ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಆರ್.ಎಸ್. ವರುಣ್ ಕುಮಾರ್ ಗೆ ಸ್ಥಾನ.

ಶಿವಮೊಗ್ಗ: ಶಿವಮೊಗ್ಗ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಸ್ಟ್ಯಾನ್ ಫೆÇೀರ್ಡ್ ವಿಶ್ವವಿದ್ಯಾನಿಲಯ ಸಿದ್ಧಪಡಿಸಿದ ಪಟ್ಟಿಯಲ್ಲಿ ಶಿವಮೊಗ್ಗದ ಡಾ.ಆರ್.ಎಸ್. ವರುಣ್ ಕುಮಾರ್ ಸ್ಥಾನ ಪಡೆದಿದ್ದಾರೆ.
ದಾವಣಗೆರೆ ವಿವಿಯ ಪೆÇ್ರ. ಬಿ.ಸಿ ಪ್ರಸನ್ನ ಕುಮಾರ ಅವರ ಮಾರ್ಗ ದರ್ಶನದಲ್ಲಿ ಗಣಿತಶಾಸ್ತ್ರದ ಸಂಶೋ ಧನಾರ್ಥಿಯಾದ ಡಾ.ಆರ್. ಎಸ್.ವರುಣ್‍ಕುಮಾರ್ ಅಮೇರಿ ಕಾದ ಪ್ರತಿಷ್ಠಿತ ಸ್ಟ್ಯಾನ್ ಫೆÇೀರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 2022 ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಶಿವಮೊಗ್ಗದ ಪತ್ರಕರ್ತ, ಲೇಖಕ ಎನ್.ರವಿಕುಮಾರ್(ಟೆಲೆಕ್ಸ್ ರವಿ) ಮತ್ತು ಶಶಿಕಲಾ ದಂಪತಿಯ ಪುತ್ರರಾದ ಡಾ.ಆರ್.ಎಸ್. ವರುಣ್‍ಕುಮಾರ್ ಗಣಿತಶಾಸ್ತ್ರದ “ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ” ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು.ಪ್ರಸ್ತುತ ಬೆಂಗಳೂರಿನ ಅಮೃತಾನಂದಮಯಿ ವಿಶ್ವವಿದ್ಯಾ ಪೀಠಂನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿ ಸಂಶೋಧನೆಯಲ್ಲಿ ತೊಡಗಿ ದ್ದಾರೆ.
ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ. ಆರ್.ಎಸ್.ವರುಣ್‍ಕುಮಾರ್ ರವರನ್ನು ದಾವಣಗೆರೆ ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪೆÇ್ರ ಬಿ.ಡಿ. ಕುಂಬಾರ ಮತ್ತು ಆಡಳಿತ ವರ್ಗ ಹಾಗೂ ಅಮೃತಾನಂದಮಯಿ ವಿಶ್ವ ವಿದ್ಯಾಪೀಠಂನ ಕುಲಪತಿಗಳಾದ ಶ್ರೀಮಾತಾ ಅಮೃತಾನಂದಮಯಿದೇವಿ ಅಭಿನಂದಿಸಿದ್ದಾರೆ.

Related posts

2024ರ ಲೋಕಸಭೆ ಚುನಾವಣೆ: ಒಟ್ಟಾಗಿ ಹೋರಾಡಲು INDIA ಮೈತ್ರಿಕೂಟ ನಿರ್ಧಾರ.

ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ- ಕ್ಲೀನ್ ಚಿಟ್ ನೀಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಇಂದು ಚಂದ್ರನ ಅಂಗಳಕ್ಕೆ ಚಂದ್ರಯಾನ-3: ಯಶಸ್ವಿ ಲ್ಯಾಂಡಿಂಗ್‌ ಗಾಗಿ ದೇಶಾದ್ಯಂತ ವಿಶೇಷ ಪೂಜೆ ಪುನಸ್ಕಾರ, ಪ್ರಾರ್ಥನೆ..