ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನೆಹರೂ ಕ್ರೀಡಾಂಗಣದಲ್ಲಿ  ದೈಹಿಕ ಶಿಕ್ಷಣ ಶಿಕ್ಷಕರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ 

ಶಿವಮೊಗ್ಗ:   ಶಿವಮೊಗ್ಗ ಬ್ರಿಲಿಯಂಟ್ ಎಜುಕೇಶನ್ ಸೊಸೈಟಿ (ರಿ )ಶಿವಮೊಗ್ಗ. ಕಿದ್ವಾಯಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಆರ್. ಎಂ. ಎಲ್. ನಗರ ಶಿವಮೊಗ್ಗ.ಹಾಗೂ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ “ದೈಹಿಕ ಶಿಕ್ಷಣ ಶಿಕ್ಷಕರ ವಾಲಿಬಾಲ್ ಪಂದ್ಯಾವಳಿ  2023 — 24 ”   ಪುರುಷರ  ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ  ಆಯೋಜಿಸಲಾಗಿದ್ದು,

 ಈ ಕ್ರೀಡಾ ಕೂಟವನ್ನು ಒಂದು ದಿನದ ಮಟ್ಟಿಗೆ ದಿನಾಂಕ : 08/10/2023 ರಂದು ಶಿವಮೊಗ್ಗ ಜಿಲ್ಲೆಯ ಸರ್ಕಾರಿ,ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ  ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ  ಅಂದು  03 ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗುವವು.ಪ್ರಥಮ ಬಾರಿಗೆ, ಜಿಲ್ಲೆಯ ದೈಹಿಕ ಶಿಕ್ಷಣ ಮಿತ್ರರಿಗೆ  ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಇನ್ನೊಂದು ವಿಶೇಷವಾಗಿದೆ.

ವಾಲಿಬಾಲ್ ನಲ್ಲಿ ವಿಜೇತ ಕ್ರೀಡಾಪಟುಗಳಿಗೆ ,   ಪಾರಿತೋಷಕ ದೊಂದಿಗೆ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.

 ಪಂದ್ಯಾವಳಿಯು ದಿನಾಂಕ :08/ 10/ 2023 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ  ನಡೆಯಲಿದ್ದು, ಆಟಗಾರರ ಅನುಕೂಲಕ್ಕಾಗಿ ಎರಡು ಅಂಕಣಗಳನ್ನು ಸಿದ್ದಪಡಿಸಲಾಗಿದೆ.  ನುರಿತ ವಾಲಿಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲಾ ಕ್ರೀಡಾ ಪಟುಗಳಿಗೂ ಸಂಜೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ನಿಬಂಧನೆಗಳು :1) ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು.
2) ಒಂದು ತಂಡದಲ್ಲಿ 7 ಜನ ಕ್ರೀಡಾ ಪಟುಗಳು ಮತ್ತು ಒಬ್ಬರು ಸಾಮಾನ್ಯ ಶಿಕ್ಷಕರಿಗೆ ಭಾಗವಹಿಸಲು ಅವಕಾಶ ವಿರತ್ತದೆ.
3) ಕಡ್ಡಾಯವಾಗಿ ಶಾಲಾ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾಗಿರಬೇಕು. ಅಂತವರಿಗೆ ಮಾತ್ರ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ, ಗುರುತಿನ ಚೀಟಿ ತರಬೇಕು.
4) 6.10.2023ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ ಎಂದು  ಕ್ರೀಡಾ ಕೂಟದ ಸಂಚಾಲಕರಾದ ರಘು ಎಲ್. ಎಸ್. ಪತ್ರಿಕಾ ಪ್ರಕಟಣೆಯಲ್ಲಿ
ಕೋರಿದ್ದಾರೆ .
ಹೆಚ್ಚಿನ ಮಾಹಿತಿ ಗಾಗಿ, 9902183819 ಗೆ ಸಂಪರ್ಕಿಸಿ.

Related posts

ರಾಜ್ಯದಲ್ಲಿ ಬರಗಾಲ: ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಆಗ್ರಹ.

ನನ್ನ ಮಣ್ಣು, ನನ್ನ ದೇಶ” ಅಭಿಯಾನಕ್ಕೆ ಚಾಲನೆ

ರಾಜಕೀಯ ಪ್ರಚಾರಕ್ಕಾಗಿ ಸೇನೆ ಬಳಸಿಕೊಳ್ಳಲು ಕೇಂದ್ರದಿಂದ ‘ಕೀಳುಮಟ್ಟದ ಪ್ರಯತ್ನ-ಕಾಂಗ್ರೆಸ್ ಆರೋಪ