವ ಸೌಲಭ್ಯವನ್ನು ಒದಗಿಸುತ್ತದೆ. ಸದರಿ ಆನ್ಲೈನ್ ವ್ಯವಸ್ಥೆಯ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ಫೆÇೀನ್ಗಳು, ಲ್ಯಾಪ್ಟಾಪ್ಗಳು ಅಥವಾ ಇತರ ಡಿಜಿಟಲ್ ಸಾಧನೆಗಳಲ್ಲಿ ಬಾಕಿ ಇರುವ ತಮ್ಮ ದಂಡ ಪಾವತಿಯ ಮಾಹಿತಿ ಕುರಿತು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಸಂಚಾರಿ ದಂಡ ಪಾವತಿಗಳನ್ನು ಸುಲಭಗೊಳಿಸುವುದು ಮಾತ್ರವಲ್ಲದೆ ಸಂಚಾರಿ ದಂಡಗಳ ಸಂಗ್ರಹಣೆಯಲ್ಲಿ ಪಾರದರ್ಶಕತೆಯನ್ನೂ ಹೆಚ್ಚಿಸುವುದೇ ಸದರಿ ಇ-ಚಲನ್ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲಿ ಆರಂಭಿಸಿರುವ ಕಟ್ಟಕಡೆಯ ಉದ್ದೇಶವಾಗಿದೆ. ಸದರಿ ಇ-ಚಲನ್ ವ್ಯವಸ್ಥೆಯನ್ನು ನವೆಂಬರ್ 01 ರ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯದೆಲ್ಲೆಡೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ, ಸೈಬರ್ ಪೊರೆನ್ಸಿಕ್ಸ್ ಕಾರ್ಯ ಕ್ಷೇತ್ರದಲ್ಲಿರುವ ಸಮಕಾಲೀನ ಬೆಳವಣಿಗೆಗಳನ್ನು ಪರಿಗಣಿಸಿ ಅಪರಾಧ ನ್ಯಾಯ ವ್ಯವಸ್ಥೆಯ ಅಂಗಗಳಾದ ಪೆÇಲೀಸ್, ಅಭಿಯೋಜನೆ ಹಾಗೂ ನ್ಯಾಯಾಂಗ ಇಲಾಖೆಯವರಿಗೆ ವಿಸ್ತøತ ಮತ್ತು ಪ್ರಾಯೋಗಿಕ ಅಂಶಗಳನ್ನೊಳಗೊಂಡ ಅಮೂಲ್ಯವಾದ ಕೈಪಿಡಿಯಾಗಿ ಈ ವರದಿಯನ್ನು ಬಳಸಬಹುದಾಗಿದೆ.

 

Related posts

ಆದಿವಾಸಿ ಸಮುದಾಯದ ಪುನರುಜ್ಜೀವನಕ್ಕೆ ಬಿರ್ಸಾಮುಂಡಾ ಅವರ ಕೊಡುಗೆ ಮಹತ್ವದ್ದು – ಶಾಸಕ ತಮ್ಮಯ್ಯ

ಕಥಾ ಕಮ್ಮಟಗಳು ಪ್ರತಿಭೆಗಳನ್ನು ಅನಾವರಣಗೊಳಿಸುತ್ತವೆ-ಬಿ.ಕೃಷ್ಣಪ್ಪ

ಪರಿಸರವನ್ನು ಸರ್ವನಾಶ ಮಾಡುತ್ತಿರುವ ಆರೋಪ: ಶಾಹಿ ಗಾರ್ಮೆಂಟ್ಸ್ ವಿರುದ್ಧ ಪ್ರತಿಭಟನೆ.