ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶಾಲೆಯ ಶಿಕ್ಷಕಿ ಟಿ.ನೀಲಾವತಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ.

ಶಿವಮೊಗ್ಗ: ಹೊಸನಗರ ತಾಲೂಕಿನ ಕಾಗೇಮರಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಟಿ.ನೀಲಾವತಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಿಕ್ಕಿದೆ.
ನೀಲಾವತಿ ಅವರು 22 ವರ್ಷಗಳ ಸೇವೆ ಸಲ್ಲಿಸಿದ್ದು, ಮಕ್ಕಳಲ್ಲಿ ಆಟದ ಜೊತೆಗೆ ಪಾಠವನ್ನೂಕೂಡ ಸಮರ್ಥವಾಗಿ ಬೋಧಿಸುತ್ತಾ ಬಂದಿದ್ದಾರೆ. ಎನ್‍ಜಿಒ ಹಾಗೂ ದಾನಿಗಳಿಂದ ತಮ್ಮ ಶಾಲೆಗೆ ಬೇಕಾದ ಪೀಠೋಪಕರಣ ಮುಂತಾದವುಗಳನ್ನು ಕೊಡಿಸಿದ್ದಾರೆ. ಮಕ್ಕಳಲ್ಲಿ ಆರೋಗ್ಯ ಬಗ್ಗೆ ಅರಿವು ಮೂಡಿಸಿದ್ದಾರೆ.
ಶಾಲೆ ಬಿಟ್ಟ ಅನೇಕ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿದ್ದಾರೆ. ಇವರ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಇಂದು ಕುವೆಂಪು ರಂಗಮಂದಿರದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Related posts

ಸಂಭ್ರಮದ ಭೂಮಿ ಹುಣ್ಣಿಮೆ ಆಚರಣೆ

ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ವಿನೋದ್ ಹುಟ್ಟುಹಬ್ಬ: ಅನಾಥರಿಗೆ ಲಘು ಉಪಾಹಾರ ಮತ್ತು ಹಣ್ಣು ವಿತರಣೆ

ಅಲಂಕಾರ ತೆರವುಗೊಳಿಸುವ ವಿಚಾರಕ್ಕೆ ಬಿಗುವಿನ ವಾತಾವರಣ: ಎಸ್ಪಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ.