ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಮಾರ್ಗದರ್ಶನ ಅಗತ್ಯ-ಡಾ. ದಿನೇಶ್

ಶಿವಮೊಗ್ಗ: ಯುವತಿಯರು ಆರೋಗ್ಯ ಕುರಿತು ಯಾವುದೇ ರೀತಿಯ ಸಮಸ್ಯೆಗಳಿದ್ದರೂ ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ದಿನೇಶ್ ಹೇಳಿದರು.

ದೇಶಿಯ ವಿದ್ಯಾಶಾಲಾ‌ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಸಿಂಗಾರ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ ಜಿಲ್ಲಾ ಶಾಖೆ , ಮಹಿಳಾ ಸಬಲೀಕರಣ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ “ಆರೋಗ್ಯ ಮತ್ತು ನೈರ್ಮಲ್ಯ” ಕುರಿತು ವಿಶೇಷ ಉಪನ್ಯಾಸ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವತಿಯರು ಪ್ರೌಢಾವಸ್ಥೆ ಸಂದರ್ಭದಲ್ಲಿ ದೇಹದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇಂತಹ ವೇಳೆಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕಾಲ ಕಾಲಕ್ಕೆ ಅನುಸರಿಸಬೇಕಾದ ವೈದ್ಯಕೀಯ ಕ್ರಮಗಳ ಬಗ್ಗೆ ತಿಳವಳಿಕೆ ಹೊಂದಬೇಕು ಎಂದು ಮಾಹಿತಿ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕವು ಪ್ರತಿ ತಿಂಗಳು ಕಾಲೇಜುಗಳಲ್ಲಿ ಆಪ್ತ ಸಮಾಲೋಚನಾ ಶಿಬಿರ ನಡೆಸಲು ಸಿದ್ದವಿದೆ. ಪ್ರೌಢಾವಸ್ಥೆಯಲ್ಲಿ ಎದುರಿಸಬೇಕಾದ ವೈಯುಕ್ತಿಕ ದೈಹಿಕ ಸಮಸ್ಯೆಗಳಿಗೂ ಆಪ್ತ ಸಮಾಲೋಚನೆಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸುಬ್ಬಯ್ಯ ಮೆಡಿಕಲ್ ಕಾಲೇಜು ಸ್ತ್ರೀ ರೋಗ ತಜ್ಞೆ ,  ಆಪ್ತ ಸಮಾಲೋಚಕಿ ಡಾ. ಮಾಧುರ್ಯ ಜಯಚಂದ್ರ
ಮಾತನಾಡಿ, ಯುವತಿಯರು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವನೆ ಹಾಗೂ ಒಳ್ಳೆಯ ಜೀವನಶೈಲಿ ರೂಢಿಸಿಕೊಳ್ಳಬೇಕು.  ಫಾಸ್ಟ್ ಫುಡ್ ಆಹಾರ ಸೇವನೆಯಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು ಎಂದು ಹೇಳಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿನಿಯರು ಆರೋಗ್ಯದ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ ಆಪ್ತ ಸಮಾಲೋಚಕರ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ವಿದ್ಯಾರ್ಥಿನಿಯರಿಗೆ ಆಯೋಜಿಸಿರುವ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ‌ ನೀಡಿದರು.

ಮಹಿಳಾ ಸಬಲೀಕರಣ ಘಟಕ ಸಂಚಾಲಕಿ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಕೆ.ಸಾವಿತ್ರಿ , ಐಕ್ಯೂ ಎಸಿ ಘಟಕದ ಸಂಚಾಲಕ ಎನ್.ಕುಮಾರಸ್ವಾಮಿ , ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಪ್ರೊ. ಕೇತನಾ ಆರ್ತಿ ಮತ್ತಿತರರು ಉಪಸ್ಥಿತರಿದ್ದರು.

Related posts

ವಿನೂತನ ಚಟುವಟಿಕೆಗಳಿಂದ ರಾಜ್ಯ ಮಟ್ಟದ ಅತ್ಯುತ್ತಮ  ಗರಿ ಮುಡಿಗೇರಿಸಿದೆ ಶಿವಮೊಗ್ಗ ಐಎಂಎ ಶಾಖೆ

ಹೊಸಮನೆಯಲ್ಲಿ ಐ ಮಾಸ್ಟ್ ದೀಪಗಳ ಉದ್ಘಾಟನೆ.

ದಿ:ಬಂಗಾರಪ್ಪನವರ 90ನೇ ಹುಟ್ಟುಹಬ್ಬ ವಿಶೇಷ ಲೇಖನ: ಬಡವರನ್ನು ಕಂಡರೆ ಅವರ ಮನ ಮಿಡಿಯುತ್ತಿತ್ತು….