ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಕೋಟ್ಯಾಂತರ ರೂ.ಮೌಲ್ಯದ ಡ್ರಗ್ಸ್ ಜಪ್ತಿ: ಮೂವರು ವಿದೇಶೀಯರು ಸೇರಿ 14 ಮಂದಿ ಅರೆಸ್ಟ್

ಬೆಂಗಳೂರು:   ರಾಜ್ಯರಾಜಧಾನಿ  ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಮೂವರು ವಿದೇಶಿಯರು ಸೇರಿ 14 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 7.83 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು, ಪೊಲೀಸರು ವಿವಿಧ ಮಾದರಿಯ ಡ್ರಗ್ಸ್​ ಜಪ್ತಿ ಮಾಡಿದ್ದಾರೆ. ಆರೋಪಿಗಳು ಮುಂಬೈ ಸೇರಿ ವಿದೇಶಗಳಿಂದ ಡ್ರಗ್ಸ್ ತಂದು ಮಾರುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರು ಸಿಸಿಬಿ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ನಡೆದಿದೆ. ಡ್ರಗ್ಸ್ ಕಳವಳಕಾರಿ ಅಂಶ ಆಗಿದ್ದು, ಜನರಿಗೆ ಸೇರಲಿರು ಡ್ರಗ್ ನ್ನ ವಶಕ್ಕೆ‌ ಪಡೆದು ನಾಶಪಡಿಸಲಾಗುವುದು. ವಿದ್ಯಾರಣ್ಯ ಪುರ, ಬನಶಂಕರಿ, ಕಾಟನ್ ಪೇಟೆ ಸೇರಿ 7 ಕೇಸ್​ಗಳನ್ನ ದಾಖಲಿಸಲಾಗಿದೆ. ಒಟ್ಟು 7.83 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿಲಾಗಿದ್ದು,  ಏಳು ಪ್ರತ್ಯೇಕ ಪ್ರಕರಣ ದಾಖಲು ಮಾಡಿ 14 ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳಿಂದ ಒಟ್ಟು ಎಂಟು ಮಾದರಿಯ ವಿವಿಧ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೆಫೆಡ್ರೌನ್ ಎಂಬ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ದಯಾನಂದ್ ಅವರು ತಿಳಿಸಿದರು.

Related posts

ಮರ್ಯಾದಾ ಹತ್ಯೆ:  ಮಗಳನ್ನೆ ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾದ ತಂದೆ.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮಕ್ಕೆ  ಚಾಲನೆ ನೀಡಿದ ಸಿಎಂ ಸಿದ್ಧರಾಮಯ್ಯ

ರಾಜ್ಯದಲ್ಲಿ ಬರಗಾಲ: ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಆಗ್ರಹ.